ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಕೊಂಕಣಿ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಕೊಂಕಣಿ ಕಾದಂಬರಿ ಸ್ಪರ್ಧೆ ಮತ್ತು ಕೊಂಕಣಿ ಕಿರು ನಾಟಕ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.
- ಕೊಂಕಣಿ ಕಾದಂಬರಿ ಸ್ಪರ್ಧೆ:
- 100 ರಿಂದ 120-ಎ4 ಸೈಜ್ ಪೇಪರ್‌ನಲ್ಲಿ ಟೈಪ್ ಮಾಡಿದ್ದಾಗಿರಬೇಕು. (ಫೊಂಟ್ ಸೈಜ್ 13, ಬರಹ ಅಥವಾ ನುಡಿ)
- ಕಾದಂಬರಿ ಬರವಣಿಗೆಯು ಕೊಂಕಣಿಯ ಯಾವುದೇ ಭಾಷಾ ಪ್ರಬೇಧವಾಗಿರಬಹುದು.
- ಕಾದಂಬರಿ ಇ-ಮೇಯ್ಲ್ ಮುಖಾಂತರ ಅಥವಾ ಖುದ್ದಾಗಿ 20.03.2025ರ ಮೊದಲು ಅಕಾಡೆಮಿ ಕಛೇರಿಗೆ (ಮಹಾನಗರ ಪಾಲಿಕ್ ಕಟ್ಟಡ, ಲಾಲ್ ಭಾಗ್, ಮಂಗಳೂರು) ತಲುಪಿಸತಕ್ಕದ್ದು.
ಬಹುಮಾನ: ಪ್ರಥಮ ಬುಹುಮಾನ : ರೂಪಾಯಿ 25,000/-, ದ್ವಿತೀಯ ಬುಹುಮಾನ: ರೂಪಾಯಿ 15,000/-, ತೃತೀಯ ಬುಹುಮಾನ: ರೂಪಾಯಿ 10,000/-. ಜೊತೆಗೆ ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುವುದು.
- ಕೊಂಕಣಿ ಕಿರು ನಾಟಕ ಸ್ಪರ್ಧೆ:
- 20ರಿಂದ 25 ನಿಮಿಷ ಅವಧಿಯಲ್ಲಿ ಪ್ರದರ್ಶನ ನೀಡತಕ್ಕಂತದ್ದು.
- ನಾಟಕವು ಕೊಂಕಣಿಯ ಯಾವುದೇ ಭಾಷಾ ಪ್ರಬೇಧದ್ದಾಗಿರಬಹುದು.
- ಕಿರು ನಾಟಕವನ್ನು ಬರೆದು ಇ-ಮೇಯ್ಲ್ ಮುಖಾಂತರ ಅಥವಾ ಖುದ್ದಾಗಿ 20.03.2025ರ ಮೊದಲು ಅಕಾಡೆಮಿ ಕಛೇರಿಗೆ (ಮಹಾನಗರ ಪಾಲಿಕ್ ಕಟ್ಟಡ, ಲಾಲ್ ಭಾಗ್, ಮಂಗಳೂರು) ತಲುಪಿಸತಕ್ಕದ್ದು.
ಬಹುಮಾನ: ಪ್ರಥಮ ಬಹುಮಾನ : ರೂಪಾಯಿ 5,000/-, ದ್ವಿತೀಯ ಬುಹುಮಾನ: ರೂಪಾಯಿ 3,000/-, ತೃತೀಯ ಬುಹುಮಾನ: ರೂಪಾಯಿ 2,000/- ಜೊತೆಗೆ ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುವುದು.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇರುವ ನಿಯಮಗಳು :
- ಪ್ರತಿ ವಿಭಾಗದಲ್ಲಿ ಕನಿಷ್ಟ 5 ಪ್ರವೇಶಗಳು ಬಂದಿರಬೇಕು. ಬಂದಿಲ್ಲದಿದ್ದಲ್ಲಿ ಈ ಸ್ಪರ್ಧೆಯನ್ನು ರದ್ದು ಮಾಡುವ ಅಥವಾ ಮುಂದುವರೆಸುವ ಅಧಿಕಾರ ಅಕಾಡೆಮಿಯದ್ದಾಗಿರುತ್ತದೆ.
- ಸ್ಪರ್ಧೆಯಲ್ಲಿ ಭಾಗವಹಿಸುವವರು ಪ್ರಪಂಚದ ಯಾವುದೇ ಭಾಗದಲ್ಲಿ ವಾಸವಿದ್ದರೂ, ಅವರು ಕರ್ನಾಟಕ ಮೂಲದವರಾಗಿದ್ದು, ಕೊಂಕಣಿ ಭಾಷಿಕರಾಗಿರಬೇಕು. ಯಾವುದೇ ಪಂಗಡದ/ ಜನಾಂಗದ ವ್ಯಕ್ತಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.
- ಆಯ್ಕೆಗೊಂಡ ಸಾಹಿತ್ಯವು ಅಕಾಡೆಮಿಯ ಆಸ್ತಿಯಾಗಿರುತ್ತದೆ.
- ಹೆಚ್ಚಿನ ಮಾಹಿತಿಗೆ ಅಕಾಡೆಮಿ ಕಛೇರಿಗೆ ಸಂಪರ್ಕಿಸುವುದು. ಸಂಪರ್ಕ ಸಂಖ್ಯೆ: 0824 2453167
- ಸ್ಪರ್ಧೆಯ ಸಾಹಿತ್ಯ ಕಳುಹಿಸಲು email ID: kksa1994@gmail.com
- ಸ್ಪರ್ಧೆಯ ಸಾಹಿತ್ಯ ಕಳುಹಿಸಲು ಕೊನೆಯ ದಿನಾಂಕ: 20-03-2025