May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ಜನರಿಂದ ನಾನು ಮೇಲೆ ಬಂದೆ” ಎಂದ – ನಿರ್ದೇಶಕ ನವಿಲುಗರಿ ನವೀನ್ ಪಿ.ಬಿ.

ಇತ್ತೀಚಿಗೆ ಬಿಡುಗೆಗೊಂಡ ಲೆಜೆಂಡ್ ಡೈರೆಕ್ಟರ್ ಸಿನಿಮಾ ಗೆಲುವಿನ ಒಂದು ತಿಂಗಳ ಸಂಭ್ರಮಾಚರಣೆಯನ್ನು ಆಚರಿಸಿಕೊಂಡಿತ್ತು. ಈ ಸಮಾರಂಭದಲ್ಲಿ ಲೆಜೆಂಡ್ ಡೈರೆಕ್ಟರ್ ಸಿನಿಮಾಗಾಗಿ ದುಡಿದ ಕಲಾವಿದರಿಗೆ, ತಾಂತ್ರಿಕ ವರ್ಗದವರಿಗೆ ಹಾಗೂ ಸಿನಿಮಾ ಗೆಲುವಿಗೆ ಕಾರಣೀಭೂತರಾದ ಅಭಿಮಾನಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಇದೇ ಸಂತೋಷದ ಸಮಯದಲ್ಲಿ ಹ್ಯಾಟ್ರಿಕ್ ವರ್ಲ್ಡ್ ರೆಕಾರ್ಡ್ ಹೋಲ್ಡರ್ ಆದ ನಟ, ನಿರ್ದೇಶಕ ನವಿಲುಗರಿ ನವೀನ್ ಪಿ.ಬಿ. ಇವರ ನೂತನ ಚಿತ್ರ “ಜನರಿಂದ ನಾನು ಮೇಲೆ ಬಂದೆ”  ಎಂಬ  ಟೈಟಲ್ ಕೂಡ ಅನಾವರಣಗೊಂಡಿತ್ತು.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಅಧ್ಯಕ್ಷರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರಾದ ಎಸ್.ಎ. ಚಿನ್ನೇಗೌಡರು, ಶೈಲಜಾ ದ್ವಾರಕೀಶ್, ದೇವರಾಜ್ ಗೌಡ, ಗಂಡಸಿ ಸದಾನಂದ ಸ್ವಾಮಿ, ಸತ್ಯಜಿತ್, ರಮಣ ಕಣಗಾಲ್, ಶಿವಕುಮಾರ್ ಆರಾಧ್ಯ, ಸಂದೀಪ್ ಮಾಲನಿ, ಶಿವಣ್ಣ, ಗಂಧರ್ವ ರಾಜ್, ವಿಶಾಲ ಸತೀಶ್ ಹಾಗೂ ಪ್ರಣವ್ ಸತೀಶ್  ಉಪಸ್ಥಿತರಿದ್ದರು.

ಜನರಿಂದ ನಾನು ಮೇಲೆ ಬಂದೆ ಸಿನಿಮಾದಲ್ಲಿ ಲೆಜೆಂಡ್ ಡೈರೆಕ್ಟರ್ ಸಿನಿಮಾದಲ್ಲಿ ಜನ ಮೆಚ್ಚಿದ ಕುಚುಕು ಜೋಡಿ ಆದ ಗಂಧರ್ವ ರಾಜ್ (ಶಂಕರ) ಮತ್ತು ನವಿಲುಗರಿ ನವೀನ್ ಪಿ.ಬಿ. ಇಬ್ಬರು ನಾಯಕ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶದ ಜವಾದ್ದರಿಯನ್ನು ನವಿಲುಗರಿ ನವೀನ್ ಪಿ.ಬಿ. ಹೊತ್ತುಕೊಂಡಿದ್ದಾರೆ. ಮೊದಲ ಬಾರಿ ನಿರ್ಮಾಪಕರಾಗಿ ಹೇಮಾವತಿ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅತೀ ಶ್ರೀಘ್ರದಲ್ಲೇ ಚಿತ್ರೀಕರಣ ಶುರುಮಾಡಲಿದ್ದೇವೇ ಎಂದು ಚಿತ್ರದ ನಿರ್ದೇಶಕರು ತಿಳಿಸಿದರು.

You may also like

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ
News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು

You cannot copy content of this page