ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸರಕಾರಿ ಪ್ರೌಢ ಶಾಲೆ ಕಲ್ಲಂಗಳ ಕೇಪುವಿನ ಎಸ್.ಎಸ್.ಎಲ್.ಸಿ. ತರಗತಿ ಮಕ್ಕಳಿಗೆ ಉಚಿತ ಟ್ಯೂಷನ್ ಕ್ಲಾಸ್ ಪ್ರಾರಂಭ
ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಜ್ಞಾನವಿಕಾಸ ಕಾರ್ಯಕ್ರಮದಡಿ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢ ಶಾಲೆ ಕಲ್ಲಂಗಳ ಕೇಪು ಇಲ್ಲಿನ ಎಸ್.ಎಸ್.ಎಲ್.ಸಿ. ತರಗತಿ ಮಕ್ಕಳಿಗೆ ಟ್ಯೂಷನ್ ಕ್ಲಾಸನ್ನು ಪ್ರಾರಂಭಿಸಲಾಯಿತು.
ಶಾಲಾ ಮಕ್ಕಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಶಿಕ್ಷಕಿ ಪೂರ್ಣಿಮ ಶಿಕ್ಷಣದ ಬಗ್ಗೆ ವೀರೇಂದ್ರ ಹೆಗ್ಡೆ ಇವರಿಗೆ ಇರುವ ಚಿಂತನೆಗಳು ಮೆಚ್ಚುವಂತಹದು. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿ ಯೋಜನೆಯಿಂದ ಶಾಲೆಗಳಿಗೆ ದೊರೆಯುವ ಅನುದಾನಗಳಿಗೆ ಧನ್ಯವಾದ ತಿಳಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಕೇಪು ಒಕ್ಕೂಟದ ಅಧ್ಯಕ್ಷ ವೆಂಕಪ್ಪ ಇವರು ವಹಿಸಿದ್ದರು. ಜ್ಞಾನವಿಕಾಸ ಕೇಂದ್ರದ ಸಂಯೋಜಕಿ ಹರಿಣಾಕ್ಷಿ, ಟ್ಯೂಷನ್ ಟೀಚರ್ ಚೈತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ಕೇಪು ಸೇವಾಪ್ರತಿನಿಧಿ ಜ್ಯೋತಿ ಸ್ವಾಗತಿಸಿ, ಕೇಪು ವಲಯದ ಮೇಲ್ವಿಚಾರಕರಾದ ಜಗದೀಶ್ ಕಾರ್ಯಕ್ರಮದ ಪ್ರಾಸ್ತವಿಕ ಮಾತುಗಳನ್ನಾಡಿ, ಯೋಜನೆಯಿಂದ ನಡೆಸಲ್ಪಡುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಶಿಕ್ಷಕ ರಮೇಶ್ ವಂದಿಸಿದರು. ಜ್ಞಾನವಿಕಾಸ ಸಮನ್ವಯಾ ಧಿಕಾರಿ ದೀಪ ಕಾರ್ಯಕ್ರಮ ನೀರೂಪಿಸಿದರು.