ಉಪ್ಪಿನಂಗಡಿಯಲ್ಲಿ ಭಾಗವತ ಲೀಲಾವತಿ ಬೈಪಡಿತ್ತಾಯರಿಗೆ ನುಡಿನಮನ ಮತ್ತು ತಾಳಮದ್ದಳೆ
ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 57ನೇ ತಾಳಮದ್ದಳೆಯಾಗಿ ಜಟಾಸುರ -ಮಣಿಮಾನ್ಯ ಕಾಳಗ ಜರಗಿತು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ನಡೆದ ತಾಳಮದ್ದಳೆಯಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್, ಮಲ್ಲಿಕಾಶೆಟ್ಟಿ ಸಿದ್ದಕಟ್ಟೆ, ಸುರೇಶ ರಾವ್ ಬಿ., ನಿತೀಶ್ ಕುಮಾರ್ ವೈ. ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಪ್ರಚೇತ್ ಆಳ್ವ ಬಾರ್ಯ ಅರ್ಥಧಾರಿಗಳಾಗಿ ಪೂರ್ಣಿಮ ರಾವ್ ಬೆಳ್ತಂಗಡಿ (ಧರ್ಮರಾಯ) ಗೀತಾಕುದ್ದಣ್ಣಾಯ (ಜಟಾಸುರ1) ಜಯರಾಮ ಬಲ್ಯ (ಭೀಮ 1) ಶ್ರೀಧರ ಎಸ್ಪಿ ಸುರತ್ಕಲ್ (ಜಟಾಸುರ 2) ಶ್ರುತಿ ವಿಸ್ಮಿತ್ (ಮಣಿ ಮಾನ್ಯ ಮತ್ತು ದೌಮ್ಯ ಶಿಷ್ಯರು) ದಿವಾಕರ ಆಚಾರ್ಯ ಗೇರುಕಟ್ಟೆ (ನಕುಲ) ಪ್ರದೀಪ ಚಾರ ಹೆಬ್ರಿ (ಸಹದೇವ) ಜಯರಾಮ ಬಲ್ಯ (ಭೀಮ 1) ದಿವಾಕರ ಆಚಾರ್ಯ ನೇರೆಂಕಿ (ಭೀಮ2) ವಿಜಯಲಕ್ಷ್ಮಿ ವಿ. ಶೆಟ್ಟಿ (ದೌಮ್ಯ ಮುನಿ) ತಿಲಕಾಕ್ಷ (ದ್ರೌಪದಿ) ಭಾಗವಸಿದ್ದರು.
ಭಾಗವತ ಲೀಲಾವತಿ ಬೈಪಡಿತ್ತಾಯರಿಗೆ ಶ್ರದ್ದಾಂಜಲಿ: ನಿಧನರಾದ ತೆಂಕುತಿಟ್ಟಿನ ಪ್ರಸಿದ್ಧ ಮಹಿಳಾ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಡಿತ್ತಾಯರಿಗೆ ನುಡಿನಮನವನ್ನು ಅವರ ಶಿಷ್ಯೆ, ಹವ್ಯಾಸಿ ಭಾಗವತರಾದ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ ಸಲ್ಲಿಸಿದರು. ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಮಾತನಾಡಿ ವೃತ್ತಿ ಕಲಾವಿದರಾಗಿ ಯಕ್ಷಗಾನ ಮೇಳದ ತಿರುಗಾಟ, ಭಾಗವತಿಕೆ ಗುರುಗಳಾಗಿ ಸಲ್ಲಿಸಿದ ನಾಲ್ಕು ದಶಕಗಳ ಕಲಾಸೇವೆಯು ಅವರೊಬ್ಬರದ್ದೆ ಸಾಧನೆಯಾಗಿ ಯಕ್ಷಗಾನದ ಇತಿಹಾಸದಲ್ಲಿ ದಾಖಲಾಗುವುದೆಂದು ತಿಳಿಸಿದರು. ಯಕ್ಷಗಾನ ಪ್ರಸಂಗಕರ್ತ ಪ್ರದೀಪ ಚಾರ ಹೆಬ್ರಿ, ಸಂಘದ ಕಾರ್ಯದರ್ಶಿ ಶ್ರೀಪತಿ ಭಟ್, ವಿಜಯಲಕ್ಷ್ಮಿ ವಿ. ಶೆಟ್ಟಿ ಪೆರ್ನೆ, ಪೂರ್ಣಿಮಾ ರಾವ್ ಬೆಳ್ತಂಗಡಿ ವೇದಿಕೆಯಲ್ಲಿದ್ದರು. ಕಲಾವಿದೆ ಶ್ರುತಿ ವಿಸ್ಮಿತ್ ಕಾರ್ಯಕ್ರಮ ನಿರ್ವಹಿಸಿದರು.