ಮರ್ಹೂಂ ಅಶ್ರಫ್ ಕಲಾಯಿ ಸ್ಮರಣಾರ್ಥ ಎಸ್‌ಡಿಪಿಐ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಲಾಯಿ ಬ್ರಾಂಚ್ ಸಮಿತಿಯ ವತಿಯಿಂದ ಮರ್ಹೂಂ ಅಶ್ರಫ್ ಕಲಾಯಿ ಸ್ಮರಣಾರ್ಥ ಅನುಸ್ಮರಣಾ ಕಾರ್ಯಕ್ರಮ ಹಾಗೂ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಮತ್ತು ಕೆ.ಎಂ.ಸಿ. ಆಸ್ಪತ್ರೆ ರಕ್ತನಿಧಿ ಅತ್ತಾವರ, ಮಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 8ರಂದು ಆದಿತ್ಯವಾರ ಎಸ್‌ಡಿಪಿಐ ಕಲಾಯಿ ಬ್ರಾಂಚ್ ಅಧ್ಯಕ್ಷರಾದ ಮಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ A.R. ಹೌಸ್ ಕಲಾಯಿಯಲ್ಲಿ ನಡೆಯಿತು. ಮದೀನಾ ಜುಮ್ಮಾ ಮಸೀದಿ ಕಲಾಯಿ ಧರ್ಮ ಗುರುಗಳಾದ ಝುಬೈರ್ ಫೈಝಿ ದುವಾ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಉದ್ಘಾಟನಾ ಭಾಷಣವನ್ನು ಮಾಡಿದರು. ಎಸ್‌ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ S.H. ಮತ್ತು ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಮೂನಿಷ್ ಆಲಿ ಅತಿಥಿ ಭಾಷಣವನ್ನು ಮಾಡಿದರು. ಮಹಿಳೆಯರು ಸೇರಿ 110 ಜನಸ್ನೇಹಿಗಳು ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಕರಾಟೆಯಲ್ಲಿ ವಿಶ್ವ ದಾಖಲೆ ಬರೆದ ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಸೇರ್ಪಡೆಗೊಂಡ ಯು.ಕೆ. ಅಬ್ದುಲ್ ಮುಹಿಝ್ ಕಲಾಯಿ ಹಾಗೂ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕರ 73 K.G. ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಮಹಮ್ಮದ್ ಬಿಲಾಲ್ ಕಲಾಯಿ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ತಲಪಾಡಿ, ಎಸ್‌ಡಿಪಿಐ ಕಳ್ಳಿಗೆ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ನೌಶಾದ್ ಕಲಾಯಿ, ಅಮ್ಮುಂಜೆ ಗ್ರಾಮ ಪಂಚಾಯತ್ ಸದಸ್ಯರಾದ ನೆಪೀಸ ಖಾಲಿದ್, ಫೌಝಿಯಾ ಹನೀಫ್ ಅಬ್ದುಲ್ ರಝಾಕ್ T.H. ಹಾಗೂ ಮಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಇಲ್ಯಾಸ್ ಪಾದೆ , HIWEC ಕಮಿಟಿ ಕಲಾಯಿ ಇದರ ಅಧ್ಯಕ್ಷರಾದ ಫಯಾಝ್ ಗರಡಿ ಮತ್ತು ನಿಸಾರ್ ಅಹ್ಮದ್ ಯು.ಕೆ. ಕಾರ್ಯದರ್ಶಿ ಮದೀನಾ ಜುಮ್ಮಾ ಮಸೀದಿ ಕಲಾಯಿ, ಮಜೀದ್ ಗರಡಿ ಮಾಲಕರು ಎಂ.ಕೆ. ಸರ್ವಿಸ್, ಅಬ್ದುಲ್ ರಹಿಮಾನ್ ಮಾಲಕರು ಆರ್.ವಿ. ಸೇಲ್ಸ್, ಎ.ಹೆಚ್. ಅಬ್ದುಲ್ ಸಲಾಂ ಅಧ್ಯಕ್ಷರು ಅಮ್ಮುಂಜೆ ವಲಯ ಕಾಂಗ್ರೆಸ್, ಝಾಕೀರ್ ಹುಸೈನ್ ಸದಸ್ಯರು GCC ಗಲ್ಫ್ ಕಮಿಟಿ ಕಲಾಯಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ನಿರ್ವಾಹಕರಾದ ಇಂಜಮಾಮ್ ಕಲಾಯಿ, ಹಕೀಂ M.T. ತಾಳಿಪಡಿ, ಅಲ್ತಾಫ್ ಮಾಲಕರು ಫ್ಲೆಕ್ಸಿ ಅಬ್ದುಲ್ ಮಜೀದ್ ಬದ್ರಿಯಾ ದೆಮ್ಮಲೆ, ಸತ್ತಾರ್ ಮಲ್ಲೂರು ಉಪಸ್ಥಿತರಿದ್ದರು. S.H. ಬದ್ರುದ್ದೀನ್ ಕಲಾಯಿಯವರು ಪ್ರಾಸ್ತಾವಿಕ ಸ್ವಾಗತ ಬಾಷಣದೊಂದಿಗೆ ಕಾರ್ಯಕ್ರಮ ನಿರೂಪಿಸಿಸಿದರು.