ವಿಟ್ಲ ಕುದ್ಡುಪದವು ಕೆದಿಲದಲ್ಲಿ ಇರ್ಫಾನಿಯಾ ಪ್ರಚಾರ ಸಮ್ಮೇಳನ ಉದ್ಘಾಟನೆ
ಕೇರಳ ಕಣ್ಣೂರು ಜಿಲ್ಲೆಯ ಚಪ್ಪಾರಪ್ಪಡವು ಜಾಮಿಆ ಇರ್ಫಾನಿಯಾ 33ನೇ ವಾರ್ಷಿಕ ಹಾಗೂ 22ನೇ ಬಿರುದುದಾನ ಮಹಾ ಸಮ್ಮೇಳನದ ಪ್ರಯುಕ್ತ ಕರ್ನಾಟಕ ಜಂಈಯತುಲ್ ಇರ್ಫಾನಿಯ್ಯೀನ್ ಸಂಘಟಿಸಿದ ಪ್ರಚಾರ ಮಹಾ ಸಮ್ಮೇಳನ ಉದ್ಘಾಟನೆ ಹಾಗೂ ಬುರ್ದ ಕವಾಲಿ ಸ್ಪರ್ಧೆಗಳು ವಿಟ್ಲ ಕುದ್ದುಪದವು ಕೆದಿಲ ಕಾಂಪ್ಲೆಕ್ಸ್ ವಠಾರದಲ್ಲಿ ನಡೆಯಿತು. K.H. ಉಸ್ಮಾನ್ ಕೆದಿಲ ಕಾಂಪ್ಲೆಕ್ಸ್ ದ್ವಜಾರೋಹಣದ ಬಳಿಕ ಸಲೀಂ ಇರ್ಫಾನಿ ಸ್ವಾಗತಿಸಿದರು ಹಾಗೂ ಸವಾದ್ ಇರ್ಫಾನಿ ಉದ್ಘಾಟನೆಗೊಳಿಸಿದರು. ನಂತರ ಆರಂಭಾವಾದ ಸಭಾಕಾರ್ಯಕ್ರಮದ ಬಳಿಕ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ಹದಿನೈದು ಬುರ್ದಾ ಕವಾಲಿ ತಂಡಗಳು ಸ್ಪರ್ದೆಯಲ್ಲಿ ಭಾಗವಹಿಸಿದರು.
ಪಾಯ್ಯಕ್ಕಿ ದರ್ಸ್, ಸ್ವಾಬಿರಿಯ ಅರೇಬಿಕ್ ಕಾಲೇಜು (ಜೂನಿಯರ್ ಇರ್ಫಾನ್ಯಿಯ) ಮತ್ತು ಇರ್ಫಾನಿಯ್ಯ ನೀರೋಳಿಕೆ (ಜೂನಿಯರ್ ಇರ್ಫಾನಿಯ) ಅರೇಬಿಕ್ ಕಾಲೇಜು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದುಕೊಂಡಿತು. ಮಗ್ರಿಬ್ ಬಳಿಕ ನಡೆದ ಪ್ರಚಾರ ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕದ ಪ್ರಮುಖ ವಿದ್ವಾಂಸರು, ಕೂರ್ನಡ್ಕ ಮೊಹಲ್ಲಾ ಖಾಝಿ, ಸಮಸ್ತ ಕೇರಳ ಕೇಂದ್ರ ಮುಶಾವರ ಸದಸ್ಯರು ಬಹು ಉಸ್ತಾದ್ ಅಲ್ ಹಾಜ್ ಬಂಬ್ರಾಣ ಅಬ್ದುಲ್ ಖಾದರ್ ಮುಸ್ಲಿಯಾರ್ ನೆರವೇರಿಸಿದರು. ಆತ್ಮ ಶುದ್ಧೀಕರಣಕ್ಕೆ ಬಹು ಶೈಖುನಾ ಚಪ್ಪಾರಪ್ಪಡವು ಉಸ್ತಾದರಂತಹ ಪುಣ್ಯ ಪುರುಷರ ಸಭೆಗಳಲ್ಲಿ ಭಾಗವಹಿಸುವುದು, ಅವರ ನಿರ್ದೇಶಗಳನ್ನು ಪಾಲಿಸುವುದು ಪುಣ್ಯಕರ್ಮವೆಂದೂ ಅದು ಅನಿವಾರ್ಯವೆಂದು ಹೇಳಿದರು.
ಬಹು ಅಲ್ ಹಾಜ್ ಎಂ.ಪಿ. ಸಹದಿ ಉಸ್ತಾದ್ ಪ್ರಾರ್ಥನೆ ನೆರವೇರಿಸಿದರು. ಸಯ್ಯದ್ ಶರೀಫ್ ಇರ್ಫಾನಿ ಅಲ್ ಮಖ್ದೂಮಿ ಮುಖ್ಯ ಭಾಷಣ ಮಾಡಿದರು. ಉಮರ್ ದಾರಿಮಿ ಸಾಲ್ಮರ ಪ್ರಾಸ್ತಾವಿಕ ಭಾಷಣ ನಡೆಸಿದರು. ರಾಜಕೀಯ ಮುಖಂಡ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್ ಮಾತನಾಡಿ ಶುಭ ಹಾರೈಸಿದರು. 2025 ಜನವರಿ 30 ಮತ್ತು 31 ಹಾಗೂ ಫೆಬ್ರವರಿ 1 ಮತ್ತು 2ರಂದು ಜಾಮಿಯಾ ಇರ್ಫನಿಯ ಚಪ್ಪಾರಪ್ಪಡವಿನಲ್ಲಿ ನಡೆಯುವ 33ನೇವಾರ್ಷಿಕ ಹಾಗೂ 22ನೇ ಬಿರುದುದಾನ ಮಹಾಸಮ್ಮೇಳನಕ್ಕೆ ಸಾರ್ವಜನಿಕರನ್ನು ಆಹ್ವಾನಿಸಲಾಯಿತು. ವಿಜೇತರಿಗೆ ಉಸ್ತಾದ್ ಅಲ್ ಹಾಜ್ ಅಬ್ದುಲ್ ರಝಾಕ್ ಮಿಸ್ಬಾಹಿ ಬಹುಮಾನಗಳನ್ನು ನೀಡಿದರು.
ಷರೀಫ್ ಕೆ. ಎಚ್. ಕೆದಿಲ ಕಾಂಪ್ಲೆಕ್ಸ್ ಮಾಲೀಕರು, ಷರೀಫ್ ಮೂಸಾ ಕುದ್ದೂಪದೌ, ರಫೀಕ್ ವಿಟ್ಲ, ಉಬೈದ್ ಮಂಗಳಪದೌ, ಇಸ್ಮಾಯಿಲ್ ಫೈಝಿ ಕತೀಬರು ಸೂರಿಂಜೆ, ಉಸ್ಮಾನ್ ದಾರಿಮಿ ಕತೀಬರು ಕಲ್ಲಡ್ಕ, ಅಲಿ ಇರ್ಫಾನಿ ಖತೀ ಬರು ಮರಿಕಿನಿ, ಹನೀಫ್ ಹಾಜಿ ಮರಿಕಿನಿ ಹಮೀದ್ ನಡ್ಕ, ಕರೀಂ ಕುದ್ದುಪಡೌ ಮುಂತಾದ ಸಾಮಾಜಿಕ ರಾಜಕೀಯ ದಾರ್ಮಿಕ ಮುಂದಾಳುಗಳು ಉಪಸ್ಥಿತರಿದ್ದರು. ಶೇಖ್ ಮುಹಮ್ಮದ್ ಇರ್ಫಾನಿ ಸ್ವಾಗತಿಸಿ ಇಲ್ಯಾಸ್ ಇರ್ಫಾನಿ ವಂದಿಸಿದರು.