January 18, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೂರು ದಿನಗಳ ವಿದ್ಯಾರ್ಥಿ ಸ್ಪರ್ಧಾ ಹಬ್ಬ ‘ಫಿದಾಕ್ 6.0’  ಸಮಾಪ್ತಿ – ಪ್ರಶಸ್ತಿ ಪ್ರದಾನ

ಮಾಣಿ: ದಾರುಲ್ ಇರ್ಶಾದ್ ಅಧೀನದ ಮಿತ್ತೂರು ಕೆಜಿಎನ್ ಪಿಯು ಹಾಗೂ ಪದವಿಗಳನ್ನೊಳಗೊಂಡ ದ‌ಅವಾ ಕಾಲೇಜು ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನಃ ಹಮ್ಮಿಕೊಂಡಿದ್ದ ಮೂರು ದಿನಗಳ ವಿದ್ಯಾರ್ಥಿ ಸ್ಪರ್ಧಾ ಹಬ್ಬ ‘ಫಿದಾಕ್ 6.0’ ಸಮಾಪ್ತಿಗೊಂಡಿತು. “ಮಲೈ ಬಾರ್ ಇತಿಹಾಸ- ಭಾಷೆ -ಸಂಸ್ಕೃತಿ” ಎಂಬ ಧ್ಯೇಯ ವಾಕ್ಯದೊಂದಿಗೆ ದಶಂಬರ್ 7 ರಂದು ಸಂಜೆಯಿಂದ ಆರಂಭಗೊಂಡು ದಶಂಬರ್ 9ರ ಸಾಯಂಕಾಲ ತನಕ ಮೂರು ದಿನಗಳಲ್ಲಿ, ಎರಡು ವೇದಿಕೆಗಳಲ್ಲಿ ನಾಲ್ಕು ತಂಡಗಳ ನಡುವೆ ನಡೆದ 107 ವಿವಿಧ ಸ್ಪರ್ಧೆಗಳು ನಡೆಯಿತು. ಸುಮಾರು ಹದಿನೈದು ಮಂದಿ ತಜ್ಞ ತೀರ್ಪುಗಾರರು ಭಾಗವಹಿಸಿದ್ದರು‌.

ಕರ್ನಾಟಕ ರಾಜ್ಯ ಸುನ್ನಿ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅಧ್ಯಕ್ಷತೆ ವಹಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ ದಿಕ್ಸೂಚಿ ಭಾಷಣ ಮಾಡಿದರು. ಕನ್ನಡ ಧಾರ್ಮಿಕ ಕೃತಿಗಳ ರಚನೆಗಾಗಿ ಕೊಡಮಾಡುವ ‘ಫಿದಾಕ್-24 ಪ್ರಶಸ್ತಿ’ಯನ್ನು ಮಾಚಾರ್ ಇಸ್ಮಾಈಲ್ ಸ‌ಅದಿಯವರಿಗೆ ಝೈನುಲ್ ಉಲಮಾ ಮಾಣಿ ಉಸ್ತಾದ್ ಪ್ರದಾನ ಮಾಡಿದರು. ಮುಈನೀಸ್ ಕುಟುಂಬದ ವತಿಯಿಂದ ಮಾಣಿ ಉಸ್ತಾದರಿಗೆ ಕಾರು ಉಡುಗೊರೆ ನೀಡಲಾಯಿತು. ಈ ಸಮಾರಂಭದಲ್ಲಿ ದಾರುಲ್ ಇರ್ಶಾದ್ ಆಡಳಿತ ಸಮಿತಿಯ ಇಬ್ರಾಹೀಂ‌ ಫೈಝಿ‌ ಕನ್ಯಾನ, ಇಬ್ರಾಹೀಂ‌ ಸ‌ಅದಿ ಮಾಣಿ, ಉಮರ್ ಮದನಿ ಮಚ್ಚಂಪಾಡಿ, ಇಸ್ಹಾಕ್ ಹಾಜಿ ಮೇದರಬೆಟ್ಟು ಉಪಸ್ಥಿತರಿದ್ದರು.

ವಿವಿಧ ಸ್ಪರ್ಧಾ ಕಾರ್ಯಕ್ರಮಗಳಿಗೆ ಬುರ್ದಾ ಗಾಯಕ ಆರಿಫ್ ಸ‌ಅದಿ ಭಟ್ಕಳ, ಬರಹಗಾರ ಮಸ್ರೂರ್ ಸುರೈಜಿ, ಪತ್ರಕರ್ತ ಸಿನಾನ್ ಇಂದಬೆಟ್ಟು, ಕಥೆಗಾರ ಮುನವ್ವರ್ ಜೋಗಿಬೆಟ್ಟು, ಸುನ್ನಿ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸ್ವಾಲಿಹ್ ತೋಡಾರ್, ಡಾ. ಸಿ.ಎಂ. ಹನೀಫ್ ಅಮ್ಜದಿ ಬೆಳ್ಳಾರೆ, ಶಮ್ಸುದ್ದೀನ್ ಅಹ್ಸನಿ, ಶಮೀರ್ ಪೆರುವಾಜೆ, ಅಡ್ವಕೇಟ್ ಅಬ್ದುಲ್ ಖಾದಿರ್ ಹಿಮಮಿ ಮುಂತಾದವರು ತೀರ್ಪುಗಾರರಾಗಿ ಭಾಗವಹಿಸಿದರು. ಹಾಫಿಳ್ ಅನ್ವರ್ ಸಾದಾತ್ ಪರಪ್ಪು ನಾಯಕತ್ವದ ಅತ್ತೂರ್ ತಂಡವು ಫಿದಾಕ್ 6.0 ಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಶಮ್ಸುದ್ದೀನ್ ಕುದ್ರಡ್ಕ ನೇತೃತ್ವದ ಫಾಖನ್ನೂರ್ ತಂಡ ದ್ವಿತೀಯ ಸ್ಥಾನವನ್ನು ಪಡೆದರೆ, ಮುಶರ್ರಫ್ ಕಿಲ್ಲೂರು ನೇತೃತ್ವದ  ಮಂಜಲೂರ್ ತಂಡ ತೃತೀಯ ಹಾಗೂ ಮುಶ್ರಫ್ ಬಂಡಾಡಿ ನಾಯಕತ್ವದ ಕಲಂಗಲ್ಲೂರು ನಾಲ್ಕನೆಯ ಸ್ಥಾನವನ್ನು ಪಡೆದುಕೊಂಡರು.

ಸೀನಿಯರ್ ವಿಭಾಗದಲ್ಲಿ ಹಾಫಿಳ್ ಅನ್ವರ್ ಸಾದಾತ್ ಪರಪ್ಪು, ಜೂನಿಯರ್ ವಿಭಾಗದಲ್ಲಿ ಝಹೂರ್ ಮರೀಲ್ ಪುತ್ತೂರು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕೆಜಿಎನ್ ದ‌ಅವಾ ಕಾಲೇಜು ಪ್ರಾಂಶುಪಾಲ ಸಯ್ಯಿದ್ ಸ್ವಲಾಹುದ್ದೀನ್ ಜಮಲುಲ್ಲೈಲಿ ಅಲ್ ಅದನಿ, ಉಪನ್ಯಾಸಕರಾದ ಹುಸೈನ್ ಮುಈನಿ ಅಲ್ ಅಹ್ಸನಿ ಮಾರ್ನಾಡ್, ಸಾಬಿತ್ ಮು‌ಈನಿ ಅಸ್ಸಖಾಫಿ, ಮುನವ್ವಿರ್ ಅಲ್ ಅದನಿ, ಹಾಫಿಳ್ ಮಸ್‌ಊದ್ ಸಖಾಫಿ ದೇಲಂಪಾಡಿ, ಹನೀಫ್ ಅಝ್ಹರಿ ಚೌಕಿ, ಅಬ್ದುಲ್ ಲತೀಫ್ ಸ‌ಅದಿ ಕುಕ್ಕಾಜೆ, ಮುಸ್ತಫ ಮುಈನಿ ಅಸ್ಸಖಾಫಿ ಕಾಶಿಪಟ್ಣ, ಶಾಹುಲ್ ಹಮೀದ್ ಮುಈನಿ ಅಲ್ ಅದನಿ, ಇಸ್ಮಾಈಲ್ ರಾಶೀದ್ ಮುಈನಿ ಮಾಚಾರ್, ಜೂನಿಯರ್ ದ‌‌ಅವಾ ಕಾಲೇಜು ಮುದರ್ರಿಸ್ ಅಬ್ದುರ್ರಝ್ಝಾಖ್ ಮುಸ್ಲಿಯಾರ್ , ಉಪನ್ಯಾಸಕರಾದ ಅಹ್ಮದ್ ಕಬೀರ್ ಸಖಾಫಿ ಮಾಲಾಡಿ, ಹಾರಿಸ್ ಮು‌ಈನಿ‌ ಅಸ್ಸಖಾಫಿ, ಮುಂತಖಿಮ್ ಮು‌ಈನಿ, ಕೆಜಿಎನ್ ಪಿಯು ಪ್ರಾಂಶುಪಾಲ ಮುಹಮ್ಮದ್ ಫಾರೂಕ್ ಕೊಡಿಪ್ಪಾಡಿ, ಉಪನ್ಯಾಸಕರಾದ ರಿಝ್ವಾನ್ ಬೆಳ್ಮ, ನೆಲ್ಸನ್ ಅಲ್ಲಿಪಾದೆ, ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆ ಮಿತ್ತೂರು ಮುಖ್ಯೋಪಾಧ್ಯಾಯ ಅಶ್ರಫ್ ಬಿ.ಸಿ. ರೋಡ್, ಅಧ್ಯಾಪಕರಾದ ಅಬ್ದುಲ್ ಲತೀಫ್ ನೌಫಲ್ ಆತೂರು, ನೌರತುಲ್ ಮದೀನಾ ಇಂಗ್ಲೀಷ್ ಮೀಡಿಯಂ ಶಾಲೆಯ ನಿರ್ವಾಹಕ ಫಖ್ರುದ್ದೀನ್, ಮುಖ್ಯೋಪಾಧ್ಯಾಯ ಇಸ್ತಿಕಾರ್,  ಹಸೈನಾರ್ ಹಾಜಿ ಕೊಡಿಪ್ಪಾಡಿ, ಯೂಸುಫ್ ಸ‌ಈದ್ ನೇರಳಕಟ್ಟೆ, ಉಮರ್   ಜೋಗಿಬೆಟ್ಟು, ಲೇಖಕ ಸಲೀಂ‌ ಮಾಣಿ, ಕರ್ನಾಟಕ ಮುಸ್ಲಿಂ ಜಮಾಅತ್ ದ‌ಕ್ಷಿಣ ಕನ್ನಡ ಈಸ್ಟ್ ಆರ್ಗನೈಸಿಂಗ್ ಸೆಕ್ರಟರಿ ಇಸ್ಮಾಈಲ್ ಮಾಸ್ಟರ್ ಮಂಗಿಲಪದವು ಮುಂತಾದವರು ವಿವಿಧ ಕಾರ್ಯಕ್ರಮಗಳಲ್ಲಿ‌ ಅತಿಥಿಗಳಾಗಿ ಭಾಗವಹಿಸಿದ್ದರು.  ಡಾಟ್ ಇನ್ ಮೀಡಿಯಾದ ಶಫೀಕ್ ಮುಈನಿ, ಅಖ್ತರ್ ಮುಈನಿ ತಾಂತ್ರಿಕ ನಿರ್ವಹಣೆ ನೆರವೇರಿಸಿದರು. ರಝಾನ್ ಮುಈನಿ, ಹಫೀಝ್ ಮುಈನಿ, ತಷ್ಫೀಕ್, ಸಾಲೀಂ ಹಾಗೂ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.

 

You may also like

News

ಉಡುಪಿ – ಕಾಸರಗೋಡು – ಕಡಂದಲೆ 400 ಕೆ.ವಿ. ವಿದ್ಯುತ್ ಪ್ರಸರಣ ಯೋಜನೆಯನ್ನು ತಕ್ಷಣ ನಿಲ್ಲಿಸುವಂತೆ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ

ಉಡುಪಿ – ಕಾಸರಗೋಡು – ಕಡಂದೆಲೆ 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಮಾನ್ಯ ಮುಖ್ಯಮಂತ್ರಿಯವರು ಕರ್ನಾಟಕ ಕ್ರೀಡಾಕೂಟ 2025
News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕರ್ನಾಟಕ ಕ್ರೀಡಾಕೂಟ 2025 ಉದ್ಘಾಟನೆ

ಮಂಗಳೂರು : ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಿಂಪಿಕ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ಪ್ರಮುಖ ಕ್ರೀಡಾ ಕಾರ್ಯಕ್ರಮವಾದ ಕರ್ನಾಟಕ ಕ್ರೀಡಾಕೂಟ 2025

You cannot copy content of this page