ಕರಾವಳಿ ಹಾಲುಮತ ಕುರುಬರ ಸಂಘ (ರಿ.) ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು – 537ನೇ ಜಯಂತೋತ್ಸವ ಕಾರ್ಯಕ್ರಮ
ಕರಾವಳಿ ಹಾಲುಮತ ಕುರುಬರ ಸಂಘ (ರಿ.) ದಕ್ಷಿಣ ಕನ್ನಡ ಮಂಗಳೂರು ಇವರ ನೇತೃತ್ವದಲ್ಲಿ ದಾಸವರೇಣ್ಯ ದಾರ್ಶನಿಕ ಕವಿ ಸಂತ ಶ್ರೇಷ್ಠ ಶ್ರೀ ಕನಕದಾಸರ 537ನೇ ಜಯಂತೋತ್ಸವ ಕಾರ್ಯಕ್ರಮ ದಶಂಬರ್ 1ರಂದು ಭಾನುವಾರ ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಿಂದ ಗೋಕರ್ಣನಾಥ ಕಾಲೇಜು ಸಭಾಭವನದವರೆಗೆ ಕನಕದಾಸರ ಭಾವಚಿತ್ರದೊಂದಿಗೆ ಡೊಳ್ಳು ಕುಣಿತ ಹಾಗೂ ಸಮಾಜದ ಹೆಣ್ಣು ಮಕ್ಕಳು ಕುಂಭ ಮೇಳದೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಮುಖ್ಯಸ್ಥ ವಿಶ್ವಾಸ್ ಕುಮಾರ್ ದಾಸ್ ಮೆರವಣಿಗೆಯನ್ನು ಉದ್ಘಾಟಿಸಿದರು.
ಬಳಿಕ ಸಭಾ ಕಾರ್ಯಕ್ರಮ ಗೋಕರ್ಣನಾಥ ಕಾಲೇಜು ಸಭಾಭವನದಲ್ಲಿ ನೇರವೇರಿತು. ಸಾಮರಸ್ಯ ವೇದಿಕೆ ಮಂಗಳೂರು ಇದರ ಅಧ್ಯಕ್ಷೆ ಮಂಜುಳಾ ನಾಯಕ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಅನಾವರಣವನ್ನು ಚಿಂತಕರು, ಲೇಖಕರು ಎಂ.ಜಿ. ಹೆಗ್ಡೆಯವರು ನೆರವೇರಿಸಿದರು. ಸಭಾ ಕಾರ್ಯ್ರಮದಲ್ಲಿ SSLC ಹಾಗೂ ದ್ವಿತೀಯ PUC ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ (ರಿ.) ಕರ್ನಾಟಕ ರಾಜ್ಯ ಪ್ರ. ಕಾರ್ಯದರ್ಶಿ ಧನು ಬಿ.ಆರ್. ಗೌಡ ನಿರೂಪಿಸಿದರು.
ಸಭಾ ಕಾರ್ಯ್ರಮದಲ್ಲಿ ಕರಾವಳಿ ಹಾಲುಮತ ಕುರುಬರ ಸಂಘದ ಅದ್ಯಕ್ಷ ಚಂದ್ರಪ್ಪ ಬಿ.ಕೆ., ಗೌರವಾಧ್ಯಕ್ಷ ಡಿ.ಎಸ್. ನಾಗರಾಳ, ಕಾರ್ಯಾಧ್ಯಕ್ಷ ಅರುಣ್ ಕುಮಾರ್, ಮಾಜಿ ಅಧ್ಯಕ್ಷ ಪುಟ್ಟಪ್ಪ ಕೆ.ಕೆ., ಗೌರವ ಸಲಹೆಗಾರ ಹನುಮಂತ ರೋಣದ, ಉಪಾಧ್ಯಕ್ಷ ಹನುಮಂತ ಪ್ಪ.ವೈ. ನರಗುಂದ, ಲಕ್ಷ್ಮಿ ಹೀರೆ ಕುರುಬರ್, ಪ್ರಾ. ಕಾರ್ಯದರ್ಶಿ ಯಮುನಪ್ಪ ಹೆಚ್., ಸಹ ಕಾರ್ಯದರ್ಶಿ ಶರಣಪ್ಪ, ಕೋಶಾಧಿಕಾರಿ ಮಂಜುನಾಥ್, ಸಹ ಕೋಶಾಧಿಕಾರಿ ಬಸವರಾಜ, ಸಂಘಟನಾ ಕಾರ್ಯದರ್ಶಿ ಶಿವರಾಜ್, ಹನುಮಂತ, ಸಾಬಣ್ಣ ಎಸ್. ಶಾಂತಪ್ಪ ಹಾಗೂ ಮತ್ತಿತರು ಉಪಸ್ಥಿತರಿದ್ದರು.