ಗುರುವಾಯನಕೆರೆಯ ಪೆಗ್ಸ್ ರೆಸ್ಟೋಬಾರ್ ಫ್ಯಾಮಿಲಿ ರೆಸ್ಟೋರೆಂಟ್ ಹೊಸ ಆಡಳಿತದೊಂದಿಗೆ ಶುಭಾರಂಭ
ಅತಿಥಿ ಸೇವೆಯ ‘ರೇಸ್’ನಲ್ಲಿ ಹಿಂದೆ ಬೀಳದ ‘ರೇಸ್ ಇನ್ ಹೋಟೆಲ್’
ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿರುವ ಹೋಟೆಲ್ ರೇಸ್ ಇನ್ ಆಹಾರ ವಿಭಾಗವಾದ “ಪೆಗ್ಸ್ ರೆಸ್ಟೋ ಬಾರ್ ಫ್ಯಾಮಿಲಿ ರೆಸ್ಟೋರೆಂಟ್” ಡಿಸೆಂಬರ್ 7ರಿಂದ ಹೊಸ ಆಡಳಿತದೊಂದಿಗೆ ಪ್ರಖ್ಯಾತ ಹೋಟೆಲ್ ಉದ್ಯಮಿ ಬೆಳ್ತಂಗಡಿಯ ಜೋರ್ಡನ್ ಫ್ಯಾಮಿಲಿ ರೆಸ್ಟೋರೆಂಟ್ ನ ನಿರ್ವಹಣಾ ತಂಡದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಗ್ರಾಹಕರಿಗೆ ವಿಶಿಷ್ಟ ಅನುಭವವನ್ನು ನೀಡುತ್ತಾ ಇದೆ. ಈ ಮೂಲಕ ಆಹಾರ ಪ್ರಿಯರಿಗೆ ವಿಶೇಷ ರುಚಿಗಳ ಸಂಭ್ರಮವನ್ನು ನೀಡುವ ‘ಫುಡ್ ಸ್ಪಾಟ್’ ಆಗುವ ಭರವಸೆ ಮೂಡಿ ಬಂದಿದೆ.
ಇದರ ಉದ್ಘಾಟನೆ ಮತ್ತು ಆಶೀರ್ವಚನವನ್ನು ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ವಾಲ್ಟರ್ ಡಿಮೆಲ್ಲೊ ನೆರವೇರಿಸಿದರು. ಸಿ.ವಿ.ಸಿ. ಸಂಸ್ಥೆಯ ಜೇಮ್ಸ್ ಡಿಸೋಜಾ, ಅಲ್ಫೋನ್ಸ್ ಡಿಸೋಜಾ, ಬೆಳ್ತಂಗಡಿ ಕ್ಯಾಥೋಲಿಕ್ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಅಧ್ಯಕ್ಷ ಹೆನ್ರಿ ಲೋಬೊ, ಗೋಕುಲ್ ದಾಸ್ ಭಂಡಾರ್ಕರ್, ಕಟ್ಟಡ ಮಾಲಕರಾಗಿರುವ ವಿಜಯ್ ಡಿಕುನ್ಹಾ, ಉಜಿರೆ ಲಕ್ಷ್ಮೀ ಗ್ರೂಪ್ಸ್ ನ ಮೋಹನ್ ಕುಮಾರ್, ಜೈಸಾನ್ ಡಿಸೋಜಾ, ಅಶ್ವಿನಿ ಡಿಸೋಜಾ, ಹೆರಿಕ್ ಡಿಸೋಜಾ, ಫ್ರಾಂಕಿ ಡಿಸೋಜಾ, ಪೌಲಿನ್ ರೇಗೊ, ಜೆರಾಲ್ಡ್ ಕೊರೆಯ, ಜೆಸಿಂತಾ ಮೋನಿಸ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿನ್ಸೆಂಟ್ ಮೊರಾಸ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
‘ರೇಸ್ ಇನ್ ಹೋಟೆಲ್’ ನೀಡುತ್ತಿದೆ ಅತಿಥಿಗಳಿಗೆ ಹೊಸ ಅನುಭವ :
ರೇಸ್ ಇನ್ ಹೋಟೆಲ್ ತನ್ನ ಅತಿಥಿ ಸೇವೆಯಿಂದ ಜನಪ್ರಿಯಗೊಳ್ಳುತ್ತಿದ್ದು, ಖ್ಯಾದ ಪ್ರಿಯರು ಹಾಗೂ ಕಾರ್ಯಕ್ರಮ ಆಯೋಜಕರ ಮೊದಲ ಆಯ್ಕೆಯಾಗಿ ಮೂಡಿಬರುವ ಮೂಲಕ ಕಾರ್ಯಾರಂಭ ಮಾಡಿದ ಒಂದು ವರ್ಗದಲ್ಲೇ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಹೋಟೆಲ್ ನ ಮಾಲೀಕರಾದ ವಿಜಯ್ ಡಿಕುನ್ಹಾ ಮತ್ತು ಜೇನ್ ಡಿಕುನ್ಹಾ ಹೋಟೆಲಿನ ಆಹಾರ ವಿಭಾಗದ ಪಾಕಶಾಲೆ ಹಾಗೂ ಅತಿಥಿಗಳ ಸೇವೆಗಳಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ.
ಬೆಳ್ತಂಗಡಿಯ ಪ್ರಖ್ಯಾತ ಹೋಟೆಲ್ ಉದ್ಯಮಿ ಜೆಯನ್ಸ್ ಡಿಸೋಜಾ ಮತ್ತು ಅಶ್ವಿನಿ ಡಿಸೋಜಾ ಅವರ ಅನುಭವಿ ಮಾರ್ಗದರ್ಶನದಲ್ಲಿ, ಹೊಸ ನಿರ್ವಹಣಾ ತಂಡ ಕಾರ್ಯನಿರ್ವಹಿಸುತ್ತಿದ್ದು, ಅಡುಗೆ ತಂತ್ರಜ್ಞಾನದ ಸುಧಾರಣೆ ಮತ್ತು ಹೊಸ ಮಾದರಿಯ ವಿಶೇಷ ರುಚಿಗಳ ಮೂಲಕ ಖಾದ್ಯಪ್ರಿಯರ ಮನಗೆಲ್ಲುವ ಉತ್ಸಾಹದಲ್ಲಿ ರೇಸ್ ಇನ್ ಹೋಟೆಲ್ ಕಾರ್ಯನಿರ್ವಹಿಸುತ್ತಿದೆ.
ಈ ಹೋಟೆಲ್ ನಲ್ಲಿ 400 ಕ್ಕೂ ಅಧಿಕ ಆಸನ ಸಾಮರ್ಥ್ಯವಿರುವ ವೆಲ್ಜಿಲ್ ಏರ್ ಕಂಡೀಷನ್ ಪಾರ್ಟಿ ಹಾಲ್ ನೊಂದಿಗೆ ಹಲವು ತರಹದ ಆಹಾರ ಒಳಗೊಂಡ ಭೋಜನ ವ್ಯವಸ್ಥೆ ಒದಗಿಸಲಾಗುತ್ತದೆ. ಈ ಪಾರ್ಟಿ ಹಾಲ್ ಎಲ್ಲಾ ರೀತಿಯ ಸಮಾರಂಭಗಳು, ಸಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಶೇಷ ಆಯೋಜನೆಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಇದರೊಂದಿಗೆ ಸುಸಜ್ಜಿತ ಲಾಡ್ಜ್ ಸೌಲಭ್ಯವೂ ಲಭ್ಯವಿದ್ದು, ರೂಂಗಳ ಸೇವೆ ಮೂಲಕ ರುಚಿಕರವಾದ ಊಟವನ್ನು ಕೂಡ ಅತಿಥಿಗಳಿಗೆ ಒದಗಿಸಲಾಗುತ್ತದೆ. ಬುಕ್ಕಿಂಗ್ ಗಾಗಿ, ಹೋಟೆಲ್ ವೆಬ್ ಸೈಟ್ ‘WWW.RAYSINN.IN’ ಗೆ ಭೇಟಿ ನೀಡಬಹುದಾಗಿದೆ. ಈ ಮೂಲಕ ಆನ್ ಲೈನ್ ನಲ್ಲಿ ವಾಸ್ತವ್ಯ ಮತ್ತು ಪಾರ್ಟಿ ಹಾಲ್ ಬುಕ್ಕಿಂಗ್ ಮಾಡಬಹುದಾಗಿದೆ.
ರೇಸ್ ಇನ್ ಹೋಟೆಲ್ ನವೀಕರಣದೊಂದಿಗೆ ಹೊಸ ಪರ್ವವನ್ನು ಆರಂಭಿಸಿದೆ. ಗುರುವಾಯನಕೆರೆಯ ಹೋಟೆಲ್ ಸೇವೆಯಲ್ಲಿ ಇದೊಂದು ಮೈಲಿಗಲ್ಲಾಗಿದೆ. ತಮ್ಮ ಕ್ಷೇತ್ರದಲ್ಲಿ ಉನ್ನತ ಮಟ್ಟದ ಯಶಸ್ಸು ಸಾಧಿಸಿರುವ ಈ ಹೊಸ ನಿರ್ವಹಣೆ, ಆಹಾರ ಪ್ರಿಯರಿಗೆ ವಿಶೇಷ ರುಚಿಗಳ ಸಂಭ್ರಮವನ್ನು ನೀಡುವ ಪ್ರಸಿದ್ಧ ತಾಣವಾಗುವ ಭರವಸೆಯನ್ನು ಮೂಡಿಸಿದೆ.