November 1, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಟ್ಟಡ ಕಾಮಗಾರಿಯಲ್ಲಿ ಲೋಪವಾದರೆ ಮಾಲೀಕ, ಇಂಜಿನಿಯರ್ ಮೇಲೆ ಕೇಸ್ – ಮಂಗಳೂರು ಮಹಾನಗರಪಾಲಿಕೆ ಎಚ್ಚರಿಕೆ

ಮಂಗಳೂರು ನವಂಬರ್ 24 :- ರಾಜ್ಯದ ಕೆಲವು ‘ನಗರಗಳಲ್ಲಿ ಪರವಾನಿಗೆ ಪಡೆಯದೇ/ಪರವಾನಿಗೆ ಪಡೆದು ಅನುಮೋದಿತ ನಕ್ಷೆಯನ್ನು ಉಲ್ಲಂಘಿಸಿ ಹೆಚ್ಚುವರಿ ಕಟ್ಟಡ (ಮಹಡಿಗಳನ್ನು) ನಿರ್ಮಿಸಿ, ಕಟ್ಟಡವು ಕುಸಿದು ಅನೇಕ ಜನರ ಪ್ರಾಣಹಾನಿಯಾಗಿದ್ದು, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸುವ ಮುನ್ನ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ನಡೆಸಿ ನುರಿತ ಇಂಜಿನಿಯರ್ ಗಳಿಂದ ವಿನ್ಯಾಸ ಪಡೆದು ಪಾಲಿಕೆಯಿಂದ ವಲಯ ನಿಯಮಾವಳಿ ಅನ್ವಯ ಕಟ್ಟಡ ಪರವಾನಿಗೆ ಪಡೆದು ವಿನ್ಯಾಸದಲ್ಲಿ ಯಾವುದೇ ಲೋಪವಾಗದಂತೆ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿಕೊಂಡು ನಿಯಮಾನುಸಾರ ಕಟ್ಟಡವನ್ನು ನಿರ್ಮಿಸುವಂತೆ ಸೂಚಿಸಲಾಗಿದೆ.

ಕಟ್ಟಡದ ಕಾಮಗಾರಿಯಲ್ಲಿ ಯಾವುದೇ ಲೋಪದೋಷವಾಗಿ ಕಟ್ಟಡಕ್ಕೆ ಯಾವುದೇ ಅಪಾಯವಾದಲ್ಲಿ ಅಥವಾ ಅನುಮೋದಿತ ನಕ್ಷೆ ಉಲ್ಲಂಘಿಸಿ ಹೆಚ್ಚುವರಿ ಮಹಡಿ ನಿರ್ಮಿಸಿ ಕಟ್ಟಡ ಕುಸಿದು ಯಾವುದೇ ಪ್ರಾಣಹಾನಿ ಸಂಭವಿಸಿದಲ್ಲಿ ಕಟ್ಟಡದ ಮಾಲೀಕರು, ಕಟ್ಟಡದ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ.

 

You may also like

News

ರೌಡಿ ಟೋಪಿ ನೌಫಾಲ್ ಉಪ್ಪಳದಲ್ಲಿ ಬರ್ಬರ ಹತ್ಯೆ  

ರೈಲ್ವೇ ಗೇಟ್ ಬಳಿ ಮಾತುಕತೆಗೆ ಕರೆದು ಕೊಲೆಗೈದ ಶಂಕೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದ 38 ವರ್ಷ ಪ್ರಾಯದ ನಟೋರಿಯಸ್
News

ಮಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವ — ಸಚಿವ ದಿನೇಶ್ ಗುಂಡೂರಾವ್ ಅವರ ಉತ್ಸಾಹಭರಿತ ರಾಜ್ಯೋತ್ಸವ ಸಂದೇಶ

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, MLC ಐವನ್ ಡಿಸೋಜ, MLC ಮಂಜುನಾಥ್ ಭಂಡಾರಿ ಇವರ ಘನ ಉಪಸ್ಥಿತಿಯಲ್ಲಿ ನೆಹರು ಮೈದಾನದಲ್ಲಿ ಬಣ್ಣದ ಸಂಭ್ರಮ

You cannot copy content of this page