ಯಕ್ಷಧ್ರುವ ಪಟ್ಲ ಘಟಕ ಬೆಳ್ತಂಗಡಿ ವತಿಯಿಂದ ಯಕ್ಷಸಂಭ್ರಮ ಉದ್ಘಾಟನೆ
ಬೆಳ್ತಂಗಡಿ : ಯಕ್ಷಧ್ರುವ ಪಟ್ಲಾ ಘಟಕ ಇದರ ವತಿಯಿಂದ ಯಕ್ಷ ಸಂಭ್ರಮ ಕಾರ್ಯಕ್ರಮವು ಡಿಸೆಂಬರ್ 14ರಂದು ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ಜರುಗಿತು. ಅಧ್ಯಕ್ಷತೆಯನ್ನು ಬೆಳ್ತಂಗಡಿ ಯಕ್ಷಧ್ರುವ ಪಟ್ಲ ಘಟಕದ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ವಹಿಸಿದ್ದರು. ಕಾರ್ಯಕ್ರಮವನ್ನು ಬೆಳ್ತಂಗಡಿಯ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅಥಿತಿಗಳಾಗಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉದ್ಯಮಿ ಮೋಹನ್ ಕುಮಾರ್ ಉಜಿರೆ, ಮಂಗಳೂರು ಯಕ್ಷಧ್ರುವ ಯಕ್ಷಶಿಕ್ಷಣ ಪ್ರಧಾನ ಸಂಚಾಲಕರು ವಾಸುದೇವ ಐತಾಳ್ ಪಣಂಬೂರು, ಯಕ್ಷದ್ರುವ ಬೆಳ್ತಂಗಡಿ ಘಟಕದ ಸ್ಥಾಪಕಾಧ್ಯಕ್ಷ ಬಿ. ಭುಜಬಲಿ, ಸಮಿತಿಯ ಗೌರವಾಧ್ಯಕ್ಷ ಜಯರಾಮ ಶೆಟ್ಟಿ ನವಶಕ್ತಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ತರಭೇತಿ ಗುರುಗಳಾದ ಈಶ್ವರ ಪ್ರಸಾದ್ ನಿಡ್ಲೆ, ದೇವಿಪ್ರಸಾದ್ ಶಕ್ತಿನಗರ, ಅರುಣ್ ಕುಮಾರ್ ಧರ್ಮಸ್ಥಳ, ನರೇಂದ್ರ ಕುಮಾರ್ ಇವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ, ರಘುರಾಮ ಶೆಟ್ಟಿ ಸಾಧನಾ ಉಜಿರೆ, ಕಾರ್ಯದರ್ಶಿ ಶಿಟಿಕಂಠ ಭಟ್ ಉಜಿರೆ, ಸಂಚಾಲಕರು ಕಿರಣ್ ಕುಮಾರ್ ಶೆಟ್ಟಿ, ಕೋಶಧಿಕಾರಿ ಆದರ್ಶ್ ಜೈನ್ ಉಪಸ್ಥಿತರಿದ್ದರು.
ಸಿಂಚನ ಮತ್ತು ಬಳಗ ಪ್ರಾರ್ಥನೆ ಬಳಿಕ ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಸ್ವಾಗತಿಸಿದರು. ಉಪನ್ಯಾಸಕ ಡಾ. ಮಹೇಶ್ ಕಾರ್ಯಕ್ರಮ ನಿರೂಪಿಸಿದರು. 480 ಯಕ್ಷ ವಿದ್ಯಾರ್ಥಿಗಳಿಂದ ಯಕ್ಷಗಾನ ರಂಗ ಪ್ರವೇಶ ನಡೆಯಿತು.