November 23, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರಾಟೆಯಲ್ಲಿ ಕಿನ್ನಿಗೋಳಿ ಮೇರಿ ವೆಲ್ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಸಾಧನೆ – ರಾಷ್ಟ್ರಮಟ್ಟಕ್ಕೆ ಕವಿನ್ ಎಮ್. ಸಾಲ್ಯಾನ್ ಆಯ್ಕೆ

ಈತನ್ ನೇವಿನ್ ಮಥಾಯಸ್‌ ಅವರಿಗೆ ತೃತೀಯ ಸ್ಥಾನ

ಕಿನ್ನಿಗೋಳಿ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ವತಿಯಿಂದ ಬೆಂಗಳೂರಿನ ದೇವನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಿನ್ನಿಗೋಳಿಯ ಮೇರಿ ವೆಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಕವಿನ್ ಎಂ. ಸಾಲ್ಯಾನ್ ಅವರು 55 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು, ಪಂಜಾಬ್‌ನ ಲೂಧಿಯಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಅದೇ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಈತನ್ ನೇವಿನ್ ಮಥಾಯಸ್ ಅವರು 62 ಕೆ.ಜಿ. ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಯು ಶಾಲೆಯ ಕ್ರೀಡಾ ಕ್ಷೇತ್ರದ ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ.

You may also like

News

ನಿವೃತ್ತ ಶಿಕ್ಷಕಿ ಡಯಾನ ಡಿಸಿಲ್ವ ಹೃದಯಾಘಾತದಿಂದ ನಿಧನ

33 ವರ್ಷಗಳ ಶಿಕ್ಷಕ ಸೇವೆಯ ಬಳಿಕ ಬದುಕಿನ ಪಯಣಕ್ಕೆ ವಿದಾಯ ಕಟಪಾಡಿ: ಪತಿಯೊಂದಿಗೆ ಚಹಾ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ನಿವೃತ್ತ ಶಿಕ್ಷಕಿಯೊಬ್ಬರು ಮೃತಪಟ್ಟ
News

ಕರ್ನಾಟಕ ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕರಾಗಿ ಡಾ. ಮಂಜುನಾಥ ಭಂಡಾರಿ ನೇಮಕ

ರಾಜಕೀಯ, ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ವಿಶಿಷ್ಟ ಛಾಪು ಮೂಡಿಸಿದ ನಾಯಕನಿಗೆ ಮತ್ತೊಂದು ಮಹತ್ವದ ಜವಾಬ್ದಾರಿ  ಬೆಂಗಳೂರು: ವಿದ್ಯಾರ್ಥಿ ಸಂಘಟನೆಯಿಂದ ಆರಂಭವಾದ ಸಾರ್ವಜನಿಕ ಬದುಕಿನ ಪಯಣ, ಪಕ್ಷ

You cannot copy content of this page