ಸುಳ್ಯ ಬಂಟರ ಸಂಘದ ಪ್ರತಿಭಾ ಪುರಸ್ಕಾರ – ವಿದ್ಯಾರ್ಥಿ ವೇತನ ವಿತರಣೆಯ ಆಮಂತ್ರಣ ಬಿಡುಗಡೆ
ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ವಾರ್ಷಿಕ ಮಹಾಸಭೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ, ವಲಯ ಅಧ್ಯಕ್ಷರುಗಳಾದ ಜೆ.ಕೆ. ರೈ, ಕರುಣಾಕರ ಆಳ್ವ, ಕರುಣಾಕರ ರೈ ಮತ್ತಿತರರು ಉಪಸ್ಥಿತರಿದ್ದರು.