ಬಜ್ಪೆ ಗುಂಡಾರಪದವು ಇಲ್ಲಿ ಮಹಿಳಾ ಸಬಲೀಕರಣ ಮತ್ತು ಅನರಕ್ಷತೆ ಕಾರ್ಯಕ್ರಮ
ಡಿಸೆಂಬರ್ 17ರಂದು ಸ್ಪೂರ್ತಿ ಚಾರಿಟೇಬಲ್ ಟ್ರಸ್ಟ್ ವಾಮಂಜೂರು ಮತ್ತು ಡಾ. ದಯಾನಂದ ಪೈ, ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಬಜ್ಪೆ ಏರ್‌ಪೋರ್ಟ್ ರೋಡ್ ಗುಂಡಾರಪದವು ಇಲ್ಲಿ ಧರ್ಮಜ್ಯೋತಿ ಸೇವಾ ಸಂಸ್ಥೆಯ ಕಾರ್ಯಕರ್ತೆ ರೆನಿಟಾ ಲೂವಿಸ್ ಇವರು ಮಹಿಳೆಯರ ಸಬಲೀಕರಣ ಮತ್ತು ಅನರಕ್ಷತೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
34 ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಎಮ್.ಎಸ್.ಡಬ್ಲ್ಯೂ. ವಿದ್ಯಾರ್ಥಿನಿ ನಿಶಾ ನಿರೂಪಿಸಿ, ಗೀತಾಶ್ರೀ ವಂದಿಸಿದರು. ಪ್ರಸನ್ನಾ ಮತ್ತು ಸುದೀಪ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.