ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವ
“ಖಂಡವನ್ನು ಹೊರತುಪಡಿಸಿ, ಹೃದಯಗಳು ಒಟ್ಟಿಗೆ”
ಮಂಗಳೂರು ನಗರದ ಲೂರ್ಡ್ಸ್ ಶಿಕ್ಷಣ ಸಂಸ್ಥೆಯು ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವನ್ನು ಆಚರಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಈ ವಿದ್ಯಾಲಯವು ಉತ್ತಮ ಶಿಕ್ಷಣವನ್ನು ನೀಡುತ್ತಾ, ವಿದ್ಯಾರ್ಥಿಗಳ ಕಲಿಕೆಗೆ ನಿರಂತರ ಪ್ರೋತ್ಸಾಹವನ್ನು ನೀಡಿ ಪ್ರಗತಿ ಪಥದತ್ತ ಸಾಗುತ್ತಲಿದೆ. ಮಕ್ಕಳಲ್ಲಿ ಮೌಲ್ಯಾದಾರಿತ ಶಿಕ್ಷಣವನ್ನು ರೂಪಿಸಿ, ಅಗತ್ಯಕ್ಕೆ ತಕ್ಕಂತೆ ಸಂಸ್ಕಾರಗಳೊಂದಿಗೆ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಾ ಸಾಗುತ್ತಿದೆ. ಇದರಿಂದ ಅವರು ಜವಾಬ್ದಾರಿಯುತ ನಾಗರಿಕನಾಗಲು, ಉತ್ತಮ ರಾಷ್ಟ್ರವನ್ನು ರೂಪಿಸಲು ಪ್ರೇರಣೆಯನ್ನು ನೀಡುವುದು. ಪೋಷಕರು ತಮ್ಮ ಮಕ್ಕಳ ಕಲಿಕೆಗೆ ಉತ್ತೇಜನ ನೀಡುವುದರ ಜೊತೆಗೆ ಅವರ ಚಟುವಟಿಕೆಗಳತ್ತ ಗಮನ ಹರಿಸಿ. ಅವರಿಗಾಗಿ ನಿರ್ದಿಷ್ಟ ಸಮಯವನ್ನು ನಿತ್ಯವೂ ಮೀಸಲಿಡಿ, ಆ ಮೂಲಕ ಮಕ್ಕಳು ಮನೆ ಮನೆಯ ನಂದಾದೀಪಗಳಾಗುವರು ಎಂದು ತ್ರೀಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಪ್ರಭಾ ಎಮ್. ಕರೆ ನೀಡಿದರು. ಅವರು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಆಯೋಜಿಸಿದ ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದರು.
“ನಿಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನೀಡಿ ಬೆಳೆಸಿರಿ. ಮಕ್ಕಳ ಮನಸು ಮುಗ್ದವಾಗಿದ್ದು ಅದಕ್ಕೆ ನೀಡಿದ ರೂಪವನ್ನು ಆ ಮನಸ್ಸು ಪಡೆಯುತ್ತದೆ. ನಮ್ಮ ವಿದ್ಯಾಲಯವು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಸದಾ ಮುಂಚೂಣಿಯಲಿರುತ್ತದೆ. ನಮ್ಮ ವಿದ್ಯಾಲಯವು ಆಧುನಿಕ ತಂತ್ರಜ್ಞಾನದೊಂದಿಗೆ ವಿವಿಧ ಕೌಶಲ್ಯಾಧಾರಿತ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ನೀಡುತ್ತಾ ಬೆಳೆಯುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಆಧುನಿಕ ತಂತ್ರಜ್ಞಾನ, ಸುರಕ್ಷತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಗೆ ಅವಕಾಶ ನೀಡಿ, ಉತ್ತಮ ಕಲಿಕೆಯೊಂದಿಗೆ ಸಮಾಜ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನೈತಿಕ ಹಾಗೂ ನೀತಿಯುತವಾಗಿ ಬೆಳೆದು ಜವಾಬ್ದಾರಿಯುತ ನಾಯಕರಾಗಿ ಬೆಳೆಯಿರಿ”ಎಂದು ಶಾಲೆಯ ಸಂಚಾಲಕ ವಂದನೀಯ ಫಾದರ್ ಡಾ. ಜಾನ್ ಬ್ಯಾಪ್ಟಿಸ್ಟ್ ಸಲ್ಡಾನಾ ಸಂದೇಶ ನೀಡಿದರು.
ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಜಾನ್ಸನ್ ಎಲ್. ಸಿಕ್ವೇರಾ ವಾರ್ಷಿಕ ವರದಿಯ ಪಕ್ಷಿನೋಟವನ್ನು ಬೀರಿದರು. ವೇದಿಕೆಯಲ್ಲಿ ಬಿಜೈ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಅಶೋಕ್ ಪಿಂಟೋ, ಕಾರ್ಯದರ್ಶಿ ಅವಿತಾ ಸಿಂಥಿಯಾ ಪಿಂಟೋ, ರಕ್ಷಕ – ಶಿಕ್ಷಕ ಸಂಘದ ಕಾರ್ಯದರ್ಶಿ ಶುಭಾ ಜೋಶ್ನಾ, ವಿದ್ಯಾರ್ಥಿ ಉಪನಾಯಕ ಅಂಕಿತ್ ಡಿಸೋಜ, ಉಪನಾಯಕಿ ರಿಧಿ ಚೌಟ ಉಪಸ್ಥಿತರಿದ್ದರು. ಗಣ್ಯರು ಮುಖ್ಯ ಅತಿಥಿಗಳಾದ ಸುಪ್ರಭಾ ಎಮ್. ಅವರನ್ನು ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ಉಪಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್ ನೆರೆದಿರುವ ಎಲ್ಲರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು.
ವಿದ್ಯಾರ್ಥಿಗಳು ವಿಶ್ವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಏಷ್ಯಾಖಂಡ, ಆಫ್ರಿಕಾ, ಯುರೋಪ್, ಉತ್ತರ ಮತ್ತು ದಕ್ಷಿಣಾ ಅಮೇರಿಕಾ, ಆಸ್ಟ್ರೇಲಿಯದ ವಿವಿಧ ಸಾಂಸ್ಕೃತಿಕ ಸಂಪ್ರದಾಯ, ರೂಢಿ, ಆಚರಣೆಗಳ ಕಾರ್ಯಕ್ರಮಗಳನ್ನು ಸಾರಿದರು. ವಿದ್ಯಾರ್ಥಿಗಳಾದ ಇಯಾನ್ ಕೀತ್ ಲೋಬೋ ಹಾಗೂ ಶ್ರಾವ್ಯ ವಿಷ್ಣುದಾಸ್ ಪ್ರಭು ಕಾರ್ಯಕ್ರಮ ನಿರೂಪಿಸಿ ಜ್ಯುಯಾನ್ ಅನಯ ಕುಂದರ್, ಅಥರ್ವ್ ಅಗರ್‌ವಾಲ್, ಹಿಮಾನಿ ಪಿ. ಕುಂಬ್ಳೆ, ಸಹನಾದಾಸ್, ಪರ‍್ವಿ ಪ್ರಕಾಶ್, ಆರ್ಯಾ ಬೋಳಾರ್, ಪ್ರದ್ಯುಮ್ನ ಶೇರ್‌ಖಾನೆ, ಹೃಷಿಕೇಶ್ ಎಚ್.ಎಸ್. ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶಾಂತಿ ಮಿನೇಜಸ್ ಕಾರ್ಯಕ್ರಮವನ್ನು ಸಂಯೋಜಿಸಿ, ನಿಶ್ಮಿತಾ ಜ್ಯುವೆಲ್ ಪಿಂಟೋ, ಕೊಸೆಸ್ ಅಪೋಲಿನ್ ಲೋಬೊ ಸಹಕರಿಸಿದರು. ಉಪಪ್ರಾಂಶುಪಾಲೆ ಅನಿತಾ ಥೋಮಸ್ ಧನ್ಯವಾದ ಸಮರ್ಪಿಸಿದರು.