ಲೋಕ ಕಲ್ಯಾಣಾರ್ಥವಾಗಿ ನಾರಾವಿಯಲ್ಲಿ ಡಿಸೆಂಬರ್ 22ರಂದು ಮಹಾ ಚಂಡಿಕಾಯಾಗ
ನಾರಾವಿ: ಪರಮಪೂಜ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಡಿಸೆಂಬರ್ 22ರಂದು, ಲೋಕ ಕಲ್ಯಾಣಾರ್ಥ ಮಹಾ ಚಂಡಿಕಾಯಾಗವು ಪರಸ್ಪರ ಯುವಕ ಮಂಡಲ ಈದು – ನಾರಾವಿ ಇದರ ನೇತೃತ್ವದಲ್ಲಿ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ 5 ಮಾಗಣೆಯ ಗ್ರಾಮಸ್ಥರಿಂದ, ವೇ.ಮೂ. ಕೃಷ್ಣ ತಂತ್ರಿಯವರ ಪೌರೋಹಿತ್ಯದಲ್ಲಿ ನಡೆಯಲಿದೆ.
ಚಂಡಿಕಾಯಾಗದಲ್ಲಿ ಪಾಲ್ಗೊಳ್ಳುವುದರಿಂದ ದುಷ್ಟಪೀಡೆ, ಅರಿಷ್ಟ, ಶತ್ರುಭಾದೆ, ಗೃಹದೋಷಗಳಿಂದ ಭಾಧಿತರಾಗಿದ್ದರೆ ಮಾಟ, ಮಂತ್ರ, ವಶೀಕರಣದ ಪ್ರಭಾವಕ್ಕೆ ಒಳಗಾಗಿದ್ದೇವೆ ಎಂದೆನಿಸಿದ್ದರೆ, ಜೀವ ಭಯ, ಮೃತ್ಯು ಭಯದಿಂದ ಭಾದಿತರಾಗಿದ್ದರೆ, ದುರ್ಗಾಮಾತೆಯ ಪೂಜೆಯಿಂದ ಪರಿಹಾರವಾಗುತ್ತದೆ. ನಕಾರಾತ್ಮಕ ಅಂಶಗಳು ಮರೆಯಾಗಿ ಸಕಾರಾತ್ಮಕ ಚಿಂತನೆ ಶಕ್ತಿ ಉಂಟಾಗುತ್ತದೆ. ಎಲ್ಲಾ ಬಗೆಯ ಸಂಕಷ್ಟಗಳು ಮರೆಯಾಗಿ ಉತ್ತಮ ಅರೋಗ್ಯ, ಸಂಪತ್ತು ಅಭಿವೃದ್ಧಿಯಾಗುತ್ತದೆ. ಈ ಕಲಿಯುಗದಲ್ಲಿ ಕ್ಷಿಪ್ರ ಪ್ರಸಾದಿನಿಯಾಗಿ, ಸನಾತನ ಧರ್ಮದ ಉದ್ದಾರ ಮಾಡಿ ಲೋಕ ಕಲ್ಯಾಣ ಮಾಡುತ್ತಾಳೆ.
ಪರಸ್ಪರ ಯುವಕ ಮಂಡಲ ಈದು ನಾರಾವಿ ಸಂಸ್ಥೆಯು ತನ್ನ 20ನೇ ವರುಷದ ಸಫಲ ಪಯಣದ ಹರುಷದ ಆಚರಣೆಯಲ್ಲಿ ಈದು – ನಾರಾವಿಯ ಸನಾತನ ಹಿಂದೂ ಸಂಸ್ಕೃತಿಯ ಎಲ್ಲಾ ಜಾತಿ ಪಂಥ ಪಂಗಡಗಳ ಬಂಧುಗಳನ್ನುಸೂರ್ಯನಾರಾಯಣ ದೇವರ ಏಕ ಛತ್ರದಡಿಯಲ್ಲಿ ಒಗ್ಗೂಡಿಸಿ ಸನಾತನ ಹಿಂದೂ ಧರ್ಮದ ಏಕಸೂತ್ರ ಜಪಿಸಿ ನಾರಾವಿಯ ಇತಿಹಾಸದಲ್ಲಿ ಇದೆ ಪ್ರಥಮ ಬಾರಿಗೆ ಲೋಕ ಕಲ್ಯಾಣಾರ್ಥವಾಗಿ ಮಹಾ ಚಂಡಿಕಾ ಯಾಗದ ಆಯೋಜನೆಯನ್ನು ಹಮ್ಮಿಕೊಂಡಿದೆ.
ಹಸಿರುವಾಣಿ ಹೊರೆಕಾಣಿಕೆ: ಡಿಸೆಂಬರ್ 21ರಂದು ಮಧ್ಯಾಹ್ನ 3ರಿಂದ ಅರಸುಕಟ್ಟೆಯಿಂದ ಶ್ರೀ ಸೂರ್ಯನಾರಾಯಣ ದೇವಸ್ಥಾನದವರೆಗೆ 1000 ಭಜಕರಿಂದ ವಿವಿಧ ರೀತಿಯಲ್ಲಿ ಭಜನೆ, ಕುಣಿತ ಭಜನೆ, ವಿವಧ ವೇಷಭೂಷಗಳಿಂದ ಹಸಿರುವಾಣಿ ಹೊರಕಾಣಿಕೆ ನಡೆಯಲಿದೆ. ಸುಮಾರು 3000 ಮನೆಗಳಲ್ಲಿ 12 ದಿನಗಳ ಕಾಲ 108 ಬಾರಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಸ್ತೋತ್ರ – ಜಪ ಭಕ್ತಿಯಿಂದ ನಡೆಯಲಿದೆ.
ಕಾರ್ಯಕ್ರಮಗಳು : ಡಿಸೆಂಬರ್ 22ರಂದು ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆ, ಶ್ರೀ ಸ್ವಸ್ತಿ ಪುಣ್ಯಾಹ ವಾಚನ, ಭಾಗವದ್ಭಕ್ತರು ಚಂಡಿಕಾಯಾಗಕ್ಕೆ ಕುಳಿತುಕೊಳ್ಳುವುದು, ಚಂಡಿಕಾಯಾಗ ಪ್ರಾರಂಭ, ಪೂರ್ಣಾಹುತಿ, ತೀರ್ಥಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ, ಭಜನಾ ತಂಡಗಳಿಂದ ಕುಣಿತ ಭಜನೆ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ವಿಠ್ಠಲ ನಾಯಕ್ ಕಲ್ಲಡ್ಕ ಇವರಿಂದ ಗೀತ ಸಾಹಿತ್ಯ ಸಂಭ್ರಮ, ರಾತ್ರಿ ಸಭಾ ಕಾರ್ಯಕ್ರಮ, ಶಿವದೂತೆ ಗುಳಿಗೆ ನಾಟಕ ನಡೆಯಲಿರುವುದು.
ಸ್ವಾಮೀಜಿಯವರ ದಿವ್ಯ ಉಪಸ್ಥಿತಿ : ಚಂಡಿಕಾಯಾಗದಲ್ಲಿ ಸೋಲೂರು ಮಠದ ಮಠಾಧೀಶ ಶ್ರೀ ವಿಖ್ಯಾನಂದ ಸ್ವಾಮೀಜಿ ಬಲ್ಯೊಟ್ಟು, ಶ್ರೀ ಕ್ಷೇತ್ರ ಕಟೀಲು ಅಸ್ರಣ್ಣರು ಕೆ. ಲಕ್ಷ್ಮೀನಾರಾಯಣ, ಮೂಡಬಿದ್ರೆ ಜೈನ ಮಠದ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ, ಬಂಟ್ವಾಳ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಒಡಿಯೂರು ಶ್ರೀ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಕರಿಂಜೆ ಶ್ರೀ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಚಂಡಿಕಾಯಾಗ ಭಾಗವಹಿಸಲಿದ್ದಾರೆ. ಮಹಾ ಚಂಡಿಕಾಯಾಗದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನವಶಕ್ತಿ ಗ್ರೂಪ್ ಗುರುವಾಯನಕೆರೆಯ ಪ್ರಸಿದ್ಧ ಉದ್ಯಮಿ ಶಶಿಧರ ಶೆಟ್ಟಿ ಬರೋಡ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೈಂದೂರು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಡಾ| ಗೋವಿಂದಬಾಬು ಪೂಜಾರಿ ವಹಿಸಲಿದ್ದಾರೆ.
ಬಾಲವಾಗ್ಮಿ ಕು| ಹಾರಿಕ ಮಂಜುನಾಥ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಎಸ್ ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್, ಕರ್ನಾಟಕ ರಾಜ್ಯ ಕ್ವಾರಿ & ಕ್ರಶರ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ, ಕಾರ್ಕಳ ವಿಧಾನಸಭಾ ಶಾಸಕ ವಿ. ಸುನಿಲ್ ಕುಮಾರ್, ಶಾಸಕ ಹರೀಶ್ ಪೂಂಜ, ಮುಂಬೈ ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ, ಮರೋಡಿ ಶ್ರೀ ಉಮಾಮಹೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ, ಧರ್ಮಸ್ಥಳ ಶ್ರೀ. ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು, ವಿಧಾನ ಪರಿಷತ್ ಮಾಜಿ ಶಾಸಕ ಕೆ. ಹರೀಶ್ ಕುಮಾರ್, ಖ್ಯಾತ ಲೇಖಕರು ಹಾಗೂ ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ನ ಮಾಲಕ ಮೋಹನ್ ಕುಮಾರ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.