ನಾರಾಯಣ ಗುರುಗಳು ಮಾನವ ಸಮಾನತೆಯ ಹೊಸ ಶಕೆ ನಿರ್ಮಾಣದ ರೂವಾರಿ – ಬಿ. ಶ್ರೀಧರ ಅಮೀನ್
ಬಂಟ್ವಾಳ : ಶಿಕ್ಷಣ ಪಡೆದು ಬೌದ್ದಿಕ ಸ್ವಾತಂತ್ರ್ಯ ಪಡೆಯಿರಿ, ಸಂಘಟಿತರಾಗಿ ಚೈತನ್ಯಶೀಲರಾಗಿರಿ ಎಂಬ ಸರಳ ಸಂದೇಶಗಳನ್ನು ನೀಡುತ್ತಾ, ನಾರಾಯಣಗುರುಗಳು ಹೆಜ್ಜೆಹೆಜ್ಜೆಗೂ ಅದರ ನಿದರ್ಶನಗಳನ್ನು ಸಾಧಿಸಿ ತೋರಿಸಿದರು.
ಸಮಾಜದ ಕಟ್ಟಕಡೆಯ ಶೂದ್ರರು, ಮಹಿಳೆಯರು ಮತ್ತು ಕಾಯಕಜೀವಿಗಳಿಗಾಗಿ ತನ್ನ ಅನುಯಾಯಿಗಳ ಬೆಂಬಲದೊಂದಿಗೆ ಟೊಂಕಕಟ್ಟಿ ಯೋಜನೆಗಳ ರೂಪಿಸಿ ಮಾನವ ಸಮಾನತೆಯ ಹೊಸ ಶಕೆಯನ್ನು ನಿರ್ಮಿಸಿದರು ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಬಿ. ಶ್ರೀಧರ ಅಮೀನ್ ತಿಳಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಗಣೇಶ್ ಪೂಂಜರೆಕೋಡಿ ಹಾಗೂ ರಾಜೇಶ್ ಪೂಂಜರೆಕೋಡಿ ಇವರ ಮನೆಯಲ್ಲಿ ಯುವವಾಹಿನಿ ಬಂಟ್ವಾಳ ವತಿಯಿಂದ ನಡೆದ ಗುರುತತ್ವವಾಹಿನಿ 23 ನೇ ಮಾಲಿಕೆಯಲ್ಲಿ ಗುರು ಸಂದೇಶ ನೀಡಿದರು. ನಿತ್ಯ ಬದುಕಿನಲ್ಲಿ ಹರಿ ಗುರು ಸ್ಮರಣೆ ನಮ್ಮ ಬದುಕಿಗೆ ದಾರಿದೀಪ ಎಂದು ಪ್ರಶಸ್ತಿ ಪುರಸ್ಕೃತ ಹಿರಿಯ ಖ್ಯಾತ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಗೀತ ವಾದಕ ರಾಜೇಶ್ ಅಮ್ಟೂರು, ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷ ನಾರಾಯಣ ಪಲ್ಲಿಕಂಡ, ಕೋಶಾಧಿಕಾರಿ ಗೀತಾ ಜಗದೀಶ್, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಉದಯ್ ಮೆನಾಡು, ಲೋಹಿತ್ ಕನಪಾದೆ, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ರಾಜೇಶ್ ಸುವರ್ಣ, ನಾಗೇಶ್ ಪೊನ್ನೊಡಿ, ಶಿವಾನಂದ ಎಂ., ಸದಸ್ಯರಾದ ಪ್ರಶಾಂತ್ ಏರಮಲೆ, ಯತೀಶ್ ಬೊಳ್ಳಾಯಿ, ಜಗನ್ನಾಥ್ ಸುವರ್ಣ ಕಲ್ಲಡ್ಕ, ಹರೀಶ್ ಸಾಲ್ಯಾನ್ ಅಜೆಕಲ, ಶೈಲೇಶ್ ಕುಚ್ಚಿಗುಡ್ಡೆ, ಸುಲತಾ ಬಿ.ಸಿ. ರೋಡ್, ನಯನಾ ಜಯಾ ಪಚ್ಚಿನಡ್ಕ, ಜಗದೀಶ್ ತುಂಬೆ, ಜಯಾ ಪಚ್ಚಿನಡ್ಕ, ಯಶೋಧರ ಕಡಂಬಳಿಕೆ, ಶೈಲಜಾ ರಾಜೇಶ್, ಮತ್ತಿತರರು ಉಪಸ್ಥಿತರಿದ್ದರು.
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.