ಸೂರಿಕುಮೇರುವಿನಲ್ಲಿ ನಡೆದ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ದುಆ ನೇತೃತ್ವ ನೀಡಿದ ಡಾ| ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಕಾಮಿಲ್
ಮಾಣಿ : ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಇಜಾಝತ್ ಮೂಲಕ ನಡೆಯುವ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ಕಾರ್ಯಕ್ರಮ ಮಾಣಿ ಇಬ್ರಾಹಿಂ ಸಅದಿ ಉಸ್ತಾದರ ನಿವಾಸದಲ್ಲಿ ಡಿಸೆಂಬರ್ 15ರಂದು ಆದಿತ್ಯವಾರ ನಡೆಯಿತು.
ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕುದುಂಬ್ಲಾಡಿ ಅಲ್ ಮುರ್ಶಿದ್ ಅಕಾಡೆಮಿ ಮುಖ್ಯಸ್ಥರಾದ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಅಲ್ ಫುರ್ಖಾನಿ ಮಂಜನಾಡಿ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ಮಾಣಿ ದಾರುಲ್ ಇರ್ಶಾದ್ ಅಜ್ಮೀರ್ ಮೌಲಿದ್ ಕಾರ್ಯಕ್ರಮದ ಪ್ರಚಾರ ನಡೆಸಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಈಸ್ಟ್ ಜಿಲ್ಲಾ ನಾಯಕರಾದ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಹನೀಫ್ ಸಂಕ ಸೂರಿಕುಮೇರು, ಯೂಸುಫ್ ಹಾಜಿ ಸೂರಿಕುಮೇರು, ಇಬ್ರಾಹಿಂ ಮಾಣಿ, ನಝೀರ್ ಅಮ್ಜದಿ ಸರಳಿಕಟ್ಟೆ, ಅಬ್ದುಲ್ ರಹ್ಮಾನ್ ಅಹ್ಸನಿ ಮಾಣಿ, ಶಬೀರ್ ಅಹ್ಸನಿ ಕುದ್ರಡ್ಕ, ಅಬ್ದುಲ್ ಕರೀಂ ಸೂರಿಕುಮೇರು, ಟೈಲರ್ ಹಸೈನ್, ಹಂಝ ಸೂರಿಕುಮೇರು, ಇಮ್ರಾನ್ ಸೂರಿಕುಮೇರು, ಮುಂತಾದವರು ಉಪಸ್ಥಿತರಿದ್ದರು, ಸಲೀಂ ಮಾಣಿ ಸ್ವಾಗತಿಸಿ ವಂದಿಸಿದರು.