ನೇರಳಕಟ್ಟೆ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಟಿ.ಕೆ. ರಶೀದ್ ಪರ್ಲೊಟ್ಟು ಆಯ್ಕೆ
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರಳಕಟ್ಟೆ ಇದರ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಪಿ.ಕೆ. ರಶೀದ್ ಪರ್ಲೊಟ್ಟು ಆಯ್ಕೆಯಾದರು.
ನವಂಬರ್ 20ರಂದು ಬುಧವಾರ ಶಾಲಾ ಉರ್ದಿಲಗುತ್ತು ಕೆ. ಇಂದುಹಾಸ ರೈ ಸಭಾಂಗಣದಲ್ಲಿ ನಡೆದ ಎಸ್.ಡಿ.ಎಂ.ಸಿ. ರಚನಾ ಸಭೆಯಲ್ಲಿ ಈ ಆಯ್ಕೆ ನಡೆಯಿತು. ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಕೆ. ಶ್ರೀಧರ ರೈ ಸಭೆಯನ್ನು ಉದ್ಘಾಟಿಸಿದರು. ಸದಸ್ಯರಾದ ಲತೀಫ್ ನೇರಳಕಟ್ಟೆ, ಪ್ರೇಮಾ ಮತ್ತು ಲಕ್ಷ್ಮೀ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಪಿ.ಕೆ. ರಶೀದ್ ಪರ್ಲೊಟ್ಟು, ಉಪಾಧ್ಯಕ್ಷರಾಗಿ ಶಶಿಕಲಾ, ಸದಸ್ಯರುಗಳಾಗಿ ಕೆ. ನಿರಂಜನ್ ರೈ, ಅಬೂಬಕ್ಕರ್ ಎನ್.ಕೆ., ಅತಾವುಲ್ಲಾ ನೇರಳಕಟ್ಟೆ, ಸಾಹುಲ್ ಹಮೀದ್ ಪರ್ಲೊಟ್ಟು, ಚಂದ್ರಶೇಖರ ಪೆರಾಜೆ, ರಶೀದ್ ಪಂತಡ್ಕ, ಮಸೂದ್ ಹಾಜಿ ಕೊಡಾಜೆ, ವೇದಾವತಿ, ಲತಾ, ಸೌಮ್ಯ, ಭಾರತಿ, ಮುನೀರಾ, ಆಯಿಷಾ, ನಝ್ರೀನಾ, ಸಕೀನಾ, ಹಾಗೂ ಅಪ್ಸಾ ಆಯ್ಕೆಯಾದರು.
ಶಾಲಾ ಮುಖ್ಯ ಶಿಕ್ಷಕಿ ಕುಸುಮ ಸ್ವಾಗತಿಸಿ, ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಹ ಶಿಕ್ಷಕಿ ಗೀತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.