December 7, 2024
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕಲ್ಲಡ್ಕ ವಲಯದ ನೂತನ ಕಛೇರಿಯ ಉದ್ಘಾಟನೆ

ಗ್ರಾಮೀಣ ಭಾಗದ ಜನರ ಅಭಿವೃದ್ಧಿಯ ದೃಷ್ಟಿಯಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯು ಸಹಕಾರಿಯಾಗಿದೆ –  ಪದ್ಮನಾಭ ಕೊಟ್ಟಾರಿ

ಬಂಟ್ವಾಳ : ಗ್ರಾಮೀಣ ಭಾಗದ ಜನರ ಅಭಿವೃದ್ಧಿಯ ದೃಷ್ಟಿಯಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ  ಯೋಜನೆಯು ಸಹಕಾರಿಯಾಗಿದೆ ಎಂದು ವಿಟ್ಲ ಕ್ಷೇತ್ರದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹೇಳಿದರು. ಅವರು ನವಂಬರ್ 25ರಂದು ಸೋಮವಾರ ಕಲ್ಲಡ್ಕ ಕೆಳಗಿನ ಪೇಟೆ ಲಲಿತಾ ಎಸ್. ರಾವ್ ರವರ ವಾಣಿಜ್ಯ ಸಂಕೀರ್ಣದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕಲ್ಲಡ್ಕ ವಲಯದ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿಯವರು  ಯೋಜನೆಯು ನಡೆದು ಬಂದ ದಾರಿಯ ಬಗ್ಗೆ ತಿಳಿಸಿ, ಯೋಜನೆಯ ಸವಲತ್ತು  ಬಗ್ಗೆ ಮಾಹಿತಿ ನೀಡಿದರು.

ಸುಮಂಗಳ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಅಧ್ಯಕ್ಷ ನಾಗೇಶ್ ಕೊಳಕೀರು ಮಾತಾಡಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಹಣದ ವ್ಯವಹಾರ ಮಾತ್ರವಲ್ಲದೆ ಸಂಸ್ಕಾರ ಯುಕ್ತ ಭಕ್ತಿಭಾವ ತುಂಬಿದ ಸಂಸ್ಥೆಯಾಗಿದೆ ಎಂದರು. ಕಾರ್ಯಕ್ರಮದ ಮೊದಲು ಭಜನಾ ಸಂಕೀರ್ತನೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಝಾನ್ಸಿ ರಾಣಿ ಮಹಿಳಾ ಮಂಡಲದ ಅಧ್ಯಕ್ಷೆ ಮಿನಾಕ್ಷಿ ಆರ್. ಪೂಜಾರಿ, ಕಟ್ಟಡದ ಮಾಲಿಕ ಲಲಿತಾ ಎಸ್. ರಾವ್, ಯೋಜನೆಯ ಕಲ್ಲಡ್ಕ ಗೋಳ್ತಮಜಲು ಘಟ ಸಮಿತಿಯ ಅಧ್ಯಕ್ಷ ಯಮುನ, ಬಂಟ್ಟಾಳ ತಾಲೂಕು ಮೇಲ್ವಿಚಾರಕಾರಕಿ ಜಯಲಕ್ಷ್ಮೀ ಪ್ರಭು, ಎಲ್ಲಾ ಗ್ರಾಮದ ವಲಯ ಸಂಯೋಜಕರು, ಸೇವಾದೀಕ್ಷಿತರು ಲೆಕ್ಕಪರಿಶೋಧಕರು ಹಾಗೂ ಗುರುಬಂಧುಗಳು ಉಪಸ್ಥಿತದ್ದರು. ಸೇವಾದೀಕ್ಷಿತೆ ನಿಶಾ ಸ್ವಾಗತಿಸಿ, ಲೆಕ್ಕಪರಿಶೋದಕಿ ದಯಾ ವಂದಿಸಿದರು. ಗೋಳ್ತಮಜಲು ಗ್ರಾಮದ ಸೇವಾದೀಕ್ಷಿತೆ ಶ್ಯಾಮಲ ಕಾರ್ಯಕ್ರಮ ನಿರೂಪಿಸಿದರು.

You may also like

News

ಕರಾವಳಿ ಸುದ್ದಿ ನೂತನ ವೆಬ್ ಸೈಟ್ ಉದ್ಘಾಟನೆ

  ಬಂಟ್ವಾಳ : ಕರಾವಳಿ ಸುದ್ದಿ ವಾರಪತ್ರಿಕೆಯ ನೂತನ ವೆಬ್ ಸೈಟ್ www.karavalisuddi.com ಸಪ್ಟೆಂಬರ್ 8ರ ಭಾನುವಾರ ಲೋಕಾರ್ಪಣೆಗೊಂಡಿತು. ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನ ಧರ್ಮಗುರು
News

ಸೂರಿಕುಮೇರು ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಮೇರಿ ಮಾತೆಯ ವಾರ್ಷಿಕ ಹಬ್ಬ ಮೊಂತಿ ಹಬ್ಬವನ್ನು ಇಂದು ಸಪ್ಟಂಬರ್ 8ರಂದು ವಿಜೃಂಭಣೆ, ಸಂಬ್ರಮ, ಭಕ್ತಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

You cannot copy content of this page