January 19, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಯುವವಾಹಿನಿ ಬಂಟ್ಟಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ ಮಾಲಿಕೆ 24

ಎಲ್ಲರನ್ನು ಒಳಗೊಳ್ಳುವ ಸಮನ್ವಯ ಮಾದರಿಯ ಚಿಂತನೆ ನಾರಾಯಣ ಗುರುಗಳದ್ದು: ಚೇತನ್ ಮುಂಡಾಜೆ

ಬಂಟ್ವಾಳ : ಶಿಕ್ಷಣವು ಮಾನವನನ್ನು ಎಲ್ಲಾ ರೀತಿಯ ಬಂಧನದಿಂದ ಮುಕ್ತಗೊಳಿಸುವ ಏಕೈಕ ದಾರಿಯಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುವ ಅಸಮಾನತೆ, ಅನಕ್ಷರತೆ, ಮೂಢನಂಬಿಕೆ ಮತ್ತು ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ದೃಷ್ಟಿಯಲ್ಲಿ ನಾರಾಯಣಗುರು ಚಿಂತಿಸಿದರು. ಎಲ್ಲಾ ಮಾನವನೂ ಸಮಾನ, ಮಾನವರೆಲ್ಲರೂ ವಿಕಾಸಗೊಳ್ಳಬೇಕು ಎನ್ನುವ ಕಾಳಜಿ ಅವರಲ್ಲಿತ್ತು. ನಾರಾಯಣಗುರು ಸಂಘಟಿಸಿದ ಚಳುವಳಿಗಳು ಮಾನವ ಪ್ರಗತಿಯ, ಆತ್ಮವಿಕಾಸದ ಧ್ಯೇಯವನ್ನು ಒಳಗೊಂಡಿತ್ತು. ಸಮಾಜ ಸುಧಾರಣೆಗಾಗಿ ನಾರಾಯಣ ಗುರುಗಳು ಆಯ್ದುಕೊಂಡ ದಾರಿ ಸಂಘರ್ಷದ ದಾರಿಯಾಗಿರಲಿಲ್ಲ; ಅದು ಸಮನ್ವಯದ ಒಳಗೊಳ್ಳುವಿಕೆಯ ಹಾದಿಯಾಗಿತ್ತು. ತಳಸಮುದಾಯದ ಸಾಮಾಜಿಕ, ಆರ್ಥಿಕ ಸುಧಾರಣೆಗೆ ನಾರಾಯಣಗುರು ಚಿಂತನೆ ಪ್ರಣಾಳಿಕೆಯಂತಿದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಚೇತನ್ ಮುಂಡಾಜೆ ಅಭಿಪ್ರಾಯಪಟ್ಟರು.

ಅವರು ದಶಂಬರ್ 8ರಂದು ಆದಿತ್ಯವಾರ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕಂಜತ್ತೂರು  ಯುವವಾಹಿನಿ ಬಂಟ್ವಾಳ ಘಟಕದ ವಿಧ್ಯಾರ್ಥಿ ಸಂಘಟನೆ ನಿರ್ದೇಶಕ ಬ್ರಿಜೇಶ್ ಕುಮಾರ್ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 24 ನೇ ಮಾಲಿಕೆಯಲ್ಲಿ ಗುರು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಕೋಶಾಧಿಕಾರಿ ಗೀತಾ ಜಗದೀಶ್, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಧನುಷ್ ಮಧ್ವ, ಮಧುಸೂದನ್ ಮಧ್ವ, ಸಂಘಟನ ಕಾರ್ಯದರ್ಶಿ ಉದಯ್ ಮೆನಾಡು, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ನಾಗೇಶ್ ಪೊನ್ನೊಡಿ, ಶಿವಾನಂದ ಎಂ., ಸದಸ್ಯರಾದ ಶ್ರವಣ್ ಬಿ.ಸಿ. ರೋಡ್, ಸಚಿನ್, ಅಜಯ್, ಯತೀಶ್ ಬೊಳ್ಳಾಯಿ, ಜಗನ್ನಾಥ್ ಸುವರ್ಣ ಕಲ್ಲಡ್ಕ, ಶೈಲೇಶ್ ಕುಚ್ಚಿಗುಡ್ಡೆ, ಅರ್ಜುನ್ ಅರಳ, ಸುನಿತಾ ಮಾರ್ನಬೈಲ್, ಸುಲತಾ ಬಿ.ಸಿ. ರೋಡ್, ನಯನಾ ಜಯಾ ಪಚ್ಚಿನಡ್ಕ, ಜಗದೀಶ್ ತುಂಬೆ, ಜಯಾ ಪಚ್ಚಿನಡ್ಕ, ತೃಪ್ತಿ ಪಚ್ಚಿನಡ್ಕ, ಯಶೋಧರ ಕಡಂಬಳಿಕೆ, ಸಾನಿಕ ತುಂಬೆ, ವಿಘ್ನೇಶ್ ಬೊಳ್ಳಾಯಿ, ಗಣೇಶ್ ಬಂಗೇರ, ಶೈಲಜಾ ರಾಜೇಶ್, ಆಶಿಷ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.

You may also like

News

ಕನ್ನಡ ಭವನ ಜಿಲ್ಲಾಧ್ಯಕ್ಷರಾಗಿ ಎಸ್. ನಂಜುಂಡಯ್ಯ ಚಾಮರಾಜನಗರ ಆಯ್ಕೆ

ಕಾಸರಗೋಡು : ಸಂಘಟಕ, ಸಾಹಿತಿ ಶಿಕ್ಷಕ, ಸಾಹಿತ್ಯ ಪರಿಷತ್, ಜಾನಪದ ಪರಿಷತ್ ಮೊದಲಾಗಿ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಹೆಚ್ಚಿನ ಸಂಘ, ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸಕ್ರಿಯರಾಗಿರುವ ಎಸ್.
News

ಕಾಜೂರು ಉರೂಸ್ ಪ್ರಯುಕ್ತ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

ಬೆಳ್ತಂಗಡಿ ಇತಿಹಾಸ ಪ್ರಸಿದ್ಧ ಧಾರ್ಮಿಕ ಸಮನ್ವಯ ಕೇಂದ್ರ, ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಕಾಜೂರು ಮಖಾಂ ಶರೀಫ್ ನಲ್ಲಿ ಈ‌ ವರ್ಷದ ಉರೂಸ್ ಮಹಾ

You cannot copy content of this page