ಇರ್ವತ್ತೂರು ಪದವು – ವಾರ್ಷಿಕ ಬದ್ರ್ ಮೌಲಿದ್ ಪೋಸ್ಟರ್ ಬಿಡುಗಡೆ.

ಬಂಟ್ವಾಳ : ಇರ್ವತ್ತೂರು ಪದವು ಬದ್ರಿಯಾ ಜುಮಾ ಮಸೀದಿ ಹಾಗೂ ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ವಾರ್ಷಿಕ ಬದ್ರ್ ಮೌಲಿದ್ ಪ್ರಯುಕ್ತ ಏಕದಿನ ಮತ ಪ್ರಭಾಷಣ ಹಾಗೂ ಸನ್ಮಾನ ಕಾರ್ಯಕ್ರಮ ದಶಂಬರ್ 17ರಂದು ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ಅಲ್ ಹಾಫಿಳ್ ಉಸ್ತಾದ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಕೇರಳ ಭಾಗವಹಿಸಲಿದ್ದಾರೆ.
ಈ ಪ್ರಯುಕ್ತ ಜಮಾಅತ್ ಖತೀಬ ಉಮರ್ ಮದನಿ ನೇತೃತ್ವದಲ್ಲಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ಮಸೀದಿ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಲ್ ಖಾದಿಸ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಹಂಝ ಸಖಾಫಿ, ಶಿಕ್ಷಕ ರಫೀಕ್ ಮದನಿ, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಸೇವಾ ಹಾಮದಾಕ, ಮಾಜಿ ಅಧ್ಯಕ್ಷ ಪಿ.ಕೆ. ಇದ್ದಿನಬ್ಬ, ಅಬ್ದುಲ್ ಲತೀಫ್ ಕಲಾ ಬಾಗಿಲು, ಪಂಜೋಡಿ ಅಬ್ದುಲ್ ಹಮೀದ್, ಕಾರ್ಯದರ್ಶಿ ಮುನೀರ್ ಅಹ್ಮದ್, ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಝ್, ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಪಿ. ಮೊಹಮ್ಮದ್ ರಫೀಕ್, ಸದಸ್ಯರಾದ ಅಬ್ದುಲ್ ರಹಿಮಾನ್, ಅಬೂಬಕ್ಕರ್ ಅಂಕರ್ಜಾಲ್, ನಿಸಾರ್ ಅಹಮದ್ ಇರ್ವತ್ತೂರು, ಟಿ.ಕೆ. ನವಾಝ್, ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ಹಾಫಿಳ್, ಅನಿವಾಸಿ ಭಾರತೀಯ ಕತ್ತಾರ್ ಉದ್ಯಮಿ ಝಹೀರ್ ಅಹ್ಮದ್ ಮತ್ತಿತರು ಉಪಸ್ಥಿತರಿದ್ದರು.