ಮಂಗಳೂರಿನ ಬಹುಭಾಷಾ ಪರಿಣಿತ ಗಾಯಕ ರೋನಿ ಕ್ರಾಸ್ತಾ ಇವರಿಗೆ ಕರ್ನಾಟಕ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರಿನ ಪ್ರತಿಷ್ಠಿತ ಕಲಾಭೂಮಿ ಸಂಸ್ಥೆಯಿಂದ ಕರ್ನಾಟಕ ರಾಜ್ಯದ ವಿವಿಧ ರಂಗ ವೇದಿಕೆಗಳಲ್ಲಿ ಸಾಧನೆ ಮಾಡಿದ 69 ಸಾಧಕರಿಗೆ ಕರ್ನಾಟಕ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಗೀತದಲ್ಲಿ ಸಾಧನೆ ಮಾಡಿದ ಮಂಗಳೂರಿನ ಕುಲಶೇಖರದ ಬಹುಭಾಷಾ ಪರಿಣಿತ ಗಾಯಕ ರೋನಿ ಕ್ರಾಸ್ತಾ ಇವರಿಗೆ ‘ಕರ್ನಾಟಕ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ’ ನವೆಂಬರ್ 29 ರಂದು ನೀಡಿ ಗೌರವಿಸಿದರು.