ಬೆಟ್ಟಂಪಾಡಿ ನೂರಾನಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕುಟುಂಬ ಸಮ್ಮಿಲನ
ಪುತ್ತೂರು : ಬೆಟ್ಟಂಪಾಡಿಯ ನೂರಾನಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮವು ತಲಪಾಡಿಯ ಅರಾ ಔಸ್ ನಲ್ಲಿ ಡಿಸೆಂಬರ್ 22ರಂದು ಭಾನುವಾರ ನಡೆಯಿತು.
ಟ್ರಸ್ಟ್ ನ ಅಧ್ಯಕ್ಷ ಮೂಸಲ್ ಮದನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ನಸೀಹ್ ದಾರಿಮಿ ಚೇಂಗಳ, ಕೆ.ಇ. ಅಬ್ದುಲ್ ಖಾದಿರ್ ರಝ್ವಿ ದೇರಳಕಟ್ಟೆ, ಅಬೂಬಕ್ಕರ್ ಸಅದಿ ಕುಕ್ಕಾಜೆ, ದಾವೂದ್ ಲತೀಫಿ ಕುಕ್ಕಾಜೆ – ಈಶ್ವರಮಂಗಿಲ ಉಪನ್ಯಾಸ ನೀಡಿದರು.
ಅಬ್ದುಲ್ ಖಾದರ್ ಹಾಜಿ ಅಂಕತ್ತಳ, ಸಾಹುಲ್ ಹಮೀದ್ ದಾರಿಮಿ ಮಾಡನ್ನೂರು, ಇಸ್ಮಾಯಿಲ್ ಸಅದಿ ಅಂಕತ್ತಳ, ಅಬ್ದುಲ್ ಅಝೀಝ್ ಮುಸ್ಲಿಯಾರ್ ಕಾವು, ಮೂಸಿ ಕುಂಞಿ ಹಾಜಿ ಮಾಡಾವು, ಅಬ್ದುಲ್ಲಾ ಕುಂಞಿ ಮೌಲವಿ ಕೊರಿಂಗಿಲ, ಫಾರೂಕ್ ಗೋಳಿಕಟ್ಟೆ ಹಾಗೂ ಮುಹಮ್ಮದ್ ಪಳ್ಳತ್ತಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಝಿಯಾರತ್, ಮೌಲೀದ್ ಮಜ್ಲಿಸ್, ನಸೀಹತ್, ತಹ್ಲೀಲ್ ಸಮರ್ಪಣೆ, ಹಾಗೂ ಸ್ಟೂಡೆಂಟ್ಸ್ ಪೆಸ್ಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.