ಮಂಗಳೂರು-ಮೂಡಬಿದ್ರಿ – ಕಾರ್ಕಳ ಮಾರ್ಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ
ವಿಧಾನ ಪರಿಷತ್ತಿನ ಶಾಸಕ ಐವನ್ ಡಿಸೋಜಾ ಸ್ವಾಗತ
ಮಂಗಳೂರು – ಮೂಡಬಿದ್ರಿ – ಕಾರ್ಕಳ ಮಾರ್ಗದಲ್ಲಿ ಶಕ್ತಿ ಯೋಜನೆಗಳ ಫಲಾನುಭವಿಗಳಿಗೆ ಯಾವುದೇ ಬಸ್ ಸಂಚಾರ ಇಲ್ಲದೇ ತೊಂದರೆ ಉಂಟಾಗಿದ ಬಗ್ಗೆ ಕಳೆದ ಕೆ.ಡಿ.ಪಿ. ಸಭೆಯಲ್ಲಿ ಪ್ರಸ್ತಾಪಿಸಿ, ಪ್ರಸ್ತುತ ಬೆಳಗಾವಿ ಅಧಿವೇಶನದಲ್ಲಿ ಚುಕ್ಕ ಗುರುತಿನ ಪ್ರಶ್ನೆ ಮತ್ತು ಗಮನ ಸೆಳೆಯುವ ಪ್ರಶ್ನೆ ಹಾಕಿರುವ ಮೂಲಕ ಅಧಿಕಾರಿಗಳ ಜೊತೆ ಸಭೆ ನಡೆಸಿ ದಶಂಬರ್ 9ರಂದು ಪ್ರಾದೇಶಿಕ ಆಯುಕ್ತರು 4 ಪರ್ಮಿಟ್ ಗಳನ್ನು ನೀಡಿ, ಬಸ್ ಪ್ರಾಂಭಿಸುವುದಾಗಿ ತಿಳಿಸಿದರು.
ಆದರೆ ಬಸ್ ಮತ್ತು ಚಾಲಕರ ಲಭ್ಯತೆ ಇಲ್ಲದ ಕಾರಣಕ್ಕಾಗಿ ಶುಕ್ರವಾರ ಬೆಳಿಗ್ಗೆಯಿಂದ 4 ಬಸ್ ಸಂಚಾರ ಪ್ರಾರಂಭಿಸಲಾಗುವುದು ಮತ್ತು ಹೆಚ್ಚಿನ ಬಸ್ ಗಳನ್ನು ಮಂಗಳೂರು ನಗರದಲ್ಲಿ ಮೂಡಬಿದ್ರೆ – ಕಾರ್ಕಳ ಮಾರ್ಗದಲ್ಲಿ ಸಂಚರಿಸಲಾಗುವುದು ಎಂದು ಸಾರಿಗೆ ಇಲಾಖೆ ಅನುಮತಿ ನೀಡಲಾಗಿದೆ ಎಂದು ವಿಧಾನ ಪರಿಷತ್ತಿನ ಶಾಸಕ ಐವನ್ ಡಿಸೋಜಾ ರವರು ತಿಳಿಸಿದ್ದಾರೆ ಮತ್ತು ಸಾರಿಗೆ ಸಚಿವರಿಗೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.