June 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೆಲ್ಕಾರ್ ಮಹಿಳಾ ಕಾಲೇಜು ವಾರ್ಷಿಕ ಕ್ರೀಡಾಕೂಟ

ಬಂಟ್ವಾಳ : ಮಾರ್ನಬೈಲು ಇಲ್ಲಿನ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟವು ದಶಂಬರ್ 7ರಂದು ಶನಿವಾರ ಕಾಲೇಜು ಆವರಣದಲ್ಲಿ ಜರುಗಿತು.

ಕ್ರೀಡಾಕೂಟವನ್ನು ಉದ್ಘಾಟಿಸಿದ “ಕಲ್ಲಡ್ಕ ಮ್ಯೂಸಿಯಮ್” ನ ಮಾಲಕ ಕೆ.ಎಸ್. ಮೊಹಮ್ಮದ್ ಯಾಸೀರ್ ಮಾತನಾಡಿ, ಪಾಠದೊಂದಿಗೆ ಆಟವೂ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗಿದ್ದು, ಇದರಿಂದ ದೈಹಿಕ, ಮಾನಸಿಕ ಧೃಡತೆ, ಉಲ್ಲಾಸ ಹೆಚ್ಚಾಗುವುದರೊಂದಿಗೆ ಆರೋಗ್ಯ ವರ್ಧನೆಗೂ ಇದು ಸಹಕಾರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಮಜೀದ್ ಎಸ್. ಮಾತನಾಡುತ್ತಾ, ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಕ್ಷಮತೆಗೆ ಪೂರಕವಾಗಿದೆ, ಸ್ಪರ್ದೆಯಲ್ಲಿ ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದು ಹೇಳಿದರು.

ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ಸುನಿತಾ ಪಿರೇರಾ, ಉಪನ್ಯಾಸಕರಾದ ಹನೀಫ್ ಎಂ., ರಕ್ಷಿತಾ ಕುಮಾರಿ, ಸಂಪ್ರೀತ ಉಪಸ್ಥಿತರಿದ್ದರು. ಇದೇ ವೇಳೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕಲ್ಲಡ್ಕ ಮ್ಯೂಸಿಯಂನ ಸ್ಥಾಪಕ ಮೊಹಮ್ಮದ್ ಯಾಸಿರ್ ಅವರನ್ನು ಉಪನ್ಯಾಸಕ ಎಂ.ಡಿ. ಮಂಚಿ ಅವರು ಸನ್ಮಾನಿಸಿದರು. ವಿದ್ಯಾರ್ಥಿನಿ ಮಹ್ರೂಫ ಸ್ವಾಗತಿಸಿ, ಅಸ್ಬಹುನ್ನಿಸ ವಂದಿಸಿದರು. ನಝ್ಮಿಯ ಜಾಸ್ಮಿನ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು ಹಾಗೂ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

You may also like

News

ಮಂಗಳೂರಿನ ಕುವರಿಗೆ ಒಲಿದ ದೂರದರ್ಶನ ಮನ್ನಣೆ : ಬಿ-ಗ್ರೇಡ್ ಭರತನಾಟ್ಯ ಕಲಾವಿದೆಯಾಗಿ ರೆಮೋನಾ ಎವೆಟ್ ಪೆರೇರಾ ಆಯ್ಕೆ

ಕರಾವಳಿಯ ಸಾಂಸ್ಕೃತಿಕ ನಗರಿ ಮಂಗಳೂರಿನ ಪ್ರತಿಭಾನ್ವಿತ ಯುವತಿ, ಕುಮಾರಿ ರೆಮೋನಾ ಎವೆಟ್ ಪೆರೇರಾ ಅವರು ಪ್ರಸಾರ ಭಾರತಿಯ ದೂರದರ್ಶನ ಚಂದನ ವಾಹಿನಿ ನಡೆಸಿದ ಕಠಿಣ ಆಡಿಷನ್‌ನಲ್ಲಿ ಯಶಸ್ವಿಯಾಗಿ
News

ಕಂಬಳ ಕೋಣಗಳ ಮಾಲೀಕನಿಗೆ ಹಲ್ಲೆ, ಸುಲಿಗೆ ಯತ್ನ ಪ್ರಕರಣ – ಮೂವರು KCOCA ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು

ಪುತ್ತೂರಿನ ಕಜೆ ಲಾ ಚೇಂಬರ್ಸ್ ಇದರ ಪ್ರಖ್ಯಾತ ವಕೀಲರಾದ ಮಹೇಶ್ ಕಜೆ ಅವರು ಮಂಡಿಸಿದ ವಾದ ಕಂಬಳದಲ್ಲಿ ಗೆದ್ದ ಕೋಣಗಳ ಮಾಲೀಕನಿಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ

You cannot copy content of this page