April 21, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಕರಾವಳಿ ಉತ್ಸವದಲ್ಲಿ  ಹೆಲಿಕಾಪ್ಟರ್ ಮೂಲಕ ಕರಾವಳಿ ಪ್ರದಕ್ಷಿಣೆ

ಮಂಗಳೂರು ಡಿಸೆಂಬರ್ 20: ಈ ಬಾರಿಯ ಕರಾವಳಿ ಉತ್ಸವದ ಅಂಗವಾಗಿ ಮಂಗಳೂರಿನಲ್ಲಿ ಹೆಲಿಕಾಪ್ಟರ್ ಮೂಲಕ ಕರಾವಳಿಯ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಒಬ್ಬರಿಗೆ ತಲಾ ರೂಪಾಯಿ 4500/- ವೆಚ್ಚದಲ್ಲಿ ಮಂಗಳೂರು ಪ್ರದೇಶವನ್ನು ಆಕಾಶ ಮಾರ್ಗದಲ್ಲಿ ಹೆಲಿಕಾಪ್ಟರ್  ಮೂಲಕ ಸುತ್ತ ಹಾಕಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನ ತುಂಬಿ ಹೆಲಿಟೂರಿಸಂ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೆಲಿಕಾಪ್ಟರ್ ಮೂಲಕ ಡಿಸೆಂಬರ್ 21ರಿಂದ 31ರವರೆಗೆ ಮೇರಿಹಿಲ್ ಹೆಲಿಪ್ಯಾಡ್ ಮೂಲಕ ಒಂದು ಬಾರಿ ಆರು ಮಂದಿ ಪ್ರಯಾಣಿಸಲು ಸಾಧ್ಯವಿರುವ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಬಹುದಾಗಿದೆ. ಈ ಕಾಪ್ಟರ್  ಮಂಗಳೂರು ಆಸುಪಾಸಿನಲ್ಲಿ ಸುಮಾರು 5ರಿಂದ 7ನಿಮಿಷಗಳ ಒಳಗೆ ಆಕಾಶದಲ್ಲಿ ಒಂದು ಪ್ರದಕ್ಷಿಣೆ ಬಂದು ಮೇರಿ ಹಿಲ್ ಗೆ ಮರಳುತ್ತದೆ.

ಮಂಗಳೂರನ್ನು ಪಕ್ಷಿ ನೋಟದಲ್ಲಿ ನೋಡುವ ಅವಕಾಶ…… ಈ ಬಾರಿಯ ಕರಾವಳಿ ಉತ್ಸವದ ವಿಶೇಷ ಆಕರ್ಷಣೆಯಾಗಿ ಮತ್ತು ಹೆಲಿಟೂರಿಸಂ ಅನ್ನು ಮಂಗಳೂರು ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮೇರಿಹಿಲ್ ಹೆಲಿಪ್ಯಾಡ್ ನಿಂದ ಇಂದು ಸಂಜೆ ಪ್ರಾಯೋಗಿಕವಾಗಿ ಪತ್ರಕರ್ತರ ಒಂದು ತಂಡ ಕ್ಯಾಪ್ಟನ್ ವಿ.ಎಸ್. ಮಲಿಕ್ ರ ನೇತೃತ್ವದಲ್ಲಿ ತುಂಬಿ ಹೆಲಿಟೂರಿಸಂ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೆಲಿಕಾಪ್ಟರ್ ಮೂಲಕ ಒಂದು ಸುತ್ತು ನಗರ ಪ್ರದಕ್ಷಿಣೆ ಮಾಡಿದೆ.  ಮೂರು ನಿಮಿಷದಲ್ಲಿ ಮೇರಿ ಹಿಲ್ ಪಣಂಬೂರು, ಮಹಾನಗರ ಪಾಲಿಕೆ, ಪಂಪ್ ವೆಲ್ ನೇತ್ರಾವತಿ ನದಿ ಕಿನಾರೆಯ ಮೂಲಕ ಮರಳಿದೆ. ಮಂಗಳೂರು ನಗರವನ್ನು ಪಕ್ಷಿ ನೋಟದಿಂದ ನೋಡಿದಂತಾಗಿದೆ.

You may also like

News

MLC ಐವನ್ ಡಿಸೋಜ ಹಾಗೂ ಕಥೊಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರಿಂದ ಬಿಷಪ್ಸ್ ಹೌಸ್ ನಲ್ಲಿ ಪೋಪ್ ರವರಿಗೆ ಅಂತಿಮ ನಮನ

ಕ್ರಿಶ್ಚಿಯನ್ನರ ಪರಮೋಚ್ಚ ಜಗದ್ಗುರು ಪೋಪ್ ಫ್ರಾನ್ಸಿಸ್ ರವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಂದು ಎಪ್ರಿಲ್ 21ರಂದು ಸೋಮವಾರ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್
News

ಜಗದ್ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

ಲ್ಯಾಟಿನ್ ಅಮೆರಿಕದ ಮೊದಲ ಪೋಪ್ ಮತ್ತು ಆಧುನಿಕ ರೋಮನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಪರಿವರ್ತನಾಶೀಲ ವ್ಯಕ್ತಿಯಾಗಿದ್ದ ಜಗದ್ಗುರು ಪೋಪ್ ಫ್ರಾನ್ಸಿಸ್ ಇಂದು ಏಪ್ರಿಲ್ 21ರಂದು ಸೋಮವಾರ ತಮ್ಮ 88

You cannot copy content of this page