May 12, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕ್ರಿಸ್ಮಸ್ ಹಬ್ಬದ ತಯಾರಿಯಲ್ಲಿರುವ ಬಾಲಕ ಸ್ಟೀಫನ್ ವಿದ್ಯುತ್ ಸ್ಪರ್ಶಿಸಿ ಮೃತ್ಯು

ಬೆಳ್ತಂಗಡಿ : ವಿದ್ಯಾರ್ಥಿಯೊಬ್ಬ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ‌ ಬೆಳ್ತಂಗಡಿ ತಾಲೂಕಿನ ತೆಂಕ ಕಾರಂದೂರು ಪೆರೊಡಿತ್ತಾಯನ ಕಟ್ಟೆ ಬಳಿ ಇಂದು ಡಿಸೆಂಬರ್ 19ರಂದು ಗುರುವಾರ ಬೆಳಗ್ಗೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ತೆಂಕಕಾರಂದೂರು ಪೆರೋಡಿತ್ತಾಯನ ಕಟ್ಟೆ ಶಾಲಾ ಬಳಿಯ ನಿವಾಸಿ 14ವರ್ಷ ಪ್ರಾಯದ ಸ್ಟೀಫನ್ ಎಂದು ಗುರುತಿಸಲಾಗಿದೆ. ಈತ ಬೆಳ್ತಂಗಡಿ ಸಂತ ತೆರೇಸಾ ಶಾಲೆಯ 9 ನೇ ತರಗತಿ ವಿದ್ಯಾರ್ಥಿ. ಕ್ರಿಸ್ಮಸ್ ಪ್ರಯುಕ್ತ ಮನೆಗೆ ಸಾಂತಾಕ್ಲಾಸ್ ಬರುವ ಹಿನ್ನೆಲೆಯಲ್ಲಿ ಮನೆಗೆ ಆಲಂಕಾರ ಮಾಡುವ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಬಂದರೂ ಅಷ್ಟೊತ್ತಿಗಾಗಲೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಮೃತ ವಿದ್ಯಾರ್ಥಿಯ ತಂದೆ ಹಾಗೂ ತಾಯಿ ಕೆಲವು ವರ್ಷಗಳ ಹಿಂದೆ ಮೃತ ಪಟ್ಟಿದ್ದರು. ಈತ ಅಜ್ಜಿ ಮನೆಯಲ್ಲಿದ್ದು ಶಿಕ್ಷಣ ಪಡೆಯುತ್ತಿದ್ದ. ಇಂದು ಶಾಲೆಗೆ ರಜೆ ಮಾಡಿ ಮನೆಯಲ್ಲಿ ಅಲಂಕಾರ ಮಾಡುತ್ತಿದ್ದ ಎನ್ನಲಾಗಿದೆ.

You may also like

News

ವಾಹನದಲ್ಲಿ ವಕೀಲೇತರರು “ವಕೀಲರ ಚಿಹ್ನೆ” ಸ್ಟಿಕ್ಕರ್ ಬಳಿಸಿದರೆ ಕಠಿಣ ಕ್ರಮದ ಎಚ್ಚರಿಕೆ

ಅಕ್ರಮದ ವಿರುದ್ಧ ಮಾಹಿತಿ ನೀಡುವಂತೆ ವಕೀಲರ ಪರಿಷತ್‌ ಮನವಿ ವಕೀಲರಲ್ಲದವರೂ ತಮ್ಮ ಖಾಸಗಿ ಯಾ ವಾಣಿಜ್ಯ ವಾಹನಗಳಲ್ಲಿ “ವಕೀಲರ ಚಿಹ್ನೆ” ಸ್ಟಿಕ್ಕರ್ ಬಳಸುತ್ತಿರುವುದು ನಮ್ಮ ಗಮನಕ್ಕೆ ಬಂದರೆ,
News

ಮೊಗರ್ನಾಡ್ ಚರ್ಚ್ ನಲ್ಲಿ ಪ್ರಥಮ ಪರಮ ಪ್ರಸಾದದ ಸಂಭ್ರಮ

ದೇವಮಾತೆಗೆ ಸಮರ್ಪಿಸಿದ ಮೊಗರ್ನಾಡ್ ಧರ್ಮಕೇಂದ್ರದವು 250ನೇ ಜ್ಯುಬಿಲಿ ಆಚರಿಸುವ ಸಂದರ್ಭದಲ್ಲಿ ಮೇ 11ರಂದು ಆದಿತ್ಯವಾರ ದೇವಾಲಯದ ವ್ಯಾಪ್ತಿಗೆ ಒಳಪಟ್ಟ 26 ಪುಟ್ಟ ಮಕ್ಕಳು ತಮ್ಮ ಜೀವಿತದಲ್ಲಿ ಮೊದಲ

You cannot copy content of this page