ನೇರಳಕಟ್ಟೆಯಲ್ಲಿ ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ಉದ್ಘಾಟನೆ
ಸೆಕೆಂಡ್ ಹ್ಯಾಂಡ್ ವಾಹನ ಮಾರಾಟದಲ್ಲಿ ಹೆಸರುವಾಸಿಯಾದ ಸಂಸ್ಥೆ
ಬಂಟ್ವಾಳ : ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳು, ಕಾರು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಮಿತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಎಚ್.ಎಂ.ಎಸ್. ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಸ್ಥಳಾಂತರಗೊಂಡು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಬಳಿ ದಶಂಬರ್ 8ರಂದು ಭಾನುವಾರ ಬೆಳಿಗ್ಗೆ ಶುಭಾರಂಭಗೊಂಡಿತು.
ಸಯ್ಯಿದ್ ಹಂಝ ತಂಙಳ್ ಅಲ್ ಹಾದಿ ನೂತನ ಮಳಿಗೆಯನ್ನು ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು. ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಪ್ರಾರ್ಥನೆ ನೆರವೇರಿಸಿದರು. ಸಾಬುಚ್ಚ ತಿಂಗಳಾಡಿ, ಹಾರಿಸ್ ಮುಸ್ಲಿಯಾರ್, ಕೊಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ, ಪ್ರಮುಖರಾದ ಹಮೀದ್ ಪರ್ಲೊಟ್ಟು, ಅಬ್ದುಲ್ ಖಾದರ್ ಕಬಕ, ಶರೀಫ್ ಸೂರ್ಯ, ಆಶಿಫ್ ಬೋಳಂತೂರು, ಇಬ್ರಾಹಿಂ ಎಸ್.ಎಂ.ಎಸ್. ಸಲೀಂ ಪರ್ಲೊಟ್ಟು ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಪ್ರಥಮ ಕಾರು ಖರೀದಿದಾರರಾದ ಜಾಫರ್ ಸ್ವಾದಿಕ್ ಅರ್ಶದಿ ಅವರಿಗೆ ಪಾಟ್ರಕೋಡಿ ತಂಙಳ್ ಅವರು ಕಾರಿನ ಕೀ ಹಸ್ತಾಂತರಿಸಿದರು. ಭಾರತ್ ವೆಹಿಕಲ್ ಬಜಾರ್ ಮಾಲೀಕ ಅಶ್ರಫ್ ತಿಂಗಳಾಡಿ ಸ್ವಾಗತಿಸಿ, ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.