ವಿಟ್ಲ ಠಾಣೆಯ ಸಬ್ ಇನ್ಸ್ ಪೆಕ್ಟರ್ ವಿದ್ಯಾ ಮತ್ತು ಪೊಲೀಸರಿಂದ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ಕಾನೂನು ಮಾಹಿತಿ ಶಿಬಿರ
ವಿಟ್ಲದಲ್ಲಿರುವ ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ ವಿಟ್ಲ ಪೊಲೀಸ್ ಠಾಣೆಯ ವತಿಯಿಂದ ಕಾನೂನು ಮಾಹಿತಿ ಶಿಬಿರ ನಡೆಯಿತು.
ವಿಟ್ಲ ಠಾಣೆಯ ಠಾಣಾಧಿಕಾರಿ ವಿದ್ಯಾ ಹಾಗೂ ಕಾನ್ಸ್‌ಟೇಬಲ್ ಮನೋಜ್ ಕುಮಾರ್ ಇವರು ವಿದ್ಯಾರ್ಥಿಗಳಿಗೆ ಸೈಬರ್ ವಂಚನೆ, ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮ, ಸಾರಿಗೆ ನಿಯಮಗಳು ಹಾಗೂ ಪೋಸ್ಕೋ ಕಾಯಿದೆ ಕುರಿತು ಮಾಹಿತಿ ನೀಡಿದರು. ಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಮೂಲಕ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಂಡರು.
ಶಾಲಾ ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಕಾರ್ಯಕ್ರಮ ಉದ್ಘಾಟಿಸಿದರು. ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳಿಗೆ ಶಾಲಾ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.