November 22, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನೆರಿಯ ಗ್ರಾಮಸ್ಥರ ಹಿತಕ್ಕಾಗಿ ಒಗ್ಗಟ್ಟಿನ ಹೆಜ್ಜೆ – ನಾಗರಿಕರ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ

ಬೆಳ್ತಂಗಡಿ ಗ್ರಾಮದ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾಗೂ ನಾಗರಿಕರ ನ್ಯಾಯಯುತ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ನೆರಿಯ ಗ್ರಾಮದಲ್ಲಿ ನಾಗರಿಕರ ಹಿತರಕ್ಷಣಾ ಸಮಿತಿಯನ್ನು ರಚಿಸಲಾಗಿದೆ.

ಈ ಸಂಬಂಧ ಗಂಡಿಬಾಗಿಲಿನ ಸಿಯೋನ್ ಆಶ್ರಮ ಟ್ರಸ್ಟ್ (ರಿ.)ನಲ್ಲಿ ನೆರಿಯ ಗ್ರಾಮದ ನಾಗರಿಕರ ಹಿತರಕ್ಷಣಾ ವೇದಿಕೆಯ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು.ಸಿ. ಪೌಲೋಸ್ ವಹಿಸಿದ್ದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಕ್ಷಿತ್ ಶಿವರಾಂ, ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಪಿ.ಟಿ. ಸೆಬಾಸ್ಟಿಯನ್, ನೆರಿಯ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಮಹಮ್ಮದ್ ಮತ್ತು ಅಶ್ರಫ್, ಸಮಾಜಸೇವಕ ಪ್ರವೀಣ್ ಹಳ್ಳಿಮನೆ ಉಜಿರೆ, ಪಂಚಾಯತ್‌ನ ಮಾಜಿ ಸದಸ್ಯ ಎಂ.ಜೆ. ಸೆಬಾಸ್ಟಿಯನ್ ಹಾಗೂ ಗ್ರಾಮಸ್ಥ ಮಂಜಪ್ಪ ಕೊಲೋಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಹಾಗೂ ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಪಿ.ಟಿ. ಸೆಬಾಸ್ಟಿಯನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ:

ಸಭೆಯಲ್ಲಿ ನೆರಿಯ ಗ್ರಾಮದ ನಾಗರಿಕರು ತಮ್ಮ ಪ್ರದೇಶದಲ್ಲಿ ಎದುರಿಸುತ್ತಿರುವ ವಿವಿಧ ಸಮಸ್ಯೆಗಳು, ಸಂಕಷ್ಟಗಳು ಹಾಗೂ ಬೇಡಿಕೆಗಳನ್ನು ವಿವರವಾಗಿ ಪ್ರಸ್ತಾಪಿಸಿದರು. ಈ ಕುರಿತು ಸಭಾಧ್ಯಕ್ಷರು ಮತ್ತು ಮುಖ್ಯ ಅತಿಥಿಗಳೊಂದಿಗೆ ಸುದೀರ್ಘ ಚರ್ಚೆ ನಡೆಯಿತು.

ಗ್ರಾಮಸ್ಥರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅತಿಥಿಗಳು ಭರವಸೆ ನೀಡಿದರು. ನಾಗರಿಕರ ನ್ಯಾಯಯುತ ಹಕ್ಕುಗಳು ಮತ್ತು ಬೇಡಿಕೆಗಳ ಪರವಾಗಿ ನಡೆಯುವ ಪ್ರಯತ್ನಗಳಲ್ಲಿ ಸದಾ ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದರು. ಗ್ರಾಮಸ್ಥರ ಸಂಕಷ್ಟಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ನಿರಂತರ ಸಹಕಾರ ನೀಡುವುದಾಗಿಯೂ ಭರವಸೆ ವ್ಯಕ್ತಪಡಿಸಿದರು.

ಹಿತರಕ್ಷಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ:

ಸಭೆಯ ನಿರ್ಣಯದಂತೆ ನೆರಿಯ ಗ್ರಾಮದ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡಲು ನಾಗರಿಕರ ಹಿತರಕ್ಷಣಾ ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ಗೌರವಾಧ್ಯಕ್ಷರಾಗಿ ರಕ್ಷಿತ್ ಶಿವರಾಂ ಮತ್ತು ಡಾ. ಯು.ಸಿ. ಪೌಲೋಸ್, ಅಧ್ಯಕ್ಷರಾಗಿ ಸೆಬಾಸ್ಟಿಯನ್ ಎಂ.ಜೆ., ಉಪಾಧ್ಯಕ್ಷರಾಗಿ ಮಹಮ್ಮದ್ ಮತ್ತು ಅಶ್ರಫ್, ಕಾರ್ಯದರ್ಶಿಗಳಾಗಿ ಕೊರಗಪ್ಪ ಕೊಲೋಡಿ ಮತ್ತು ಮಿಥುನ್ ಅವರನ್ನು ಆಯ್ಕೆ ಮಾಡಲಾಯಿತು.

ಸದಸ್ಯರಾಗಿ ಬಿಜು ನಡುವತ್ತೇಟ್, ತ್ರೇಸಿಯಮ್ಮ, ರಾಜಪ್ಪ ಗೌಡ ಅಂಬ್ಲೆ ಹಾಗೂ ಮಮತ ಕೊಲೋಡಿ ಆಯ್ಕೆಯಾಗಿದ್ದಾರೆ.

ನೆರಿಯ ಗ್ರಾಮದ ನಾಗರಿಕರ ಸಮಸ್ಯೆಗಳಿಗೆ ಸಂಘಟಿತವಾಗಿ ಧ್ವನಿಯಾಗುವುದು, ಗ್ರಾಮಸ್ಥರ ನ್ಯಾಯಯುತ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವುದು ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದು ಸಮಿತಿಯ ಪ್ರಮುಖ ಉದ್ದೇಶವಾಗಿದೆ.

ಗ್ರಾಮದ ಅಭಿವೃದ್ಧಿ ಮತ್ತು ನಾಗರಿಕರ ಹಿತರಕ್ಷಣೆಗೆ ಒಗ್ಗಟ್ಟಿನ ವೇದಿಕೆಯಾಗಿ ಈ ಸಮಿತಿ ಕಾರ್ಯನಿರ್ವಹಿಸಲಿದೆ ಎಂಬ ಆಶಯವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.

You may also like

News

ಸಚಿವ ಯು.ಟಿ. ಖಾದರ್ ಅವರಿಗೆ DAPC ನಿಯೋಗದ ಮನವಿ

ಕ್ರೈಸ್ತ ಸಮುದಾಯಕ್ಕೆ 3C ಮೀಸಲಾತಿ ಹಾಗೂ ನ್ಯಾಯಯುತ ಪ್ರಾತಿನಿಧ್ಯಕ್ಕೆ ಆಗ್ರಹ ಬೆಂಗಳೂರು: ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರನ್ನು ಡಯಾಸಿಸ್ ಆಫ್ ಆಲ್
News

ಲಯನ್ ಸಮುದಾಯ ಭವನದ ಕನಸಿಗೆ ಹೊಸ ಮುನ್ನುಡಿ – ‘ಕೃಷ್ಣ’ ವಾಣಿಜ್ಯ ಸಮುಚ್ಚಯಕ್ಕೆ ಶಿಲಾನ್ಯಾಸ

ಮಂಗಳೂರು: ಸಮಾಜಮುಖಿ ಸೇವಾ ಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಲಯನ್ಸ್ ಸೇವಾ ಟ್ರಸ್ಟ್ ಕಂಕನಾಡಿ–ಪಡೀಲ್‌ನ ಬಹುಕಾಲದ ಕನಸಾದ ‘ಲಯನ್ ಸಮುದಾಯ ಭವನ’ ನಿರ್ಮಾಣ ಯೋಜನೆಗೆ ಮಹತ್ವದ

You cannot copy content of this page