ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ; ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತಗೊಳಿಸಿದ ಪುತ್ತೂರು ಸತ್ರ ನ್ಯಾಯಾಲಯ
ವಿಶೇಷ ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿದ ಪ್ರತಿಷ್ಠಿತ “ಕಜೆ ಲಾ ಛೇಂಬರ್ಸ್’ ಮುಖ್ಯಸ್ಥರಾದ ಖ್ಯಾತ ನ್ಯಾಯವಾದಿ ಮಹೇಶ್ ಕಜೆ
ಪುತ್ತೂರು: ನವೆಂಬರ್ 6ರ ತಡರಾತ್ರಿ ಪುತ್ತೂರಿನ ನೆಹರೂ ನಗರದಲ್ಲಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಒಂದನೇ ಮತ್ತು ಎರಡನೇ ಆರೋಪಿಗಳಾದ ಚೇತನ್ ಅಲಿಯಾಸ್ ಪುಂಡಿ ಚೇತು ಹಾಗೂ ಮನೀಷ್ ಅಲಿಯಾಸ್ ಬ್ರೋಕರ್ ಮನಿ ಎಂಬವರು ಮಾನ್ಯ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.
ಜಾಮೀನು ಅರ್ಜಿಯ ವಿಚಾರಣೆಯ ಸುದೀರ್ಘ ವಾದ-ಪ್ರತಿದಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕೃತಗೊಳಿಸಿದ್ದಾರೆ.
ದೂರುದಾರರ ಪರ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಗೊಂಡ ಪುತ್ತೂರು ಬೊಳುವಾರು ಇಲ್ಲಿನ ಪ್ರತಿಷ್ಠಿತ ‘ಕಜೆ ಲಾ ಛೇಂಬರ್ಸ್’ ಇದರ ಮುಖ್ಯಸ್ಥರಾದ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ವಾದಮಂಡಿಸಿದ್ದರು. ಇಳಂತಿಲ ಕೇದಾರ ನಿವಾಸಿಯಾಗಿರುವ ಮಹೇಶ್ ಕಜೆ ಇವರು ಜಾರಿ ನಿರ್ದೇಶನಾಲಯ (ಇ.ಡಿ.) ಪರ ವಿಶೇಷ ಸರಕಾರಿ ಅಭಿಯೋಜಕರೂ ಆಗಿದ್ದಾರೆ.