February 12, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕಥೊಲಿಕ್‌ ಸಭಾ ಬಂಟ್ವಾಳ ವಲಯದ ಸಹಯೋಗದಿಂದ ಯುವ ಲೇಖಕರಿಗೆ ತರಬೇತಿ ಕಾರ್ಯಾಗಾರ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕಥೊಲಿಕ್‌ ಸಭಾ ಮಂಗ್ಳುರ್‌ ಪ್ರದೇಶ್‌ (ರಿ.) ಬಂಟ್ವಾಳ ವಲಯದ ಸಹಯೋಗದಿಂದ ನವಂಬರ್ 24ರಂದು ಮೊಡಂಕಾಪು ಕನ್ನಡ ಮೀಡಿಯಂ ಶಾಲೆಯ ಸಭಾಂಗಣದಲ್ಲಿ ಯುವ ಲೇಖಕರಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಬಂಟ್ವಾಳ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ವಲೇರಿಯನ್‌ ಡಿಸೋಜ, ಕಾರ್ಯಾಗಾರದ ಅಧ್ಯಕ್ಷರಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಮುಖ್ಯ ಅತಿಥಿಗಳಾಗಿ ಕಥೊಲಿಕ್‌ ಸಭಾ ಮಂಗ್ಳುರ್‌ ಪ್ರದೇಶ್‌ (ರಿ.) ಬಂಟ್ವಾಳ ವಲಯದ ಅಧ್ಯಕ್ಷ ಜೋನ್‌ ಲಸ್ರಾದೊ, ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮಿಣ ಅಭಿವೃದ್ದಿ ಬ್ಯಾಂಕ್‌ ಇದರ ಅಧ್ಯಕ್ಷ ಅರುಣ್‌ ರೋಷನ್‌ ಡಿಸೋಜ,  ಕಥೊಲಿಕ್‌ ಸಭಾ ಮಂಗ್ಳುರ್‌ ಪ್ರದೇಶ್‌ (ರಿ.) ಕೇಂದ್ರಿಯ ನಿಕಟಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೊ ಈ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

ತರಬೇತುದಾರರಾಗಿ ಕವಯತ್ರಿಯಾದ ಡಿಂಪಲ್‌ ಜೆನಿಫರ್ ಫೆರ್ನಾಂಡಿಸ್‌ ಇವರು ಕವಿತೆ ರಚನೆ ಬಗ್ಗೆ ಹಾಗೂ ತಮ್ಮ ಅನುಭವದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಕವನಗಳು ಹೇಗೆ ಉದ್ಬವಗೊಳ್ಳುತ್ತವೆ, ಯಾವ ರೀತಿ ಕವನ ಬರೆಯಬಹುದೆಂದು ಮಾಹಿತಿ ನೀಡಿದರು. ಯುವಕವಿ, ಕಥೆಗಾರ ಗ್ಲ್ಯಾನಿಷ್‌ ಮಾರ್ಟಿಸ್‌ ಯುವ ಲೇಖಕರಿಗೆ ಕಥೆ ಬರೆಯುವ ವಿಧಾನ ಮತ್ತು ಹಂತಗಳ ಬಗ್ಗೆ ಮಾಹಿತಿ ನೀಡಿ, ಕಥೆ ಹೇಗೆ ಬರೆಯಬೇಕೆಂದು ತಿಳಿಸಿದರು.

ಸಮರ್ಥ್‌ ಭಟ್‌ ಇವರ ಸದಸ್ಯ ಸಂಚಾಲಕತ್ವದಲ್ಲಿ ಈ ಕಾರ್ಯಕ್ರಮ ನಡೆಯತು. ಅಕಾಡೆಮಿ ಸದಸ್ಯರುಗಳಾದ ನವೀನ್‌ ಲೋಬೊ ಹಾಗೂ ಅಕ್ಷತಾ ಎಂ. ನಾಯಕ್‌ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

You may also like

News

 ಗೆಳೆಯರ ಬಳಗ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮ

ಗೆಳೆಯರ ಬಳಗ ಅಕ್ಷಯನಗರ (ರಿ.) ನಿಡಿಗಲ್ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮವು ಫೆಬ್ರವರಿ 9ರಂದು ಆದಿತ್ಯವಾರ ಕಲ್ಮಂಜ ಗ್ರಾಮದ ಅಕ್ಷಯನಗರದ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
News

CELEBRATION OF THE FEAST OF OUR LADY OF LOURDES at Lourdes central School, Bejai, Mangalore

“Let us run to Mary and as her little children cast ourselves into her arms with a perfect confidence.”  —St.

You cannot copy content of this page