ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನದ ಪ್ರತಿಷ್ಟಾ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಭುವನೇಶ್ ಪಚಿನಡ್ಕ ಆಯ್ಕೆ
ಬಂಟ್ವಾಳ : ಕುಪ್ಪೆಟ್ಟು ಪಂಜುರ್ಲಿ ದೈವದ ಮೂಲಸ್ಥಾನ ಕುಪ್ಪೆಟ್ಟುಬರ್ಕೆ ಕರ್ಪೆ ಸಿದ್ಧಕಟ್ಟೆ ಬಂಟ್ವಾಳ ತಾಲೂಕು ಇದರ ಜೀರ್ಣೋದ್ಧಾರದ ಅಂಗವಾಗಿ ಕುಪ್ಪೆಟ್ಟು ಬರ್ಕೆಯಲ್ಲಿ ಆಡಳಿತ ಸಮಿತಿ ನೇತೃತ್ವದಲ್ಲಿ ಪ್ರತಿಷ್ಟಾ ಮಹೋತ್ಸವ ಸಮಿತಿ ರಚನೆ ಸಭೆ ನಡೆಯಿತು.
ಪ್ರತಿಷ್ಟ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಶುಭಲಕ್ಷ್ಮೀ ಸಮೂಹ ಸಂಸ್ಥೆಯ ಮಾಲಕರು, ಸಾಮಾಜಿಕ, ಧಾರ್ಮಿಕ ಮುಖಂಡರು ಭುವನೇಶ್ ಪಚಿನಡ್ಕ ಇವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ರತ್ನಾಕರ ಪೂಜಾರಿ ಮದಂಗೋಡಿ, ಕೋಶಾಧಿಕಾರಿಯಾಗಿ ಪ್ರವೀಣ್ ಕುಪ್ಪೆಟ್ಟು, ಗೌರವಾಧ್ಯಕ್ಷರುಗಳಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ಸತೀಶಚಂದ್ರ ಪಾನಿಲ ಮತ್ತು ಯಾದವ ಕೋಟ್ಯಾನ್ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಆಡಳಿತ ಟ್ರಸ್ಟ್ ನ ಅಧ್ಯಕ್ಷ ಹರೀಶ್ ಪೂಜಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು, ಸತೀಶ್ ಪೂಜಾರಿ ಅಲಕ್ಕೆ, ದೇವಪ್ಪ ಕರ್ಕೇರ, ಜಗದೀಶ್ ಕೊಯಿಲ ಉಪಸ್ಥಿತರಿದ್ದರು.