ಓಂ ಶ್ರೀ ಗೆಳೆಯರ ಬಳಗ ನಾಯಿಲ ಅಶ್ರಯದಲ್ಲಿ “ನಮ್ಮ ಊರು ಸ್ವಚ್ಛ ಊರು” ಸ್ವಚ್ಛತಾ ಅಭಿಯಾನ
ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಓಂ ಶ್ರೀ ಗೆಳೆಯರ ಬಳಗ ನಾಯಿಲ ಓಂ ಶ್ರೀ ಮಹಿಳಾ ಮಂಡಳಿ, ಶ್ರೀದೇವಿ ಯುವಕ ಮಂಡಲ, ಎಂ.ವೈ.ಸಿ. ಮರ್ದೋಳಿ, ನವಜೀವನ ಗೇಮ್ಸ್ ಕ್ಲಬ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನರಿಕೊಂಬು ಇದರ ಸಹಯೋಗದಲ್ಲಿ ಶ್ರೀದೇವಿ ಯುವಕ ಮಂಡಲ ಕಾಪಿಕಾಡ್ ನಿಂದ ಎಸ್.ವಿ.ಎಸ್. ಶಾಲೆ ಪಾಣೆಮಂಗಳೂರು ತನಕ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಬಳಿಕ ಓಂ ಶ್ರೀ ಗೆಳೆಯರ ಬಳಗದ ಅಧ್ಯಕ್ಷ ಕಿರಣ್ ಆಟ್ಲೂರು ಮಾತನಾಡಿ, ಓಂ ಶ್ರೀ ಗೆಳೆಯರ ಬಳಗದ ಮುಂದಾಳತ್ವದಲ್ಲಿ ಪರಿಸರದ ಸಂಘ ಸಂಸ್ಥೆಗಳನ್ನು ಒಟ್ಟು ಸೇರಿಸಿ ಸ್ವಚ್ಛತಾ ಅಭಿಯಾನ ನಡೆಸುದರ ಜೊತೆಗೆ ಎಲ್ಲರೂ ಒಟ್ಟಾಗಿ ಉತ್ತಮ ಬಾಂಧವ್ಯದಿಂದ ಮುಂದಿನ ದಿನಗಳಲ್ಲಿ ಸಮಾಜಮುಖಿ ಕೆಲಸ ಮಾಡಲು ಸಹಕರಿಯಾಗಲಿದೆ, ಮುಂದಿನ ವರ್ಷ ನವಜೀವನದ ಗೇಮ್ಸ್ ಕ್ಲಬ್ ಅಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಎಲ್ಲರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಉಮೇಶ್ ನೆಲ್ಲಿಗುಡ್ಡೆ, ಶ್ರೀದೇವಿ ಯುವಕ ಮಂಡಲ ನಾಯಿಲ ಕಾಪಿಕಾಡ್ ಇದರ ಅಧ್ಯಕ್ಷ ಲೋಕೇಶ್ ಬೋರುಗುಡ್ಡೆ, ನವಜೀವನ ಗೇಮ್ಸ್ ಕ್ಲಬ್ ಇದರ ಅಧ್ಯಕ್ಷ ಸುಧೀರ್ ವಿದ್ಯಾನಗರ, ನವಜೀವನ ಹನುಮಾನ್ ಮಂದಿರದ ಅಧ್ಯಕ್ಷ ಶರತ್ ವಿದ್ಯಾನಗರ, ಎಂ.ವೈ.ಸಿ. ಮರ್ದೋಳಿಯ ಚರಣ್ ಕುಮಾರ್, ಓಂ ಶ್ರೀ ಮಹಿಳಾ ಮಂಡಳಿ ಅಧ್ಯಕ್ಷೆ ನಳಿನಿ ಶುಭಕರ ಉಪಸ್ಥಿತರಿದ್ದರು.