ಚಲನಚಿತ್ರ ನಟ ಉಪೇಂದ್ರ ಬಂಟ್ವಾಳದ ಮೊಡಂಕಾಪು ವನದುರ್ಗ ದೇವಸ್ಥಾನಕ್ಕೆ ಭೇಟಿ
ಬಂಟ್ವಾಳ : ಬಹುಭಾಷಾ ಚಲನಚಿತ್ರ ನಟ ಉಪೇಂದ್ರ ಅವರು ಬಂಟ್ವಾಳ ತಾಲೂಕಿನ ಮೊಡಂಕಾಪು ಬಳಿಯ ವನದುರ್ಗ ದೇವಸ್ಥಾನಕ್ಕೆ ದಶಂಬರ್ 3ರಂದು ಮಂಗಳವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಅವರು ಸ್ವತಃ ನಿರ್ದೇಶಿಸಿ ನಟಿಸಿರುವ ಹೊಸ ಚಲನಚಿತ್ರ ‘ಯುಐ’ ಯಶಸ್ವಿಯಾಗಲೆಂದು ವನದುರ್ಗಾ ಕ್ಷೇತ್ರದಲ್ಲಿ ಸರ್ವಾಂಲಂಕಾರ ಸೇವೆ ಸಲ್ಲಿಸಿದರು. ಮಧ್ಯಾಹ್ನ ಪೂಜೆ ಬಳಿಕ ಕ್ಷೇತ್ರದಲ್ಲಿ ಅನ್ನದಾನ ಪ್ರಸಾದ ಪಡೆದು ಮಂಗಳೂರಿಗೆ ಪ್ರಯಾಣ ಬೆಳೆಸಿದರು. ಚಲನಚಿತ್ರ ನಿರ್ಮಾಪಕ ಶ್ರೀಕಾಂತ್, ಸಂಗೀತ ನಿರ್ದೇಶಕ ವೇಲುಹರಿ, ನವೀನ್ ಮನೋಹರ್ ಅವರ ಜೊತೆಗಿದ್ದರು. ಮೊಡಂಕಾಪು ವನದುರ್ಗ ಕ್ಷೇತ್ರದ ಗುರುದತ್ ಶೆಣೈ, ಪಾಂಡುರಂಗ ಶೆಣೈ ಉಪಸ್ಥಿತರಿದ್ದರು. ಮೊಡಂಕಾಪು ಕ್ಷೇತ್ರದಲ್ಲಿರುವ ವಿಶೇಷ ಕರೆಯ ಬಗ್ಗೆ ರಾಜೇಶ್ ಭಟ್ ಮಾಹಿತಿ ನೀಡಿದರು.