ಜಿಟಿಟಿಸಿ ಉಡುಪಿ ಮತ್ತು ನಿಟ್ಟೆ ಡೀಮ್ಡ್ ಟುಬಿ ಯೂನಿವರ್ಸಿಟಿ ನಡುವೆ ಒಪ್ಪಂದಕ್ಕೆ ಸಹಿ
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನವಂಬರ್ 28ರಂದು ಜಿಟಿಟಿಸಿ ಉಡುಪಿ ಮತ್ತು ನಿಟ್ಟೆ ಡೀಮ್ಡ್ ಟುಬಿ ಯೂನಿವರ್ಸಿಟಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಎಂಜಿನೀಯರಿಂಗ್ ಪಠ್ಯಕ್ರಮದಲ್ಲಿ ಇಂಟರ್ನ್ ಶಿಪ್ ಕಡ್ಡಾಯ ವಿಭಾಗವಾಗಿರುವುದರಿಂದ ಈ ಒಪ್ಪಂದವು ಎಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ.
ಮಂಜುನಾಥ್ ನಾಯಕ್, ಪ್ರಾಂಶುಪಾಲರು, ಜಿಟಿಟಿಸಿ, ಉಡುಪಿ, ಜಿಟಿಟಿಸಿಯ ಉಪನ್ಯಾಸಕರಾದ ದುರ್ಗಾಪ್ರಸಾದ್ ಶೆಟ್ಟಿ ಮತ್ತು ವಿಪಿನ್ ಕುಮಾರ್ ಉಪಸ್ಥಿತರಿದ್ದರು. ನಿಟ್ಟೆಯ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಅವರು ಇಂತಹ ಇಂಟರ್ನ್ ಶಿಪ್ ಗಳ ಮೂಲಕ ಕೌಶಲ್ಯ ಅಭಿವೃದ್ಧಿಯ ಮಹತ್ವವನ್ನು ಪುನರುಚ್ಚರಿಸಿದರು. ನಿಟ್ಟೆ ಕಾಲೇಜಿನ ಐಐಸಿ ನಿರ್ದೇಶಕ ಡಾ. ಪರಮೇಶ್ವರನ್, ಉಪಪ್ರಾಂಶುಪಾಲ ಡಾ. ಐ. ರಮೇಶ್ ಮಿತ್ತಂತಾಯ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಪೈ, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ. ಸೂರ್ಯನಾರಾಯಣ, ರೊಬೊಟಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಮುರಳೀಧರ, ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಕೆ.ವಿ.ಎಸ್.ಎಸ್. ಸಾಯಿಯಾಮ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ. ಅನಂತಕೃಷ್ಣ ಸೋಮಯಾಜಿ ಮತ್ತು ಡಾ. ಅಜಿತ್ ಹೆಬ್ಬಾಳೆ ಕಾರ್ಯಕ್ರಮ ಸಂಯೋಜಿಸಿದರು.