ಬೆಳ್ತಂಗಡಿ ತಾಲೂಕು ಪರಿಶಿಷ್ಟ ಜಾತಿ/ಪಂಗಡದ ಕುಂದು ಕೊರತೆ ಮತ್ತು ನೊಂದವರ ಸಭೆ
ಬೆಳ್ತಂಗಡಿ : ಪೋಲಿಸ್ ಇಲಾಖೆಯ ಅಧಿಕಾರಿಗಳು , ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು ಕೊರತೆಗಳು ಮತ್ತು ನೊಂದವರ ಸಭೆಯನ್ನು ನವಂಬರ್ 24ರಂದು ಬೆಳ್ತಂಗಡಿ ಆರಕ್ಷಕ ಠಾಣೆಯ ಸಭಾಂಗಣದಲ್ಲಿ ಜರುಗಿತು. ಅನೇಕ ಮುಖಂಡರು ತಮ್ಮ ಸಮುದಾಯದ ಸಾಮಾಜಿಕ ಕುಂದು ಕೊರತೆಗಳ ಸಮಸ್ಯೆಗಳನ್ನು ಅಧಿಕಾರಗಳ ಗಮನಕ್ಕೆ ತಂದರು. ಮುಖಂಡರ ಪ್ರಶ್ನೆಗಳನ್ನು ಆಲಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪೂರ್ ಮಠ್ ಉತ್ತರಿಸುತ್ತಾ ಸಂತ್ರಸ್ತರು ನೀಡಿದ ಕೇಸುಗಳನ್ನು ನಾವು ವಿಲೇವಾರಿ ಮಾಡುವುದು ನಮ್ಮ ಆಧ್ಯ ಕರ್ತವ್ಯವಾಗಿದ್ದು ಯಾವುದೇ ಕಾರಣಕ್ಕೂ ಠಾಣೆಯಲ್ಲಿ ಇರಿಸಿಕೊಳ್ಳಲು ಅವಕಾಶವಿಲ್ಲ. ಶೀಘ್ರ ತನಿಖೆ ನಡೆಸಿ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸದಿದ್ದರೆ ಪೋಲಿಸ್ ಅಧಿಕಾರಿ ತಲೆದಂಡ ತೆರಬೇಕಾತ್ತದೆ. ಆದುದರಿಂದ ನಾವು ಪೋಲಿಸ್ ಠಾಣೆಯಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಅಪರಾಧಗಳ ಮತ್ತು ಇತರ ಮೊಕದ್ದಮೆಗಳನ್ನು ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ.
ಅಲ್ಲದೆ ಕೆಲವರು ಆನ್ ಲೈನ್ ಮೂಲಕ ವಂಚನೆಗೆ ಒಳಗಾಗಿದ್ದಾರೆ ಅವರು ಜಾಗರೂಕತೆಯಿಂದ ವ್ಯವಹರಿಸಿ. ಪೋಲಿಸರು ಯಾವತ್ತೂ ಸಮಾಜದ ರಕ್ಷಣೆಗೆ ಇರುವವರು. ಪೋಲಿಸರೊಂದಿಗೆ ಸಾರ್ವಜನಿಕರು ದಯವಿಟ್ಟು ಸಹಕರಿಸಿ ಎಂದು ವಿನಂತಿಸಿದರು.
ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಇನ್ಸ್‌ಪೆಕ್ಟರ್ ಮುರಳೀಧರ್ ನಾಯಕ್ ಕೆ.ಜಿ. ಮತ್ತು ಅಪರಾಧ ಮತ್ತು ತನಿಖೆ ವಿಭಾಗದ ಇನ್ಸ್‌ಪೆಕ್ಟರ್ ಎಲ್ಲಪ್ಪ ಎಚ್. ಎಂ. ರವರು ನೊಂದವರಿಗೆ ಕಾನೂನು ಮಾಹಿತಿ ನೀಡಿದರು.