May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ಹರಿದ್ವಾರ ಶಾಖಾ ಮಠದ 8ನೇ ವಾರ್ಷಿಕೋತ್ಸವ

ಧರ್ಮಸ್ಥಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದ ನಗರ, ಧರ್ಮಸ್ಥಳ ಇದರ ಶಾಖಾ ಮಠ ಉತ್ತರಖಂಡ ಹರಿದ್ವಾರ ಸಾಧನಾ ಕುಠಿರದ 8ನೇ ವಾರ್ಷಿಕೋತ್ಸವ ಮಹಾ ಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ನವಂಬರ್ 25ರಂದು ವೈದಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಇದರ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಹಂತ್ ವಿದ್ಯಾನಂದ ಸರಸ್ವತಿ ಮಹಾರಾಜ್, ಮಹಾಮಂಡಲೇಶ್ವರ 1008 ಶ್ರೀ ಸ್ವಾಮೀ ಆನಂದ ಚೈತನ್ಯ ಸರಸ್ವತಿ ಮಹಾರಾಜ್, ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ರಾಮೇಶ್ವರಾನಂದ ಸರಸ್ವತಿ ಮಹಾರಾಜ್, ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಶಿವ ಪ್ರೇಮಾನಂದಪುರಿ ಮಹಾರಾಜ್, ಮಹಾಮಂಡಲೇಶ್ವರ್ 1008 ಶ್ರೀ ಸ್ವಾಮಿ ಲಲಿತಾನಂದ ಗಿರಿ ಮಹಾರಾಜ್, ಶ್ರೀ ಮಹಂತ್ ದೇವಾನಂದ ಸರಸ್ವತಿ ಮಹಾರಾಜ್, ಶ್ರೀ ಮಹಂತ್ ಇಂದ್ರಾನಂದ ಸರಸ್ವತಿ, ಮಹಂತ್ ಮಾಧವಾನಂದ ಸರಸ್ವತಿ, ಮಹಂತ್ ಜ್ಞಾನ ಪ್ರೇಮಾನಂದ ಪುರಿ ಮಹಾರಾಜ್, ಕರ್ನಾಟಕ ಸರಕಾರದ ಮೀನುಗಾರಿಕೆ ಸಚಿವ ಮಂಕಾಳ್ ಎಸ್. ವೈದ್ಯ, ಹರಿದ್ವಾರ ಶಾಸಕ ಮದನ್ ಕೌಶಿಕ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮಂಗಳೂರು ಕಾರ್ಪೋರೇಟ್ ಕಿರಣ್ ಕುಮಾರ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ ಕಾಶಿಪಟ್ಣ, ಬೆಹರೈನ್ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್, ಭಟ್ಕಳದ ಕೃಷ್ಣ ನಾಯ್ಕ್, ಗೋವಿಂದ್ ನಾಯ್ಕ್, ಈಶ್ವರ ನಾಯ್ಕ್, ಗಣೇಶ್ ನೇತ್ರಾಣಿ, ಗಂಗಾಧರ್ ಬೆಂಗಳೂರು, ರಮೇಶ್ ಸಾಲಿಯನ್ ದೆಹಲಿ, ಜಿತೇಶ್ ಉಡುಪಿ, ಮಠದ ಟ್ರಷ್ಟಿ ತುಕಾರಾಮ ಸಾಲಿಯಾನ್, ರವೀಂದ್ರ ಪೂಜಾರಿ ಆರ್ಲ ಮೊದಲಾದವರು ಹಾಜರಿದ್ದರು. ಬಳಿಕ ಸ್ವಾಮೀಜಿಯವರ ನೇತೃತ್ವದಲ್ಲಿ ಪವಿತ್ರ ಗಂಗಾ ನದಿಯಲ್ಲಿ ಗಂಗಾ ಸ್ನಾನ, ಗಂಗಾ ಆರತಿ ನಡೆಯಿತು.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page