ಮಂಗಳೂರಿನ ಝಯೋನ್ ಪ್ರೊಡಕ್ಶನ್ಸ್ ಹಾಗೂ ಕಲಾಕುಟಾಂ ಹವ್ಯಾಸಿ ನಾಟಕ ತಂಡದ ವತಿಯಿಂದ ‘ಗುಡ್ ಬೈ’ ಟೆಲಿನಾಟಕ ವಿಡಿಯೋ ಬಿಡುಗಡೆ
ಮಂಗಳೂರು : ಝಯೋನ್ ಪ್ರೊಡಕ್ಶನ್ಸ್ ಹಾಗೂ ಪ್ರತಿಷ್ಠಿತ ಕಲಾಕುಟಾಂ ಹವ್ಯಾಸಿ ನಾಟಕ ತಂಡದ ವತಿಯಿಂದ ಗುಡ್ ಬೈ ಟೆಲಿನಾಟಕ ವಿಡಿಯೋ ಬಿಡುಗಡೆ ಸಮಾರಂಭವು ಬೆಂದೂರ್ ವೆಲ್ ನಲ್ಲಿರುವ ಕರಾವಳಿ ಸುದ್ದಿ ಕಛೇರಿಯ ಸಭಾಂಗಣದಲ್ಲಿ ದಶಂಬರ್ 1ರ ಆದಿತ್ಯವಾರ ಸಂಜೆ ನಡೆಯಿತು.
ಗುಡ್ ಬೈ ನಾಟಕವನ್ನು ಕಲಾಕುಟಾಂ ಹವ್ಯಾಸಿ ನಾಟಕ ತಂಡದ ಸಂಚಾಲಕ ಜೋನ್ ಎಮ್. ಪೆರ್ಮನ್ನೂರು ಬರೆದು ನಿರ್ದೇಶಿಸಿದ್ದು, ನಿರ್ಮಾಣದಲ್ಲಿ ಸುನಿತಾ ಡಿಸೋಜಾ ಶಾರ್ಜಾ ಮತ್ತು ಕಲಾಕುಟಾಂ ತಂಡ ಜವಾಬ್ದಾರಿ ನಿರ್ವಹಿಸಿದೆ. ಪ್ರೇಮಿ ಫೆರ್ನಾಂಡಿಸ್ ನಾಟಕಕ್ಕೆ ಅನುಗುಣವಾಗಿ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡಿದರು. ಕಲಾಕುಟಾಂನ ಬಾಲ ಕಲಾವಿದ ಮಾಸ್ಟರ್ ಕೇಡನ್ ಮಾರ್ಕ್ ಫೆರ್ನಾಂಡಿಸ್ ಮತ್ತು ಇತರ ಬಾಲ ಕಲಾವಿದರಾದ ಶಾಲನ್, ಶರಲ್, ರಿಯೋನ್, ರಿಷೋನ್, ರಿನೋನ್ ಮಾರ್ಟಿಸ್ ಹಾಗೂ ಸಮೈರಾ ಫೆರ್ನಾಂಡಿಸ್ ರೊಂದಿಗೆ ಸೇರಿ ವಿಡಿಯೋ ಬಿಡುಗಡೆಗೊಳಿಸಿದರು.
ಕಲಾಕುಟಾಂ ಹವ್ಯಾಸಿ ನಾಟಕ ತಂಡದ ಮಾಧ್ಯಮ ಮಿತ್ರ, ಕರಾವಳಿ ಸುದ್ದಿ ಪತ್ರಿಕೆಯ ಸಂಪಾದಕ ರೋಷನ್ ಬೊನಿಫಾಸ್ ಮಾರ್ಟಿಸ್, ಕಲಾಕುಟಾಂ ಹವ್ಯಾಸಿ ನಾಟಕ ತಂಡದ ಕಲಾಕಾರರು ಹಾಗೂ ಹಿತೈಷಿಗಳು ಸಮಾರಂಭದಲ್ಲಿ ಹಾಜರಿದ್ದರು. ಕಲಾವಿದ ಅವನೀಶ್ ಮಲ್ಯ ಇವರು ಪ್ರಾರ್ಥನೆ ಹಾಡಿದರು. ಕಲಾಕುಟಾಂ ಹವ್ಯಾಸಿ ನಾಟಕ ತಂಡದ ಸಂಚಾಲಕ ಜೋನ್ ಎಮ್. ಪೆರ್ಮನ್ನೂರು ರವರು, ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು. ರಶ್ಮಿ ಕಿರಣ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.