ಭಾರತ್ ವೆಹಿಕಲ್ ಬಜಾರ್ ನ 2ನೇ ವರ್ಷಾಚರಣೆ, ಐಕ್ಯ ವೇದಿಕೆ ಕೊಡಾಜೆ ಇದರ ಜಂಟಿ ಆಶ್ರಯದಲ್ಲಿ ಡ್ರಗ್ಸ್ ವಿರುದ್ದ ಜನಜಾಗೃತಿ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಕಾರ್ಯಕ್ರಮ
ಬಂಟ್ವಾಳ : ಎಚ್.ಎಂ.ಎಸ್. ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳು, ಕಾರು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಪ್ರಸಿದ್ಧಿಯನ್ನು ಪಡೆದು ಮಿತ್ತೂರಿನಲ್ಲಿ ಕಾರ್ಯಾಚರಿಸುತ್ತಿದ್ದು ಸ್ಥಳಾಂತರಗೊಂಡು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಬಳಿ ಶುಭಾರಂಭಗೊಂಡು ಸಂಸ್ಥೆಯ 2ನೇ ವರ್ಷಾಚರಣೆ ಪ್ರಯುಕ್ತ ಐಕ್ಯ ವೇದಿಕೆ ಕೊಡಾಜೆ ಇದರ ಜಂಟಿ ಆಶ್ರಯದಲ್ಲಿ ಡ್ರಗ್ಸ್ ವಿರುದ್ದ ಜನಜಾಗೃತಿ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಕಾರ್ಯಕ್ರಮಗಳು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಸಮೀಪ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ಉದ್ಯಮಗಳು ಹೆಚ್ಚಾದಂತೆ ನಾಡು ಅಭಿವೃದ್ಧಿ ಹೊಂದುತ್ತದೆ. ಸಮಾಜಮುಖಿ ಚಿಂತನೆ ಹಾಗೂ ಕಾರ್ಯಗಳ ಜೊತೆಗೆ ಉದ್ಯಮವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಭಾರತ್ ವೆಹಿಕಲ್ ಬಜಾರ್ ನ ಅಶ್ರಫ್ ರವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಇದರ ಪ್ರಯೋಜನ ಅಶಕ್ತರಿಗೆ ಲಭಿಸುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್. ಮುಹಮ್ಮದ್ ಮಾತನಾಡಿ, ಕೊಡಾಜೆ ಐಕ್ಯ ವೇದಿಕೆಯ ಸಮಾಜಮುಖಿ ಕಾರ್ಯಕ್ರಮಗಳ ಜೊತೆ ಕೈಜೋಡಿಸಿಕೊಂಡ ಭಾರತ್ ವೆಹಿಕಲ್ ಬಜಾರ್ ಸಂಸ್ಥೆಯು ಗುಣ ಮಟ್ಟದ ವ್ಯವಹಾರದ ಮೂಲಕ ಗುರುತಿಸಿಕೊಂಡಿದ್ದು ಒಂದನೇ ವರ್ಷಾಚರಣೆಯನ್ನು ಯಶಸ್ವಿಯಾಗಿ ಆಚರಿಸಿಕೊಂಡಿದೆ. ಯುವ ಜನತೆ ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಬೆಂಗಳೂರು ಎಚ್.ಎಂ.ಎಸ್. ಗ್ರೂಪ್‌ನ ಚೇರ್‌ಮೆನ್ ಹರೀಶ್ ಎಂ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಕಾರ್ಯದರ್ಶಿ ಸಿದ್ದೀಕ್ ಪನಾಮ ಹಾಗೂ ಬಂಟ್ವಾಳ ಮುಸ್ಲಿಂ ಸಮಾಜದ ಕಾರ್ಯದರ್ಶಿ ಹನೀಫ್ ಖಾನ್ ಕೊಡಾಜೆ ಡ್ರಗ್ಸ್‌ನಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪುತ್ತೂರು ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸಿದ್ದೀಕ್ ಸುಲ್ತಾನ್ ಮಾತನಾಡಿ ಶುಭ ಹಾರೈಸಿದರು.
ತುಮಕೂರು ಎಚ್.ಎಂ.ಎಸ್. ಗ್ರೂಪ್‌ನ ಸುರೇಶ್ ಕುಮಾರ್, ಉದ್ಯಮಿಗಳಾದ ಶಾಹುಲ್ ಹಮೀದ್ ಕೊಜಂಬಾಡಿ, ಸಂತೋಷ್ ಶೆಟ್ಟಿ ಮೂಡುಬಿದಿರೆ, ಹಿದಾಯತ್ ಕಣ್ಣೂರು, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಧನಂಜಯ ಗೌಡ, ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ನಿರಂಜನ್ ರೈ, ನೇರಳಕಟ್ಟೆ ಮಿಲಾದ್ ಕಮಿಟಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಝಕರಿಯಾ ಕಲ್ಲಡ್ಕ, ನೇರಳಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪಿ.ಕೆ. ರಶೀದ್ ಪರ್ಲೊಟ್ಟು, ಪತ್ರಕರ್ತರಾದ ಯೂಸುಫ್ ರೆಂಜಲಾಡಿ, ಅಲಿ ವಿಟ್ಲ, ಉಮ್ಮರ್ ನೀರಪಳಿಕೆ, ಕೊಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ, ಸಲಹೆಗಾರ ಗುಲ್ಜಾರ್ ರಝಾಕ್ ಅನಂತಾಡಿ, ಪ್ರಮುಖರಾದ ಹನೀಫ್ ಬಗ್ಗುಮೂಲೆ, ಸಕ್ಸಸ್ ಹಮೀದ್ ಕುಕ್ಕರಬೆಟ್ಟು, ಇಬ್ರಾಹಿಂ ಎಸ್ಸೆಮ್ಮೆಸ್, ಶರೀಫ್ ಸೂರ್ಯ, ಆಸಿಫ್ ಬೋಳಂತೂರು, ಭಾರತ್ ವೆಹಿಕಲ್ ಬಜಾರ್‌ನ ಸ್ಟಾರ್ ಪ್ರಚಾರಕಿ ಕು.ಶ್ರೇಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಮಾಜಿ ಸಚಿವ ಬಿ. ರಮಾನಾಥ ರೈ ಅವರನ್ನು ಗೌರವಿಸಲಾಯಿತು, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಆಳ್ವ ಅನಂತಾಡಿ, ಪ್ರಾಚ್ಯ ಪಚ್ಚೆ ವನಸಿರಿ ವೈದ್ಯರತ್ನ ಪ್ರಶಸ್ತಿ ಪುರಸ್ಕೃತ ಗಂಗಾಧರ ಕರಿಯ ಪಂಡಿತ ಅನಂತಾಡಿ, ವರ್ಷದ 17 ವಯೋಮಿತಿ ವಿಭಾಗದ ವಾಲಿಬಾಲ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕೌಶಿಕ್ ಹೆಚ್. ಶೆಟ್ಟಿ ವಿಜಯನಗರ ಮಾವಿನಕಟ್ಟೆ, ಪ್ರೌಢ ಶಾಲಾ ವಿಭಾಗದ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪುನೀತ್ ಗೋಳಿಕಟ್ಟೆ ಅನಂತಾಡಿ, ಪ್ರೌಢ ಶಾಲಾ ವಿಭಾಗದ ಲಾಂಗ್ ಜಂಪ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಹಮ್ಮದ್ ಫೌಝನ್ ಪಾಟ್ರಕೋಡಿ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಮೊಂತೆರೋ ಅವರನ್ನು ಅಭಿನಂದಿಸಲಾಯಿತು. ಕೊಡಾಜೆ ಐಕ್ಯ ವೇದಿಕೆಯ ವತಿಯಿಂದ ಭಾರತ್ ವೆಹಿಕಲ್ ಬಜಾರ್ ನ ಮಾಲೀಕ ಅಶ್ರಫ್ ತಿಂಗಳಾಡಿ ಅವರನ್ನು ಹಾಗೂ ಭಾರತ್ ವೆಹಿಕಲ್ ಬಜಾರ್ ವತಿಯಿಂದ ಕೊಡಾಜೆ ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಕೊಡಾಜೆ ಐಕ್ಯ ವೇದಿಕೆಯ ಎಲ್ಲಾ ಸದಸ್ಯರಿಗೆ ಭಾರತ್ ವೆಹಿಕಲ್ ಬಜಾರ್ ಪ್ರಾಯೋಜಕತ್ವದ ಟೀಶರ್ಟ್ ಅನ್ನು ಹಸ್ತಾಂತರಿಸಲಾಯಿತು.
ಐಕ್ಯ ವೇದಿಕೆಯ ಪ್ರಮುಖರಾದ ಶರೀಫ್ ಅನಂತಾಡಿ, ರಿಯಾಝ್ ನೇರಳಕಟ್ಟೆ, ಮನ್ಸೂರ್ ನೇರಳಕಟ್ಟೆ, ನೌಫಳ್ ಕೊಡಾಜೆ, ಇಮ್ತಿಯಾಜ್ ಕೊಡಾಜೆ, ಸಲೀಂ ಪರ್ಲೊಟ್ಟು, ಆದಂ ಎಸ್.ಎಂ.ಎಸ್., ಸಲೀಂ ಮಾಣಿ, ರಫೀಕ್ ಪಂತಡ್ಕ, ಫಾರೂಕ್ ಕೊಡಾಜೆ, ಅಶ್ರಫ್ ಹಳೀರ, ಮಜೀದ್ ಅನಂತಾಡಿ, ಫಾರೂಕ್ ಪಂತಡ್ಕ, ನಾಸಿರ್ ಕೊಡಾಜೆ, ಮಜೀದ್ ಅರಂಗಳ, ಆಬಿದ್ ನೇರಳಕಟ್ಟೆ, ಅಶ್ರಫ್ ಕೊಡಾಜೆ, ಮುನೀರ್ ಕೆಂಪುಗುಡ್ಡೆ, ಫಾರೂಕ್ ಅನಂತಾಡಿ, ಅಬೂಬಕ್ಕರ್ ಪಂತಡ್ಕ, ಇಸುಬು ಕೊಡಾಜೆ, ಸಲೀಂ ಕೊಡಾಜೆ ಮೊದಲಾದವರು ಸಹಕರಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತ್ ವೆಹಿಕಲ್ ಬಜಾರ್ ಮಾಲೀಕ ಅಶ್ರಫ್ ತಿಂಗಳಾಡಿ ವಂದಿಸಿದರು. ಹಮೀದ್ ಗೋಳ್ತಮಜಲು ಹಾಗೂ ಕೆ.ಎಂ. ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಖಾಫಿಲಾ ಆರ್ಕೆಸ್ಟ್ರಾ ಕಾಸರಗೋಡು ಬಳಗದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.