ಧರ್ಮಸ್ಥಳದ ಡಾ. ಹೇಮಾವತಿ ಹೆಗಡೆ ಇವರಿಗೆ ರಾಜ್ಯ ಮಟ್ಟದ, “ಗಿರಿಜಾ ರತ್ನ ಪ್ರಶಸ್ತಿ” ಪ್ರದಾನ
ಬಂಟ್ವಾಳ ತಾಲೂಕಿನ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ವತಿಯಿಂದ ನೀಡುವ ರಾಜ್ಯ ಮಟ್ಟದ, “ಗಿರಿಜಾ ರತ್ನ ಪ್ರಶಸ್ತಿ” ಗೆ ಧರ್ಮಸ್ಥಳದ ಡಾ. ಹೇಮಾವತಿ ಹೆಗಡೆ ಇವರನ್ನು ಆಯ್ಕೆ ಮಾಡಲಾಯಿತು. ಡಾ. ಹೇಮಾವತಿ ಹೆಗಡೆ ಇವರನ್ನು ಡಿಸೆಂಬರ್ 19ರಂದು ಗುರುವಾರ ಸಮಿತಿಯ ಸದಸ್ಯರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭೇಟಿಮಾಡಿ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಇದರ ಮುಖ್ಯಸ್ತೆ ಪ್ರತಿಷ್ಟಿತ ಕರ್ನಾಟಕ ಸರಕಾರ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ಶೈಲಜಾ ರಾಜೇಶ್, ಸಮಿತಿಯ ಸದಸ್ಯರುಗಳಾದ ಜಯಂತಿ, ಇಂದಿರಾ ಗೋಪಾಲ್, ಭಾರತಿ, ಮಲ್ಲಿಕಾ ಕಲ್ಲಡ್ಕ, ಹಿರಿಯ ಸಮಾಜಸೇವಕ ಭುಜಬಲಿ ಮೊದಲದವರು ಉಪಸ್ಥಿತರಿದ್ದರು.