August 27, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಗೊಳ್ತಮಜಲ್ ಸರಕಾರಿ ಪ್ರೌಢ ಶಾಲೆಯ 2024-25ನೇ ಸಾಲಿನ ಪ್ರತಿಭಾ ಪುರಸ್ಕಾರ  ಕಾರ್ಯಕ್ರಮ

ಶಾಲಾ ಶೈಕ್ಷಣಿಕ ಹಂತಗಳಲ್ಲಿ ಮತ್ತು ಭೌತಿಕ ವಿಚಾರಗಳಿಗೆ ಪೋಷಕರು ಶಿಕ್ಷಕರ ಜೊತೆ ಜೊತೆಯಾಗಿ ಸೇರಿ ಕೆಲಸಗಳಲ್ಲಿ ತೊಡಗಿದಾಗ ಅಭಿವೃದ್ಧಿಯು ಸುಲಭವಾಗಿ ನಡೆಯಲು ಸಾಧ್ಯವಾಗುತ್ತದೆ. ತರಗತಿ ಕೋಣೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಶಿಕ್ಷಕರು ಮುತುವರ್ಜಿ ವಹಿಸುವಂತೆ ಮನೆಯಲ್ಲಿ ವಿದ್ಯಾರ್ಥಿಯ ಜೊತೆ ಪೋಷಕರು ಶೈಕ್ಷಣಿಕ ವಿಚಾರಗಳಿಗೂ ಬೆರೆಯಬೇಕು ಆಗ ಶೈಕ್ಷಣಿಕ ಕಲಿಕೆಯು ಮಗುವಿಗೆ ಮಾನಸಿಕವಾಗಿ ಹೆಚ್ಚು ಬಲವನ್ನು ತುಂಬುತ್ತದೆ ಎಂದು ನಿವೃತ ಬಿ.ಆರ್.ಪಿ. ನಾರಾಯಣ ಗೌಡ ಅಭಿಪ್ರಾಯ ಪಟ್ಟರು.

ಅವರು ನವಂಬರ್ 23ರಂದು ಶನಿವಾರ ಬಂಟ್ವಾಳ ತಾಲೂಕಿನ ಗೊಳ್ತಮಜಲ್ ಸರಕಾರಿ ಪ್ರೌಢ ಶಾಲೆಯ 2024-25ನೇ ಸಾಲಿನ ಪ್ರತಿಭಾ ಪುರಸ್ಕಾರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷ ಚಂದ್ರಶೇಖರ್ ವಹಿಸಿದ್ದರು. ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ಗೋಳ್ತಮಜಲುವಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಪದೊನ್ನತಿ ಹೊಂದಿ ವ್ಯವಸ್ಥಾಪಕರಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಯೋಜರಾದ ಪುಷ್ಪರಾಜ್ ಬಿ., ಶಾಲೆಯ ಸೌಂದರ್ಯ ಹೆಚ್ಚಿಸಲು ಸಹಕರಿಸಿದ ಕಡಶಿವಾಲಯ ಶಾಲಾ ಕಲಾ ಶಿಕ್ಷಕ ಸತ್ಯ ಶಂಕರ್, ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಾಲಾ ದೈಹಿಕ ಶಿಕ್ಷಕ ಪ್ರಕಾಶ್ ಟಿ. ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯಾರ್ಥಿಗಳಿಗೆ ನಡೆಸಿದ ಸಾಂಸ್ಕೃತಿಕ ಸ್ಪರ್ಧೆಗಳ ಹಾಗೂ ಕ್ರೀಡಾ ಸ್ಪರ್ಧೆಗಳ, ಹಾಗೂ ಕಲಿಕಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಗೊಳ್ತಮಜಲ್ ಗ್ರಾಮ ಪಂಚಾಯತ್ ಸದಸ್ಯರಾದ ಪುರುಷೋತ್ತಮ್, ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಬಾಲಕೃಷ್ಣ ಕೊಟ್ಟಾರಿ, ನಾಗೇಶ್ ಪೂಜಾರಿ, ಕೃಷ್ಣಪ್ಪ ಪೂಜಾರಿ ಹಾಗೂ ಶಾಲಾ ನಾಯಕಿ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕನ್ನಡ ಶಿಕ್ಷಕಿ ಸುನಿತಾ ಸ್ವಾಗತಿಸಿ, ಸದರಿ ಸಾಲಿನ ವರದಿ ವಾಚನವನ್ನು ಶಾಲಾ ಮುಖ್ಯ ಶಿಕ್ಷಕ ರಮೇಶ್ ವಾಚಿಸಿದರು. ವಿಜ್ಞಾನ ಶಿಕ್ಷಕ ಸತ್ಯಶಂಕರ್ ಬಹುಮಾನಿತರ ಪಟ್ಟಿ ವಾಚಿಸಿ, ಹಿಂದಿ ಶಿಕ್ಷಕ ಶಂಕರ್ ಪಾವಸ್ಕರ್ ವಂದಿಸಿದರು. ಶಿಕ್ಷಕಿ ಸುಜಾತ ಎಂ. ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

You may also like

News

ಮಿಲಾಗ್ರಿಸ್ ಸೊಸೈಟಿಯಿಂದ ಪಾನೀರ್ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ನೆರವು

ಆಶ್ರಮಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ – ಜೆ. ಆರ್. ಲೋಬೊ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕಾರವಾರ ಇದರ ಉರ್ವಾ ಶಾಖೆಯ ಆಶ್ರಯದಲ್ಲಿ
News

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ DAPC ಬಿಷಪ್‌ಗಳು – ಕ್ರೈಸ್ತ ಸಮುದಾಯದ ಬೇಡಿಕೆಗಳ ಕುರಿತು ಮನವಿ

ಡಯಾಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ (DAPC) ನಿಯೋಗವು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ರಾಜ್ಯದ ಪ್ರೊಟೆಸ್ಟಂಟ್, ಪೆಂಟೆಕೋಸ್ಟಲ್ ಹಾಗೂ ಸ್ವತಂತ್ರ ಕ್ರೈಸ್ತ

You cannot copy content of this page