July 8, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರು – ಮಾಣಿಯಲ್ಲಿ ಅದ್ದೂರಿ ‘ಅನ್ಫಾಲ್ ರೆಸ್ಟೋರೆಂಟ್’ ಮೇ 3ರಂದು ಉದ್ಘಾಟನೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಭಾಗಿ

ಉದ್ಘಾಟನಾ ಭವ್ಯ ಸಮಾರಂಭದಲ್ಲಿ ಮೂವರು ಸಾಧಕರಾದ ಚೇತನ್ ರೈ, ನಾಗರಾಜ್ ಶೆಟ್ಟಿ ಹಾಗೂ ಯಾಸೀರ್ ಕಲ್ಲಡ್ಕ ಅವರಿಗೆ ವಿಶೇಷ ಸನ್ಮಾನ

ದಕ್ಷಿಣ ಕನ್ನಡ ಜಿಲ್ಲೆಯ ಮಾಣಿಯ ಸೂರಿಕುಮೇರು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಅನ್ಫಾಲ್ ರೆಸ್ಟೋರೆಂಟ್’ (Anfal Restaurant) ಇದೇ ಮೇ 3ರಂದು ಭಾನುವಾರ ಸಂಜೆ ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ.

ವಿಶೇಷ ಆಕರ್ಷಣೆ – ಮಾಜಿ ಕ್ರಿಕೆಟ್ ನಾಯಕನ ಆಗಮನ

ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಗೌರವ ಅತಿಥಿಯಾಗಿ ಆಗಮಿಸಲಿದ್ದಾರೆ. ವಿಶ್ವದರ್ಜೆಯ ಕ್ರಿಕೆಟಿಗನ ಉಪಸ್ಥಿತಿಯು ಸಮಾರಂಭಕ್ಕೆ ವಿಶೇಷ ಮೆರುಗು ನೀಡಲಿದೆ.

ಸನ್ಮಾನ ಕಾರ್ಯಕ್ರಮ:

ಉದ್ಘಾಟನಾ ಸಮಾರಂಭದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರು ಗಣ್ಯರನ್ನು ಸನ್ಮಾನಿಸಲಾಗುವುದು:

  1. ಚೇತನ್ ರೈ (ಕನ್ನಡ ಮತ್ತು ತುಳು ಸಿನಿಮಾ ನಟರು)
  2. ನಾಗರಾಜ್ ಶೆಟ್ಟಿ (ಕೃಷಿಕರು ಮತ್ತು ಕಂಬಳ ಆಯೋಜಕರು)
  3. ಯಾಸೀರ್ ಕಲ್ಲಡ್ಕ (ವಸ್ತು ಸಂಗ್ರಹಾಲಯ)

ಕಾರ್ಯಕ್ರಮದ ವಿವರ:

ವಿಧಾನ ಪರಿಷತ್ ಸದಸ್ಯರಾದ ನಾಸೀರ್ ಅಹಮದ್ ಅವರು ರೆಸ್ಟೋರೆಂಟ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಸನ್ಮಾನ್ಯ ಯು.ಟಿ. ಖಾದರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಯೋಗೀಶ್ ಮಾಸ್ಟರ್ ಅವರ ‘ನನ್ನ ಪ್ರೀತಿಯ ಪ್ರವಾದಿ’ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಪಾರ್ಟಿ ಹಾಲ್ ಉದ್ಘಾಟಿಸಲಿದ್ದಾರೆ.

ಸ್ಥಳ: ಎನ್.ಹೆಚ್ 75, ಸುಲ್ತಾನ್ ಬಾಗ್, ಹೆಚ್.ಪಿ. ಪೆಟ್ರೋಲ್ ಬಂಕ್ ಬಳಿ, ಸೂರಿಕುಮೇರು – ಮಾಣಿ.

ಸಮಯ: ಸಂಜೆ 7:00 ಗಂಟೆಗೆ.

ಮಲ್ಟಿ-ಕ್ಯುಸಿನ್ ಆಹಾರ ಪದ್ಧತಿ, ಪ್ರಾರ್ಥನಾ ಕೊಠಡಿ ಮತ್ತು ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಅನ್ಫಾಲ್ ರೆಸ್ಟೋರೆಂಟ್ ಸಾರ್ವಜನಿಕರ ಸೇವೆಗೆ ನಾಳೆ ಮೇ 3ರಂದು ಭಾನುವಾರ ಸಂಜೆಯಿಂದ ಮುಕ್ತವಾಗಲಿದೆ ಎಂದು ಅನ್ಫಾಲ್ ತಂಡವು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

You may also like

News

ಪುತ್ತೂರಿನಲ್ಲಿ ಯುವತಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ ಆರೋಪ – ಸತ್ಯಾಂಶ ಬಿಚ್ಚಿಟ್ಟ ಪೊಲೀಸರು

ಉಭಯ ಕಡೆಯಿಂದ ದೂರು ದಾಖಲು! ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ – ಜಿಲ್ಲಾ SP ಡಾ. ಅರುಣ್ ಕೆ. ಯುವತಿಯೊಬ್ಬಳು
News

ವೇಗದ ಅಬ್ಬರಕ್ಕೆ ವಿದ್ಯಾರ್ಥಿ ಬಲಿ – ವಾಹನ ಸಮೇತ ಚಾಲಕ ಪರಾರಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐಟಿಐ ವಿದ್ಯಾರ್ಥಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮತ್ತೋರ್ವ ವಿದ್ಯಾರ್ಥಿ

You cannot copy content of this page