May 15, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ ರೂಪಾಯಿ 90 ಕೋಟಿ ವೆಚ್ಚದಲ್ಲಿ 9 ಭಾಷೆಗಳಲ್ಲಿ 3 ಚಲನಚಿತ್ರಗಳ ನಿರ್ಮಾಣ – ಸಿಇಓ ಮರ್ರಿ ಗಿರಿ ರೆಡ್ಡಿ

ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿಯೇ ಚಿತ್ರದ ಲಾಂಚ್ ಆಗಲಿದೆ

ಮಂಗಳೂರು : ಇಫ್ಫಿಮ್‌ಗಿ ಸ್ಟುಡಿಯೋಸ್ ಇಂಡಿಯನ್ ಫಿಲ್ಮ್ ಫ್ಯಾಶನ್ ಮೀಡಿಯಾ ನೆಟ್‌ವರ್ಕ್ ವತಿಯಿಂದ ಒಂಭತ್ತು ಭಾಷೆಗಳಲ್ಲಿ 3 ಚಲನಚಿತ್ರಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಇಫ್ಫಿಮ್‌ಗಿ ಸ್ಟುಡಿಯೋದ ಸಿಇಒ ಮರ್ರಿ ಗಿರಿ ರೆಡ್ಡಿ ನವಂಬರ್ 29ರಂದು ಶುಕ್ರವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಮಾರು ರೂಪಾಯಿ 90 ಕೋಟಿ ವೆಚ್ಚದಲ್ಲಿ ಮೂರು ಚಲನಚಿತ್ರಗಳ ನಿರ್ಮಾಣವಾಗಲಿದೆ. ದಶಂಬರ್‌ನಲ್ಲಿ ಮಂಗಳೂರಿನಿಂದಲೇ ಶೂಟಿಂಗ್ ಆರಂಭವಾಗಲಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಇತ್ಯಾದಿ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡಲಾಗುವುದು. ಪ್ಯಾನ್ ಇಂಡಿಯಾ ಚಲನಚಿತ್ರ ಯೋಜನೆಗಳ ಭಾಗವಾಗಿ ಮೂರು ಚಿತ್ರಗಳನ್ನು ಏಕಕಾಲದಲ್ಲಿ ಆರಂಭಿಸಿ ವರ್ಷದೊಳಗೆ ಶೂಟಿಂಗ್ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಮಂಗಳೂರಿನ ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿಯೇ ಚಿತ್ರದ ಲಾಂಚ್ ಆಗಲಿದೆ ಎಂದು ಅವರು ತಿಳಿಸಿದರು.

ಮಂಗಳೂರು, ಚಿಕ್ಕಮಗಳೂರು, ಕೂರ್ಗ್, ಊಟಿ, ಕೊಡೈಕೆನಾಲ್, ಕೇರಳ ಹಾಗೂ ವಿದೇಶಗಳಲ್ಲೂ ಚಿತ್ರೀಕರಣ ನಡೆಯಲಿದೆ. ದಶಂಬರ್ 6ರಂದು ಶಿವಮೊಗ್ಗ ಪ್ರೆಸ್‌ ಕ್ಲಬ್‌ನಲ್ಲಿ ಚಿತ್ರಗಳ ಪೋಸ್ಟರ್ ಬಿಡುಗಡೆಯಾಗಲಿದೆ ಎಂದು ವಿವರಿಸಿದರು.

You may also like

News

ಶ್ರೀರಾಮ್ ಫೈನಾನ್ಸ್ ವತಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ಮಾನ

ಶ್ರೀರಾಮ್ ಫೈನಾನ್ಸ್ ವತಿಯಿಂದ ಶ್ರೀರಾಮ್ ಗ್ರಾಹಕರ ಮಕ್ಕಳಿಗೆ ಸ್ಕಾಲರ್ಷಿಪ್ ವಿತರಣೆ ಮಾಡುತ್ತಿದ್ದಾರೆ. ಪ್ರಸ್ತುತ ವರ್ಷದಲ್ಲಿ 8ನೇ ತರಗತಿಯಿಂದ 11ನೇ ತರಗತಿಯ ವರೆಗೆ ಕಲಿಯುತ್ತಿರುವ ಗ್ರಾಹಕರ 60% ಮೇಲ್ಪಟ್ಟು
News

ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಲು ತಂಡ ರಚನೆ

ಮಂಗಳೂರು:  ಜಿಲ್ಲೆಯ ರಾಜ್ಯ ಮತ್ತು ಗ್ರಾಮೀಣ ಭಾಗದ ರಸ್ತೆ ಬದಿಯ ತ್ಯಾಜ್ಯ ಬೀಳುವುದನ್ನು ತಡೆಯುವ ಸಲುವಾಗಿ “ಸ್ವಚ್ಛತೆಗಾಗಿ ನಿಮ್ಮೊಂದಿಗೆ ನಾವು ನಮ್ಮೊಂದಿಗೆ ನೀವು” ಅಭಿಯಾನ ಯಶ್ವಸ್ವಿಯಾಗಿ ಕೈಗೊಳ್ಳುವಂತೆ

You cannot copy content of this page