ದಶಂಬರ್ 7 ಮತ್ತು 8ರಂದು ಗೋಳ್ತಮಜಲು ಜೆಮ್ ಪಬ್ಲಿಕ್ ಸ್ಕೂಲ್ ರಜತ ಮಹೋತ್ಸವ ಹಾಗೂ ವಾರ್ಷಿಕೋತ್ಸವ

ಬಂಟ್ವಾಳ : ಗೋಳ್ತಮಜಲು ಜೆಮ್ ಪಬ್ಲಿಕ್ ಸ್ಕೂಲ್ ನ ರಜತ ಮಹೋತ್ಸವವು ದಶಂಬರ್ 7ರಂದು ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವು ದಶಂಬರ್ 8ರಂದು ನಡೆಯಲಿದೆ ಎಂದು ಶಾಲಾ ಸಂಚಾಲಕ ಹಾಜಿ ಜಿ. ಅಹಮದ್ ಮುಸ್ತಾಫ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಶಂಬರ್ 7ರಂದು ನಡೆಯುವ ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾತಿಮಾ ಮೆಮೋರಿಯಲ್ ಎಜ್ಯುಕೇಶನಲ್ ಟ್ರಸ್ಟ್ ಇದರ ಚೆರ್ಮೆನ್ ಹಾಜಿ ಜಿ. ಅಬೂಬಕ್ಕರ್ ಗೋಳ್ತಮಜಲು ವಹಿಸಲಿದ್ದು, ರಜತ ರತ್ನ ಸಂಚಿಕೆಯನ್ನು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಬಿಡುಗಡೆ ಗೊಳಿಸುವರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಚೆರ್ಮೆನ್ ಡಾ. ಎಂ. ಮೋಹನ್ ಆಳ್ವ ಬೆಳ್ಳಿ ಹಬ್ಬ ನಾಮಫಲಕ ಅನಾವರಣ ಗೊಳಿಸುವರು. ಬ್ಲೂ ರಾಯಲ್ ಗ್ರೂಫ್ ಆಫ್ ಕಂಪೆನೀಸ್ ಇದರ ಮ್ಯಾನೆಜಿಂಗ್ ಡೈರೆಕ್ಟರ್ ರೊನಾಲ್ಡ್ ಮಾರ್ಟಿಸ್ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ. ರಮಾನಾಥ ರೈ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ, ಡಿಡಿಪಿಐ ವೆಂಕಟೇಶ್ ಪಟಾಗರ್, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಪುರುಷೋತ್ತಮ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಭಾಗವಹಿಸಲಿದ್ದಾರೆ.
ದಶಂಬರ್ 8ರಂದು ನಡೆಯುವ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾತಿಮಾ ಮೆಮೋರಿಯಲ್ ಎಜ್ಯುಕೇಶನಲ್ ಟ್ರಸ್ಟ್ ನ ಮ್ಯಾನೆಜಿಂಗ್ ಟ್ರಸ್ಟಿ ಹಾಜಿ ಜಿ. ಮುಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರಿನ ಭಾರತ್ ಇನ್ಫ್ರಾಟೆಕ್ ಇದರ ಮ್ಯಾನೆಜಿಂಗ್ ಡೈರೆಕ್ಟರ್ ಮುಸ್ತಫಾ ಎಸ್.ಎಂ. ಅತಿಥಿಗಳಾಗಿ ಭಾಗವಹಿಸುವರು. ಮೆಮೋರಿಯಲ್ ಎಜ್ಯುಕೇಶನಲ್ ಟ್ರಸ್ಟ್ ಇದರ ಉಪ ಚೆರ್ಮೆನ್ ಹಾಜಿ ಜಿ. ಅಬ್ದುಲ್ ರಝಾಕ್ ಧ್ವಜಾರೋಹಣಗೈಯುವರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಕೆ.ಎಸ್. ಯಾಸಿರ್ ಅವರ ಕಲ್ಲಡ್ಕ ಮ್ಯೂಸಿಯಂ ಇದರ ವಸ್ತು ಪ್ರದರ್ಶನ, ಕುದ್ರೋಳಿ ಗಣೇಶ್ ಅವರಿಂದ ಮ್ಯಾಜಿಕ್ ಶೋ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹಾಜಿ ಜಿ. ಅಹಮದ್ ಮುಸ್ತಾಫ ತಿಳಿಸಿದ್ದಾರೆ.