ಬಂಟ್ವಾಳ ತಾಲೂಕು ಮಟ್ಟದ ‘ಕೋಟಿ ಚೆನ್ನಯ ಕ್ರೀಡೋತ್ಸವ – 2025’ ದಶಂಬರ್ 8ರಂದು ಲಾಂಛನ ಬಿಡುಗಡೆ
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಬಿ.ಸಿ. ರೋಡ್ ಇವರ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ‘ಕೋಟಿ ಚೆನ್ನಯ ಕ್ರೀಡೋತ್ಸವ-2025’ ಇದರ ಲಾಂಛನ ಬಿಡುಗಡೆ ಸಮಾರಂಭ ದಶಂಬರ್ 8ರಂದು ಭಾನುವಾರ ಸಂಜೆ ಬಿ.ಸಿ. ರೋಡಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ.
ಲಾಂಛನವನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಟ್ರಸ್ಟಿ ಜಗದೀಶ್ ಡಿ. ಸುವರ್ಣ ಬಿಡುಗಡೆಗೊಳಿಸಲಿದ್ದು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ. ಸಂಜೀವ ಪೂಜಾರಿ ಗುರುಕೃಪಾ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಕ್ರೀಡೋತ್ಸವದ ಸಂಚಾಲಕ ಬೇಬಿ ಕುಂದರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.