September 4, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೌದಿ ಅರೇಬಿಯಾದಲ್ಲಿ ಬಂಟ್ವಾಳ ಸಮೀಪದ ವಗ್ಗ ನಿವಾಸಿ ಅಪಘಾತದಲ್ಲಿ ಮೃತ್ಯು

ಬಂಟ್ವಾಳ : ಸೌದಿ ಅರೇಬಿಯಾದ ತಬೂಕ್ ಸಮೀಪದ ಅಲ್ ಉಲಾ ಎಂಬ ಪ್ರದೇಶದಲ್ಲಿ ದಶಂಬರ್ 9ರಂದು ಸೋಮವಾರ ನಡೆದ ಕಾರು ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ಮೇಲಿನ ವಗ್ಗ ನಿವಾಸಿ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

ಮೇಲಿನ ವಗ್ಗದ ಈಗಲ್ ಕುಟುಂಬದ ದಿವಂಗತ ಮುಹಮ್ಮದ್ ಯಾನೆ ಪುತ್ತೂಬಾವ ಎಂಬವರ ಪುತ್ರ 35 ವರ್ಷ ಪ್ರಾಯದ ಇಬ್ರಾಹೀಮ್ ನವಾಜ್ ಮೃತ ಯುವಕ. ಈ ಹಿಂದೆ ಊರಿನಲ್ಲಿ ಬಿ.ಸಿ. ರೋಡು ಸಮೀಪದ ಮಿತ್ತಬೈಲು ಎಂಬಲ್ಲಿ ಟಾಪ್ ಆಂಡ್ ಟಾಪ್ ಹೆಸರಿನ ಕಾರು ಉದ್ಯಮ ನಡೆಸುತ್ತಿದ್ದು ಟಾಪ್ ಆಂಡ್ ಟಾಪ್ ನವಾಜ್ ಎಂದೇ ಗುರುತಿಸಿಕೊಂಡಿದ್ದ. ಬಳಿಕ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು. ಬಳಿಕ ಇವರು ಇತ್ತೀಚಿಗೆ ಸುಮಾರು ಆರು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಸೋಮವಾರ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈತ ವಗ್ಗ ನಿವಾಸಿ, ಕಾಂಗ್ರೆಸ್ ಮುಖಂಡ, ಬೀಡಿ ಉದ್ಯಮಿ ಇ.ಕೆ. ಲತೀಫ್ ಅವರ ಸಹೋದರಿಯ ಪುತ್ರ.

ಮೃತರು ಪತ್ನಿ, ತಾಯಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತದೇಹ ಇಂದು ದಶಂಬರ್ 11ರಂದು ಬುಧವಾರ ಅಸರ್ ನಮಾಜ್ ಬಳಿಕ ಅಲ್ ಉಲಾ ಸೂಕ್ ಅಲ್ ಕುದ್ರಾ ಬಳಿಯ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

You may also like

News

ಧನಂಜಯ ವರ್ಮ ಧ್ವನಿಯಲ್ಲಿ ಗುರು ರಾಯರ ಭಕ್ತಿಯ ರಸದಾರೆ ‘ಗುರು ರಾಯರುಲ್ಲೆರ್’ ನೂತನ ಭಕ್ತಿಗೀತೆ ಬಿಡುಗಡೆ

ಮಂಗಳೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲಿನ ಭಕ್ತಿ, ಶರಣಾಗತಿ ಹಾಗೂ ಅಚಲ ನಂಬಿಕೆಯನ್ನು ಸಾರುವ ‘ಗುರು ರಾಯರುಲ್ಲೆರ್’ ಎಂಬ ನೂತನ ಭಕ್ತಿಗೀತೆ ಧನಂಜಯ ವರ್ಮ ಅವರ
News

ಕ್ರೈಸ್ತ ಸಮುದಾಯದ ಕಲ್ಯಾಣಕ್ಕೆ ₹250 ಕೋಟಿ ಬಜೆಟ್ ಅನುದಾನ ಸಂಪೂರ್ಣ ಬಿಡುಗಡೆಗೆ ಆಗ್ರಹ

ಮುಖ್ಯಮಂತ್ರಿ ಅವರಿಗೆ MLC ಐವನ್ ಡಿಸೋಜ ಮುಖಾಂತರ ಸ್ಟ್ಯಾನಿ ಪಿಂಟೋ ಬೆಂಗಳೂರು ಮನವಿ ಬೆಂಗಳೂರು: ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕ್ರೈಸ್ತ ಸಮುದಾಯದ ಕಲ್ಯಾಣ ಮತ್ತು

You cannot copy content of this page