ವೇಣೂರು ಕ್ರೈಸ್ಟ್ ದಿ ಕಿಂಗ್ ಚರ್ಚ್ ನಲ್ಲಿ ಭಕ್ತಿಭಾವದ ಪವಿತ್ರ ಪ್ರಸಾದದ ಮೆರವಣಿಗೆ
ವಾರ್ಷಿಕ ಹಬ್ಬದ ಪೂರ್ವಭಾವಿಯಾಗಿ ಸಂಭ್ರಮದ ಆಚರಣೆ – ಪ್ರಧಾನ ಬಲಿಪೂಜೆಗೆ ಫಾದರ್ ಜೈಸನ್ ಮೊನಿಸ್ ನೇತೃತ್ವ

ಬೆಳ್ತಂಗಡಿ ತಾಲೂಕಿನ ವೇಣೂರು ಕ್ರೈಸ್ಟ್ ದಿ ಕಿಂಗ್ ಚರ್ಚಿನಲ್ಲಿ ವಾರ್ಷಿಕ ಹಬ್ಬದ ಪೂರ್ವಭಾವಿಯಾಗಿ ನಡೆಯುವ ಪವಿತ್ರ ಪ್ರಸಾದದ ಮೆರವಣಿಗೆ (ಕೊಂಪ್ರಿಚೊ ಆಯ್ತಾರ್) ಇಂದು ನವಂಬರ್ 22ರಂದು ಭಾನುವಾರ ಭಕ್ತಿಭಾವದಿಂದ ನಡೆಯಿತು.









ಚರ್ಚ್ ನಿಂದ ಆರಂಭಗೊಂಡ ಪವಿತ್ರ ಪ್ರಸಾದದ ಮೆರವಣಿಗೆಯು ಸರಕಾರಿ ಪ್ರೌಢಶಾಲೆಯವರೆಗೆ ಸಾಗಿತು. ಬಳಿಕ ಅಲ್ಲಿಂದ ಮತ್ತೆ ಚರ್ಚ್ ಗೆ ಮರಳಿತು. ಮೆರವಣಿಗೆಯಲ್ಲಿ ಭಕ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಪಾಲ್ಗೊಂಡು ಧಾರ್ಮಿಕ ಆಚರಣೆಗೆ ಮೆರುಗು ನೀಡಿದರು.








ಈ ಸಂದರ್ಭದಲ್ಲಿ ಲೊರೆಟ್ಟೊ ಚರ್ಚ್ ನ ಸಹಾಯಕ ಧರ್ಮಗುರು ವಂದನೀಯ ಫಾದರ್ ಜೈಸನ್ ಮೊನಿಸ್ ಅವರು ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿ, ಭಕ್ತರಿಗೆ ಸಂದೇಶ ನೀಡಿದರು.


ಕಾರ್ಯಕ್ರಮದಲ್ಲಿ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾದರ್ ಎಡ್ವಿನ್ ಸಂತೋಷ್ ಮೊನಿಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷೆ ಸುನೀತಾ ರೇಗೊ, ಕಾರ್ಯದರ್ಶಿ ಹೆನ್ರಿ ಮೊರಾಸ್, ಆಯೋಗಗಳ ಸಂಯೋಜಕಿ ಲತಾ ಮಸ್ಕರೇನ್ಹಸ್ ಹಾಗೂ ವಂದನೀಯ ಫಾದರ್ ಸಿಲ್ವೆಸ್ಟರ್ ರೇಗೊ ಸೇರಿದಂತೆ ಹಲವರು ಉಪಸ್ಥಿತರಿದ್ದರು.




