January 14, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಜೆಸಿಐ ಬಂಟ್ವಾಳ ಇದರ 2025ನೇ ಸಾಲಿನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬಂಟ್ವಾಳ: ಜೆಸಿಐ ಬಂಟ್ವಾಳ ಇದರ 2025ನೇ ಸಾಲಿನ ಅಧ್ಯಕ್ಷ ಗಣೇಶ್ ಕೆ. ಕುಲಾಲ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಡಿಸೆಂಬರ್ 14ರಂದು ಶನಿವಾರ ಸಂಜೆ ಬಿ.ಸಿ. ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು.

ನೂತನ ತಂಡವನ್ನು ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಉದ್ಘಾಟಿಸಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಜೆಸಿಐ ಭಾರತದ ಎಲ್ಲಾ ಘಟಕಗಳು ಮೌನವಹಿಸಿದ್ದಾಗ ವಲಯ 15 ಸದ್ದು ಮಾಡುತ್ತಿತ್ತು. ಈ ಸಂದರ್ಭ ವಲಯಕ್ಕೆ ಬೆನ್ನಲುಬಾಗಿ ನಿಂತು ಕಾರ್ಯಕ್ರಮ ಸಂಘಟಿಸಿದ ಕೀರ್ತಿ ಜೆಸಿಐ ಬಂಟ್ವಾಳಕ್ಕೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್ ಕಷ್ಟದ ಕಾಲದಲ್ಲೂ ವ್ಯವಹಾರ ಸಮ್ಮೇಳನವನ್ನು ನಿಶುಲ್ಕವಾಗಿ ಆಯೋಜಿಸಿದ ಹೆಗ್ಗಳಿಕೆ ಜೆಸಿಐ ಬಂಟ್ವಾಳಕ್ಕಿದೆ. ಇಂತಹ ಘಟಕದ ಮೇಲೆ ಪ್ರೀತಿ ಅಭಿಮಾನವಿದ್ದು ಮುಂದಿನ ದಿನಗಳಲ್ಲಿ ಅತ್ಯುತ್ತಮ ಕಾರ್ಯಗಳ ಮೂಲಕ ಮಾದರಿ ಘಟಕವಾಗಿ ಹೊರ ಹೊಮ್ಮಲಿ ಎಂದು ಆಶಿಸಿದರು.

2025ನೇ ಸಾಲಿನ ಚುನಾಯಿತ ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಘಟಕ ರೈಸ್ ಅಪ್ ಆಗಬೇಕಾದರೆ ಎಲ್ಲರ ಸಹಕಾರ ಬೇಕು. ಮುಂದಿನ ವರ್ಷದಲ್ಲಿ ವಲಯದ ಅಭಿವೃದ್ದಿಗೆ ಬಂಟ್ವಾಳ ಘಟಕದ ಸಹಕಾರ ಬೇಕು, ಬಂಟ್ವಾಳ ಘಟಕಕ್ಕೆ ಸಹಕಾರ ನೀಡಲು ಸದಾ ಬದ್ದರಾಗಿರುವಿದಾಗಿ ತಿಳಿಸಿದರು.  ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಮಾತನಾಡಿ ಜೆಸಿಐ ಸಂಸ್ಥೆ ಬಯಲು ವಿಶ್ವವಿದ್ಯಾನಿಲಯವಿದ್ದಂತೆ. ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಆ ಅನುಭವವನ್ನು ಪಡೆಯಲು ಸಾಧ್ಯವಿದೆ. ಸದಸ್ಯರು ಜವಾಬ್ದಾರಿಯನ್ನು ಅರಿತುಕೊಂಡಾಗ ಸಂಘಟನೆಗೊಂದು ರೂಪ ಬರಲು ಸಾಧ್ಯ ಎಂದರು.

ನಿರ್ಗಮನ ಅಧ್ಯಕ್ಷೆ ರಶ್ಮಿ ಶೆಟ್ಟಿ ಅವರಿಂದ ಗಣೇಶ್ ಕೆ. ಕುಲಾಲ್ ಅಧಿಕಾರ ಸ್ವೀಕರಿಸಿದರು. ಬಳಿಕ ಆಶಯ ಭಾಷಣ ಮಾಡಿ ಮುಂದಿನ ವರ್ಷ ಕೆಲವೊಂದು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಸದಸ್ಯರು ಸಹಕಾರ ನೀಡುವಂತೆ ಕೋರಿದರು.

ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಆಚಾರ್ಯ, ಕೋಶಾಧಿಕಾರಿಯಾಗಿ ಜೀವಿತ ಯತೀಶ್ ಕರ್ಕೇರಾ, ಉಪಾಧ್ಯಕ್ಷರಾಗಿ ಶ್ರೀನಿವಾಸ್ ಅರ್ಬಿಗುಡ್ಡೆ, ಉಮೇಶ್ ಪೂಜಾರಿ, ಮನೋಜ್ ಕನಪಾಡಿ, ಕಿರಣ್ ಕುಮಾರ್, ವಚನ್ ಶೆಟ್ಟಿ, ವೆಂಕಟೇಶ್ ಕೃಷ್ಣಾಪುರ, ಲೇಡಿ ಜೇಸಿ ಸಂಯೋಜಕಿಯಾಗಿ ಬಬಿತಾ ಗಣೇಶ್ ಅಧಿಕಾರ ಸ್ವೀಕರಿಸಿದರು. 5 ಮಂದಿ ನೂತನ ಸದಸ್ಯರಿಗೆ ಪ್ರಮಾಣ ವಚನ ಭೋದಿಸಲಾಯಿತು.  ನಿಕಟಪೂರ್ವಾಧ್ಯಕ್ಷ ರಾಜೇಂದ್ರ ಕೆ., ಸಾಧಕ ಸದಸ್ಯರಾದ ಮನೋಜ್ ಕನಪಾಡಿ, ಸುರೇಶ್ ಕುಮಾರ್ ಬಿ. ನಾವೂರು, ಸಂದೀಪ್ ಸಾಲ್ಯಾನ್ ಅವರನ್ನು ಅಭಿನಂದಿಸಲಾಯಿತು. ನಿರ್ಗಮನ ಕಾರ್ಯದರ್ಶಿ ಶ್ರೀನಿವಾಸ ಅರ್ಬಿಗುಡ್ಡೆ, ನಿರ್ಗಮನ ಕೋಶಾಧಿಕಾರಿ ಮನೋಜ್ ಕನಪಾಡಿ, ಲೇಡಿ ಜೇಸಿ ಸಂಯೋಜಕಿ ಆಶಾಮಣಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ಗಮನ ಅಧ್ಯಕ್ಷೆ ರಶ್ಮಿ ಶೆಟ್ಟಿ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ಕಿಶೋರ್ ಆಚಾರ್ಯ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಗೀತ ರಸ ಮಂಜರಿ ನಡೆಯಿತು.

You may also like

News

ಕಥೊಲಿಕ್ ಸಭಾ ಶಂಭೂರು ಘಟಕದ ಬೆಳ್ಳಿಹಬ್ಬ ಸಂಭ್ರಮದಿಂದ ಆಚರಣೆ

ಸೇವೆ, ತ್ಯಾಗ ಮತ್ತು ಒಗ್ಗಟ್ಟು ಶಂಭೂರು ಚರ್ಚ್ ನಲ್ಲಿ ಎದ್ದು ಕಾಣುತ್ತಿದೆ  – ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಮಂಗಳೂರು ಧರ್ಮಕ್ಷೇತ್ರದ ಸೈಂಟ್ ಜೋನ್
News

ಪೋಪ್ ಫ್ರಾನ್ಸಿಸ್‍ರವರಿಗೆ `ಮೆಡಲ್ ಆಫ್ ಫ್ರೀಡಂ’ ಗೌರವ ನೀಡಿದ ಅಮೆರಿಕದ ನಿರ್ಗಮಿತ ಅಧ್ಯಕ್ಷ ಬೈಡನ್

ವಾಷಿಂಗ್ಟನ್: ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಜನವರಿ 11ರಂದು ಶನಿವಾರ ಫೋನ್ ಕರೆಯಲ್ಲಿ ಪೋಪ್ ಫ್ರಾನ್ಸಿಸ್ ಅವರಿಗೆ ಅಧ್ಯಕ್ಷೀಯ `ಸ್ವಾತಂತ್ರ್ಯ ಪದಕ’ ಪ್ರದಾನ ಮಾಡಿದರು ಎಂದು

You cannot copy content of this page